ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್‌ಐಆರ್‌: ಬಂಧನ ಭೀತಿ

ಅಶ್ಲೀಲ ವಿಡಿಯೋ ಸೃಷ್ಟಿಸಿ ಲಗ್ಗೆರೆ ವಾರ್ಡ್ ಮಾಜಿ ಕಾರ್ಪೋರೇಟರ್‌ವೊಬ್ಬರ ಪತಿಗೆ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ಆರೋಪದ ಮೇರೆಗೆ ಮುನಿರತ್ನ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ. ಈ ಸಂಬಂಧ ಸೋಮವಾರ ಮುನಿರತ್ನ ಜಾಮೀನು ಕೋರಿ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

Another FIR against BJP MLA Munirathna in Bengaluru grg

ಬೆಂಗಳೂರು(ಡಿ.01):  ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನಗೆ ಮತ್ತೆ ಸಂಕಷ್ಟ ಎದುರಾಗಿದೆ. ಈಗ ಅವರ ವಿರುದ್ಧ ಮತ್ತೊಂದು ಬ್ಲ್ಯಾಕ್‌ಮೇಲ್ ಕೇಸ್ ದಾಖಲಾಗಿದ್ದು, ಬಂಧನ ಭೀತಿ ಎದುರಾಗಿದೆ. 

ಅಶ್ಲೀಲ ವಿಡಿಯೋ ಸೃಷ್ಟಿಸಿ ಲಗ್ಗೆರೆ ವಾರ್ಡ್ ಮಾಜಿ ಕಾರ್ಪೋರೇಟರ್‌ವೊಬ್ಬರ ಪತಿಗೆ ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ಆರೋಪದ ಮೇರೆಗೆ ಮುನಿರತ್ನ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಶನಿವಾರ ಎಫ್‌ಐಆರ್ ದಾಖಲಾಗಿದೆ. ಈ ಸಂಬಂಧ ಸೋಮವಾರ ಮುನಿರತ್ನ ಜಾಮೀನು ಕೋರಿ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ. 

ಜಾತಿ ನಿಂದನೆಯ ಆಡಿಯೋ ದನಿ ಮುನಿರತ್ನರದ್ದೇ: ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢ

ಏನಿದು ಆರೋಪ?: 

ಹಲವು ವರ್ಷಗಳಿಂದ ರಾಜಕೀಯದಲ್ಲಿ ನಾರಾಯಣಸ್ವಾಮಿ ಇದ್ದು, ಒಂದು ಬಾರಿ ಬಿಬಿಎಂಪಿ ಚುನಾವಣೆ ಯಲ್ಲಿ ಲಗ್ಗೆರೆ ವಾರ್ಡ್‌ನಿಂದ ಅವರ ಪತ್ನಿ ಮಂಜುಳಾ ಆಯ್ಕೆಯಾಗಿದ್ದರು. ಆರ್‌ಆ‌ರ್ ನಗರ ಕ್ಷೇತ್ರ ವ್ಯಾಪ್ತಿಗೆ ಲಗ್ಗೆರೆ ಬರಲಿದ್ದು, ರಾಜಕೀಯ ಕಾರಣಗಳಿಗೆ ಸ್ಥಳೀಯ ಶಾಸಕ ಮುನಿರತ್ನ ಅವರಿಗೆ ನಾರಾಯಣಸ್ವಾಮಿ ಎದುರಾಳಿಯಾಗಿದ್ದರು. ಈ ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ನಾರಾಯಣಸ್ವಾಮಿ ಕುಟುಂಬದವರಿಗೆ ಶಾಸಕರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. 

ಖಾಸಗಿ ಸುದ್ದಿವಾಹಿನಿ ಮುಖ್ಯಸ್ಥ ಹಾಗೂ ವರದಿಗಾರನನ್ನು ಬಳಸಿಕೊಂಡು ನಾರಾಯಣಸ್ವಾಮಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್‌ಗೆ ಮುನಿರತ್ನ ಸಂಚು ರೂಪಿಸಿದ್ದರು ಎಂದು ರೋಪಿಸಲಾಗಿದೆ.

ಬಿಜೆಪಿ ಶಾಸಕ ಮುನಿರತ್ನರಿಂದ ಜಾತಿ ನಿಂದನೆ ನಿಜ: ಕೋರ್ಟ್‌ಗೆ ಜಾರ್ಜ್‌ಶೀಟ್‌ ಸಲ್ಲಿಸಿದ ಎಸ್‌ಐಟಿ

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ವಿರುದ್ಧದ ಜಾತಿ ನಿಂದನೆ ಪ್ರಕರಣದ ತನಿಖೆ ಪೂರ್ಣಗೊಳಿಸಿ ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ದೋಷಾರೋಪ ಪಟ್ಟಿಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಶನಿವಾರ ಸಲ್ಲಿಸಿದೆ. 

