Asianet Suvarna News Asianet Suvarna News

ಕ್ಷಮಿಸಿ, ನಡೆದಿದ್ದು ಉದ್ಘಾಟನೆಯಲ್ಲ.. ಕುರುಕ್ಷೇತ್ರ ಕಥನಾವಳಿ!

 ಕೋಲಾರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಬಿಗ್ ಫೈಟ್ ನಡೆದಿದ್ದು, ಸಚಿವ-ಸಂಸದರ ಎದುರೇ ಹೈಡ್ರಾಮಾ ನಡೆದಿದೆ. ಬಂಗಾರಪೇಟೆ ಪುರಸಭೆ ಕಟ್ಟಡ ಉದ್ಘಾಟನೆ ವೇಳೆ ಸಚಿವರು ಹಾಗೂ ಸಂಸದರ ಎದುರೇ ಮಾತಿನ ಜಟಾಪಟಿ.

Congress and BJP Leaders Big Fight in Kolar Bangarpete MP Muniswami muniratna mtb nagaraj san
Author
Bengaluru, First Published Apr 11, 2022, 11:41 PM IST

ಕೋಲಾರ (ಏ.11): ಅದು ಸರ್ಕಾರಿ ಕಾರ್ಯಕ್ರಮವಾದರೂ ಅದು ಯಾವ ಮಹಾಭಾರತ ಯುದ್ದಕ್ಕೇನು ಕಡಿಮೆ ಇರಲಿಲ್ಲ, ವೇದಿಕೆ ಮೇಲಿದ್ದ ನಾಯಕರು ಗಳು ಡೈಲಾಗ್​ ಮೇಲೆ ಡೈಲಾಗ್ ಹೊಡೆಯುತ್ತಿದ್ರೆ, ಎದುರಿಗಿದ್ದ ಕಾರ್ಯಕರ್ತರು ಜೈಕಾರ, ಜಯಘೋಷಗಳನ್ನು ಕೂಗುತ್ತಾ ತಮ್ಮ ನಾಯಕರನ್ನು ಹುರಿದುಂಬಿಸುತ್ತಿದ್ರು, ಅಷ್ಟಕ್ಕೂ ಅಲ್ಲಿ ಏನಾಯ್ತು ಹೇಗಿದು ಮಹಾಭಾರತ ವೇದಿಕೆ ಇಲ್ಲಿದೆ ಒಂದು ವರದಿ..

ಮೈಕ್​ ಹಿಡಿದುಕೊಂಡು ವೇದಿಕೆ ಮೇಲಿರುವ ನಾಯಕರುಗಳು ಕಾರ್ಯಕರ್ತರನ್ನು ಸಮಾದಾನ ಪಡಿಸಲು ಮಾಡುತ್ತಿರುವ ಹರಸಾಹಸ, ವೇದಿಕೆ ಮುಂಬಾಗದಲ್ಲಿ ತಮ್ಮ ನಾಯಕರನ್ನು ಹುರಿದುಂಬಿಸುತ್ತಿರುವ ಕಾರ್ಯಕರ್ತರು, ತಮ್ಮ ಭಾಷಣದಲ್ಲಿ ನಾಯಕರುಗಳ ಡೈಲಾಗ್​ ಮೇಲೆ ಡೈಲಾಗ್​, ಒಂದೆಡೆ ಮೋದಿ ಮೋದಿ (Modi) ಎಂದು ಬಿಜೆಪಿ ಕಾರ್ಯಕರ್ತರ ಜಯ ಘೋಷ, ಎಸ್​.ಎನ್​.- ಎಸ್​.ಎನ್​  ( ಎಂದು ಬಂಗಾರಪೇಟೆ ಕಾಂಗ್ರೆಸ್​ ಶಾಸಕರ ಬೆಂಬಲಿಗರು ಕೂಗು ಇದೆಲ್ಲಾ ಕಂಡು ಬಂದಿದ್ದು ಕೋಲಾರ(Kolar) ಜಿಲ್ಲೆ ಬಂಗಾರಪೇಟೆ (Bangarapete) ಪಟ್ಟಣದಲ್ಲಿ. 

