ಕೆಆರ್‌ಪಿಪಿ ಬಾಗಿಲಿಗೆ ಕಾಂಗ್ರೆಸ್, ಬಿಜೆಪಿ ಸದಸ್ಯರು: ನಗರಸಭೆ ತೆಕ್ಕೆಗೆ ತೆಗೆದುಕೊಳ್ಳಲು ರೆಡ್ಡಿ ಪ್ಲಾನ್!
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಾಗಿಲಿಗೆ ಗಂಗಾವತಿ ನಗರಸಭೆಯ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ನಿಂತಿದ್ದು.ಇನ್ನೂ 2-3ದಿನಗಳಲ್ಲಿ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೆಲ ಮುಖಂಡರು ಸೇರ್ಪಡೆಯಾಗಿದ್ದು, ಇನ್ನೂ16ಕ್ಕೂ ಹೆಚ್ಚು ಸದಸ್ಯರನ್ನು ಸೆಳೆಯಲು ಕೆಆರ್‌ಪಿಪಿ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ರಾಮಮೂರ್ತಿ ನವಲಿ
ಗಂಗಾವತಿ (ಏ.15) ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಾಗಿಲಿಗೆ ಗಂಗಾವತಿ ನಗರಸಭೆಯ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ನಿಂತಿದ್ದು.ಇನ್ನೂ 2-3ದಿನಗಳಲ್ಲಿ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೆಲ ಮುಖಂಡರು ಸೇರ್ಪಡೆಯಾಗಿದ್ದು, ಇನ್ನೂ16ಕ್ಕೂ ಹೆಚ್ಚು ಸದಸ್ಯರನ್ನು ಸೆಳೆಯಲು ಕೆಆರ್‌ಪಿಪಿ ನಾಯಕರು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ಸದಸ್ಯರಿಗೆ ಆಮಿಷ
ಗಂಗಾವತಿ ನಗರಸಭೆಯನ್ನು ಕೆಆರ್‌ಪಿಪಿ ತನ್ನ ಹತೋಟಿಗೆ ತೆಗೆದುಕೊಳ್ಳಲು ಕಳೆದ ಎರಡು ತಿಂಗಳ ಹಿಂದೆ ಯೋಜನೆ ರೂಪಿಸಿತ್ತು. ಇದಕ್ಕೆ ಪೂರಕವಾಗುವಂತೆ ಕಳೆದ 20 ದಿನಗಳ ಹಿಂದೆ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಜನಾರ್ದನರೆಡ್ಡಿ(Gali janardanareddy) ಅವರು ನಗರಸಭೆಗೆ ತೆರಳಿ ಉಪಾಧ್ಯಕ್ಷೆಯ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದ ನಿದರ್ಶನ ಇದೆ.
ನಮ್ಮ ಪಕ್ಷದ ಬೆಂಬಲವಿಲ್ಲದೇ ಯಾವುದೇ ಪಕ್ಷ ಸರ್ಕಾರ ರಚನೆ ಅಸಾಧ್ಯ ಜನಾರ್ದನ ರೆಡ್ಡಿ
ಈಗ ವಿಧಾನಸಭೆ ಚುನಾವಣೆ(Karnataka assembly election) ಸಮೀಪಿಸುತ್ತಿರುವ ಹಿನ್ನೆಲೆ ಹೇಗಾದರೂ ಮಾಡಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರನ್ನು ಸೆಳೆಯುವ ಕಾರ್ಯ ತೆರೆಮರೆಯಲ್ಲಿ ನಡೆದಿದೆ ಎನ್ನಲಾಗಿದೆ. ಜನಾರ್ದನರೆಡ್ಡಿ ಸದಸ್ಯರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಿ ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನ ಸೇರಿದಂತೆ ಇನ್ನಿತರ ಆಮಿಷ, ಅಧಿಕಾರ ಸೇರಿ ವಿಚಾರಗಳ ಬಗ್ಗೆ ಸುದೀಘರ್ವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಪಕ್ಷದ ಮುಖಂಡರಿಗೆ ಕಾಣದ ಸದಸ್ಯರು:
ಕೆಆರ್‌ಪಿ ಪಕ್ಷಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್ ಸದಸ್ಯರು ಸೇರ್ಪಡೆಯಾಗುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಪಕ್ಷದ ಮುಖಂಡರು ಸದಸ್ಯರನ್ನು ವಾಪಸ್ ಕರೆ ತರುವುದಕ್ಕಾಗಿ ಕಸರತ್ತು ನಡೆಸಿದ್ದಾರೆ. ಆದರೆ ಈಗಾಗಲೇ ರೆಡ್ಡಿ ಜತೆ ಮಾತುಕತೆ ನಡೆಸಿದ್ದ ಸದಸ್ಯರು ಇಲ್ಲಿಯವರೆಗೆ ಪಕ್ಷದ ಮುಖಂಡರಿಗೆ ಕಾಣದೆ ಗೌಪ್ಯ ಸ್ಥಳದಲ್ಲಿದ್ದಾರೆ ಎನ್ನಲಾಗಿದೆ.