ತಮಗೆ ಜಾತಿ ನಿಂದನೆ ಮಾಡಿ ಬೆದರಿಸಿದ್ದಾರೆ ಎಂದು ಆರೋಪಿಸಿ ಮುನಿರತ್ನ ವಿರುದ್ದ ವೈಯಾಲಿಕಾವಲ್‌ ಠಾಣೆಗೆ ಲಕ್ಷ್ಮೀದೇವಿ ನಗರ ವಾರ್ಡ್‌ನ ಮಾಜಿ ಕಾರ್ಪೋರೇಟರ್ ವೇಲು ದೂರು ನೀಡಿದರು. 'ಸಾರ್ವಜನಿಕವಾಗಿ ಜಾತಿನಿಂದನೆ ಮಾಡಿ ಸಾಕ್ಷಿದಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿರುವ ಹಾಗೂ ಜಾತಿಗಳ ನಡುವೆ ವೈಷಮ್ಯವನ್ನುಂಟು ಮಾಡಿರುವ ಆರೋಪ ತನಿಖೆಯಲ್ಲಿ ಸಾಬೀತಾಗಿದೆ' ಎಂದು ಎಸ್‌ಐಟಿ ಹೇಳಿದೆ. 

ಬಿಜೆಪಿ ಶಾಸಕಗೆ ಏಡ್ಸ್‌ ಹಬ್ಬಿಸಲೆತ್ನ: ಮುನಿರತ್ನ ಆಪ್ತ ಇನ್ಸ್‌ಪೆಕ್ಟರ್‌ ಬಂಧನ

ಮುನಿರತ್ನ ವಿರುದ್ಧ ಅತ್ಯಾಚಾರ, ಗುತ್ತಿಗೆದಾರನಿಗೆ ಬೆದರಿಕೆ ಹಾಗೂ ಮಾಜಿ ಕಾರ್ಪೋರೇಟರ್‌ಗೆ ಜಾತಿ ನಿಂದನೆ ಆರೋಪ ಸಂಬಂಧ 3 ಎಫ್‌ಐಆರ್‌ಗಳು ದಾಖಲಾಗಿದ್ದು, ಈಗ ಜಾತಿನಿಂದನೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಮುಗಿಸಿದೆ. ಇನ್ನುಳಿದ ಪ್ರಕರಣಗಳ ತನಿಖೆ ಭಾಗಶಃ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ಆರೋಪ ಪಟ್ಟಿ ಸಲ್ಲಿಕೆಯಾಗಲಿದೆ. 

90 ಪುಟ, 53 ಸಾಕ್ಷಿಗಳ ಹೇಳಿಕೆ: 

ತಮಗೆ ಜಾತಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಸೆ.13ರಂದು ವೈಯಾಲಿಕಾವಲ್ ಪೊಲೀಸ್ ಠಾಣೆಗೆ ವೇಲು ನಾಯ್ಕರ್‌ದೂರು ನೀಡಿದ್ದರು. ಈ ದೂರಿನ ಅನ್ವಯ ಮುನಿರತ್ನ ವಿರುದ್ಧಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ (ದೌರ್ಜನ್ಯ ತಡೆ) ಕಾಯಿದೆ, 1989 ಮತ್ತು ಕಲಂ 153, 153ಎ(1) (ಎ)(ಬಿ), 504, 509 2.2.4. ರಡಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ಮುನಿರತ್ನ ವಿರುದ್ದ ಪ್ರಕರಣಗಳ ತನಿಖೆಗೆ ಎಸ್‌ಐಟಿಯನ್ನು ಸರ್ಕಾರವು ರಚಿಸಿತು. ಅಂತೆಯೇ ತನಿಖೆಗಿಳಿದ ಎಸ್‌ಐಟಿ, ಜಾತಿ ನಿಂದನೆ ಪ್ರಕರಣದ ತನಿಖೆ ಮುಗಿಸಿ ಜನಪ್ರತಿನಿಧಿಗಳ ನ್ಯಾಯಾಲ ಯಕ್ಕೆ 590 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ. ಇದರಲ್ಲಿ 53 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿದೆ. ಈ ಸಾಕ್ಷಿಗಳ ಪೈಕಿ ಮೂವರು ಪ್ರತ್ಯಕ್ಷದರ್ಶಿಗಳು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ ಎಂದು ಎಸ್‌ಐಟಿ ತಿಳಿಸಿದೆ. 

Latest Videos
Follow Us:
Download App:
  • android
  • ios