ಇವತ್ತು ಬಂಗಾರಪೇಟೆ ಪಟ್ಟಣ ದಲ್ಲಿ ನೂತನ ಪುರಸಭೆ ಕಟ್ಟದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ಮೊದಲು ಫೆಬ್ರವರಿ-2 ರಂದು ನಿಗದಿ ಮಾಡಿದ್ದ ಕಾರ್ಯಕ್ರಮವನ್ನು ಸಚಿವ ಎಂ.ಟಿ.ಬಿ ನಾಗರಾಜ್​ ರದ್ದುಗೊಳಿಸಿದ್ದರು ಪರಿಣಾಮ ಅಂದು ಶಾಸಕ ಎಸ್​.ನಾರಾಯಣಸ್ವಾಮಿ ಸರ್ಕಾರದ ಆದೇಶ ಮೀರಿ ಗಾಂಧಿ ಹಾಗೂ ಅಂಬೇಡ್ಕರ್​ ಪೋಟೋವಿಟ್ಟು ಪೊಲೀಸ್​ ಬಂದೋಬಸ್ತ್​ ಮೀರಿ ಉದ್ಘಾಟನೆ ಮಾಡಿದ್ದರು, ಆದರೆ ಇಂದು ಸರ್ಕಾರದಿಂದ ಅಧಿಕೃತವಾಗಿ ಕಟ್ಟಡದ ಉದ್ಘಾಟನೆ ಆಯೋಜನೆ ಮಾಡಿತ್ತು, 12 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮಕ್ಕೆ ಮೊದಲೇ ಶಾಸಕ ನಾರಾಯಣ ಸ್ವಾಮಿ ತಮ್ಮ ಕಾರ್ಯಕರ್ತರನ್ನು ವೇದಿಕೆ ಮುಂಭಾಗದಲ್ಲಿ ಕಾಂಗ್ರೇಸ್​ ಶಾಲು ಹಾಕಿ ಎಲ್ಲಾ ಸೀಟುಗಳಲ್ಲೂ ಕೂರಿಸಿದ್ದರು, ಇನ್ನು 1.00 ಗಂಟೆ  ಸುಮಾರಿಗೆ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜ್​,ಉಸ್ತುವಾರಿ ಸಚಿವ ಮುನಿರತ್ನ,ಸಂಸದ ಮುನಿಸ್ವಾಮಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ವೇದಿಕೆ ಮುಂಭಾಗದಲ್ಲಿ ಕೂರಲು ಜಾಗವಿಲ್ಲದೆ ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವಾದ ಶುರುವಾಯಿತು.

ನಾಯಕರುಗಳು ಕಾರ್ಯಕರ್ತರನ್ನು ಸಮಾದಾನ ಪಡಿಸಲು ಪ್ರಯತ್ನಿಸಿದರಾದರೂ ಸುಮಾರು ಅರ್ಧಗಂಟೆ ಕಾಲ ಹರಸಾಹಸ ಪಟ್ಟು ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು, ಒಂದೆಡೆ ಮೋದಿ ಮೋದಿ ಎಂದು ಕೂಗಿದ್ರೆ ಮತ್ತೊಂದೆಡೆ ಶಾಸಕ ಎಸ್​.ಎನ್​. ಪರವಾಗಿ ಘೋಷಣೆ ಕೂಗುತ್ತಿದ್ದರು, ನಂತರ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಕಾರ್ಯಕ್ರಮ ಆರಂಭ ಮಾಡಿ ಸ್ವಾಗತ ಭಾಷಣ ಮಾಡಿ ಉದ್ಘಾಟನೆ ಮಾಡಿ, ಭಾಷಣ ಆರಂಭ ಮಾಡಿದರು ಮೊದಲಿಗೆ ಎಂ.ಟಿ.ಬಿ ನಾಗರಾಜ್​ ತಮ್ಮ ಇಲಾಖೆ ಅನುದಾನ ಹಾಗೂ ಸಾಧನೆಗಳನ್ನು ಹೇಳುತ್ತಾ ಭಾಷಣ ಮುಗಿಸಿದರು, ನಂತರ ಭಾಷಣ ಮಾಡಿದ ಶುರು ಮಾಡಿದ ಉಸ್ತುವಾರಿ ಸಚಿವ ಮುನಿರತ್ನ, ಶಾಸಕ ನಾರಾಯಣಸ್ವಾಮಿ ಕಾಲೆಳೆದರು, ನೀವು ಮೊದಲೇ ನಿಮ್ಮ ಕಾರ್ಯಕರ್ತರನ್ನು ಹಿಂದ ಕೂರಿಸಿದಕ್ಕೆ ನಮ್ಮವರಿಗೆ ಮುಂದೆ ಜಾಗ ಸಿಗುವಂತಾಯ್ತು, ಬರುವ ಚುನಾವಣೆಯಲ್ಲಿ ಶಾಸಕ ನಾರಾಯಣಸ್ವಾಮಿಯನ್ನು ಸೋಲಿಸಲು ನಾವು ಎಷ್ಟು ಬೇಕೋ ಅಷ್ಟು ಕಷ್ಟ ಪಡ್ತೀವಿ, ಗೆಲ್ಲಿಸೋದಕ್ಕೆ ನೀವು ಎಷ್ಟು ಕಷ್ಟಪಡ್ತೀರೋ ಪಡಿ ಎಂದು ನೇರಾ ನೇರಾ ಸವಾಲು ಹಾಕಿದ್ರು.