ಏ.16 ರಂದು ಸೇಪರ್ಡೆ:
ಕನಕಗಿರಿ ರಸ್ತೆಯ ಕೆಆರ್‌ಪಿಪಿ ಕಚೇರಿಯಲ್ಲಿ ಏ. 16ರಂದು ಕಾಂಗ್ರೆಸ್ ಮತ್ತು ಬಿಜೆಪಿಯ 16 ಸದಸ್ಯರು ಸೇರ್ಪಡೆಯಾಗಲಿದ್ದಾರೆ ಅಂದು ರೆಡ್ಡಿ ಸದಸ್ಯರನ್ನು ಸ್ವಾಗತಿಸಲಿದ್ದಾರೆ. ಬಳಿಕ ಏ.18ರಂದು ನಾಮಪತ್ರ ಸಲ್ಲಿಸುವುದು ಬಹುತೇಕ ಖಚಿತವಾಗಿದೆ. ಇನ್ನೂ 2 ದಿನಗಳಲ್ಲಿ ನಗರಸಭೆಯ ಆಡಳಿತಕ್ಕೆ ರಾಜಕೀಯ ಹೊಸ ತಿರುವು ಪಡೆಯಲಿದೆ.
Karnataka election: ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ ಜನಾರ್ದನರೆಡ್ಡಿ
ನಗರಸಭೆ ಬಿಜೆಪಿಯ 8 ಸದಸ್ಯರು ಕೆಆರ್‌ಪಿ ಪಕ್ಷ ಸೇಪರ್ಡೆಗೆ ನಿರ್ಧರಿಸಲಾಗಿದೆ. ಹೊಸ ಅಧ್ಯಕ್ಷರ ಆಯ್ಕೆ ಮಾಡುವುದಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇನ್ನು 2 ದಿನಗಳಲ್ಲಿ ಪಕ್ಷ ಸೇಪರ್ಡೆಯಾಗಲಿದ್ದೇವೆ
ಹೆಸರು ಹೇಳದೇ ಇಚ್ಛಿಸದ ಬಿಜೆಪಿ ನಗರಸಭೆ ಸದಸ್ಯ
ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಇದ್ದು, ಹೊಸ ಅಭ್ಯರ್ಥಿ ಆಯ್ಕೆ ಮಾಡುವ ನಿರ್ಧಾರ ಕೈಗೊಂಡಿದ್ದೇನೆ. ಗಂಗಾವತಿ ನಗರದ ಅಭಿವೃದ್ಧಿ ದೃಷ್ಟಿಯಿಂದ ಕೆಆರ್‌ಪಿ ಪಕ್ಷ ಸೇರಲಿದ್ದೇನೆ.
ಕಾಂಗ್ರೆಸ್ ನಗರಸಭೆ ಸದಸ್ಯ