ಸಚಿವ ಮುನಿರತ್ನ ನಂತರದಲ್ಲಿ ಭಾಷಣ ಮಾಡಿದ, ಸಂಸದ ಮುನಿಸ್ವಾಮಿ ಕೂಡಾ ಶಾಸಕ ನಾರಾಯಣಸ್ವಾಮಿ ವಿರುದ್ದ ನೇರಾ ನೇರಾ ವಾಗ್ದಾಳಿಗೆ ಇಳಿದರು, ನೀವು ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಮಾಡಿಲ್ಲ, ಬದಲಾಗಿ ಈರೀತಿ  ಜನರನ್ನ ಸೇರಿಸಿ ಗಲಾಟೆ ಮಾಡ್ತೀರಾ ಎಂದರು ಅದಕ್ಕೆ ವೇದಿಕೆ ಮುಂಭಾಗದಲ್ಲಿದ್ದ ಕಾರ್ಯಕರ್ತರು ಸಂಸದ ಮುನಿಸ್ವಾಮಿ ಭಾಷಣಕ್ಕೆ ಅಡ್ಡಿಪಡಿಸಿದರು, ವೇದಿಕೆ ಮುಂಭಾಗದಲ್ಲಿ ಜಮಾಯಿಸಿದ್ದ ಜನರು ಪರ ವಿರೋಧ ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಕೋಲಾರದಲ್ಲಿ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ: ಜಿಲ್ಲೆಯಾದ್ಯಂತ 144 ಸೆಕ್ಷನ್‌ ಜಾರಿ

ಆಗ ವೇದಿಕೆ ಮೇಲಿಂದ ಎದ್ದು ಬಂದ ಶಾಸಕ ನಾರಾಯಣಸ್ವಾಮಿ ಹಾಗೂ ವಿಧಾನಪರಿಷತ್​ ಸದಸ್ಯ ಎಂ.ಎಲ್​.ಅನಿಕುಮಾರ್​ ಸಂಸದ ಮುನಿಸ್ವಾಮಿ ವಿರುದ್ದ ವೇದಿಕೆ ಮೇಲೆ ವಾಗ್ವಾದಕ್ಕಿಳಿದ್ರು, ಎಷ್ಟೇ ಪ್ರಯತ್ನ ಪಟ್ಟರೂ ಕೂಡಾ ಗಲಾಟೆ ನಿಲ್ಲಿಸಲಿಲ್ಲ ಪರಿಣಾಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾರಾಯಣಸ್ವಾಮಿ ಅವರಿಗೆ ಭಾಷಣ ಮಾಡಲು ಅವಕಾಶ ನೀಡಲಿಲ್ಲ ಹಾಗಾಗಿ ಸಚಿವ ಮುನಿರತ್ನ, ಎಂ.ಟಿ.ಬಿ ನಾಗರಾಜ್​, ಸಂಸದ ಮುನಿಸ್ವಾಮಿ ಆದಿಯಾಗಿ ಎಲ್ಲಾ ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಿಂದ ನಿರ್ಗಮಿಸಿದರು, ನಂತರ ಶಾಸಕ ನಾರಾಯಣಸ್ವಾಮಿ ಮೈಕ್​ ಹಿಡಿದು ಸಂಸದ ಮುನಿಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದರು.

Kolar: ಶ್ರೀರಾಮ ಶೋಭಾಯಾತ್ರೆಯ ಮೇಲೆ ಕಲ್ಲು ತೂರಾಟ: ಬೈಕ್‌ಗೆ ಬೆಂಕಿ

ಒಟ್ಟಾರೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಎಲ್ಲಾ ನಾಯಕರುಗಳು ಜನರ ವಿಶ್ವಾಸ ಗಳಿಸೋದಕ್ಕೆ ಹಾತೊರೆಯುತ್ತಾರೆ ಅದೇ ರೀತಿ ಇಂದು ಬಂಗಾರಪೇಟೆ ಪುರಸಭೆ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಕೂಡಾ ನಾಯಕರುಗಳ ನಡುವಿನ ವಾದ ಪ್ರತಿವಾದ ಪರಸ್ಪರ ಮಾತಿನ ಸಮರಕ್ಕೆ ವೇದಿಕೆ ಮಾಡಿಕೊಟ್ಟರೆ, ಕಾರ್ಯಕರ್ತರು ಹಾಗೂ ಸೇರಿದ್ದ ಜನರಿಗೆ ನಾಯಕರುಗಳ ಡೈಲಾಗ್​ಗಳನ್ನು ಕೇಳಿ ಮಹಾಭಾರತದ ಕುರುಕ್ಷೇತ್ರ ಪ್ರಸಂಗವನ್ನೇ ನೋಡಿದಂತಾಗಿದ್ದು ಮಾತ್ರ ಸುಳ್ಳಲ್ಲ..

Follow Us:
Download App:
  • android
  • ios