ಲಕ್ನೋ[ಫೆ.12]: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಲಾಂಗ್ರೆಸ್ ಪಕ್ಷವು ತನ್ನ ಅತಿ ದೊಡ್ಡ ಚುನಾವಣಾ ಅಸ್ತ್ರವನ್ನು ಪ್ರಯೋಗಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಪ್ರಿಯಾಂಕಾ ಗಾಂಧಿ ವಾದ್ರಾ ಈಗ ಚುನಾವಣಾ ಕಣಕ್ಕಿಳಿದಿದ್ದು, ಉತ್ತರ ಪ್ರದೇಶದ ಜವಾಬ್ದಾರಿಯನ್ನು ವಿಶೇಷವಾಗಿ ವಹಿಸಿಕೊಂಡಿದ್ದಾರೆ. 80 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಈಗಾಗಲೇ ಚುನಾವಣಾ ಕಣ ರಮಗೇರಿದ್ದು, ಇಲ್ಲಿ ಪ್ರಮುಖವಾಗಿ 3 ಪಕ್ಷಗಳ ನಡುವೆ ಸ್ಪರ್ಧೆ ನಡೆಯಲಿದೆ. ಒಂದೆಡೆ ಪ್ರಿಯಾಂಕಾ ಗಾಂಧಿ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಸ್ಪರ್ಧಿಸಿದರೆ, ಮತ್ತೊಂದೆಡೆ ಮಾಯಾ, ಅಖಿಲೇಶ್ ನೇತೃತ್ವದ ಎಸ್‌ಪಿ ಹಾಗೂ ಬಿಎಸ್‌ಪಿ ಪಕ್ಷಗಳ ಮೈತ್ರಿ ಸ್ಪರ್ಧಿಸಲಿದೆ. ಇನ್ನು ಇವರೆಲ್ಲರಿಗೆ ಟಕ್ಕರ್ ನೀಡಲು ಈ ಹಿಂದೆ ಬಹುಮತ ಪಡೆದು ಅಧಿಕಾರಕ್ಕೇರಿದ್ದ ಯೋಗಿ ಹಾಗೂ ಮೋದಿ ಸ್ಪರ್ಧೆಗಿಳಿಯಲಿದೆ. 

ಅಖಾಡಕ್ಕೆ ಪ್ರಿಯಾಂಕಾ ಪ್ರವೇಶ: ಲಖನೌದಲ್ಲಿ 25 ಕಿ.ಮೀ. ಭರ್ಜರಿ ರೋಡ್‌ ಶೋ

ಹೀಗಿರುವಾಗ ಪ್ರಿಯಾಂಕಾ ಗಾಂಧಿ ಚುನಾವಣಾ ಕಣಕ್ಕೆ ಪ್ರಿಯಾಂಕಾ ಗಾಂಧಿ ಎಂಟ್ರಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬಂದಂತಾಗಿದೆ. ಇದಕ್ಕೆ ತಕ್ಕಂತೆ ನಿನ್ನೆ ಫೆ. 12 ರಂದು ಲಕ್ನೋದಲ್ಲಿ ರೋಡ್‌ ಶೋ ಬಳಿಕ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಹಾಗೂ ಸಿಂಧಿಯಾ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವುದು ಖಚಿತ ಎಂದು ಘೋಷಿಸಿದ್ದಾರೆ. ಈ ಮೂಲಕ ತಾವು ಯುಪಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಟಗೊಳಿಸುವುದರೊಂದಿಗೆ ಸ್ವಂತ ಶ್ರಮದಿಂದ ಸರ್ಕಾರ ರಚಿಸುತ್ತೇವೆಂಬ ಸಂದೇಶ ರವಾನಿಸಿದ್ದಾರೆ. 

ಇನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಪ್ರಮಾಣದ ಸಾಧನೆ ಮಾಡಿದರೆ ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಕೀಡರ್ ಆಗುವುದರಲ್ಲಿ ಅನುಮಾನವಿಲ್ಲ. ಇನ್ನು ಪ್ರಿಯಾಂಕಾ ಎಂಟ್ರಿಯಿಂದ ರಾಜಕೀಯ ಕಣದಲ್ಲಿ ಹಲವಾರು ಬದಲಾವಣೆಗಳಾಗಿದ್ದು, ಈ ಕುರಿತಾದ ಕೆಲ ಅಂಶಗಳು ಇಲ್ಲಿವೆ. 

1. ಪ್ರಿಯಾಂಕಾ ಗಾಂಧಿ ಹಾಗೂ ತಂಡವು ಶೇ. 20 ಹಾಗೂ ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ದಲಿತ ವರ್ಗದ ಜನರಿರುವ ಲೋಕಸಭಾ ಕ್ಷೇತ್ರಗಳಿಗೆ ಹೆಚ್ಚಿನ ಗಮನ ನೀಡಲು ನಿರ್ಧರಿಸಿದೆ.

2. ಉತ್ತರ ಪ್ರದೇಶದಲ್ಲಿ ಇಂತಹ ಸುಮಾರು 40 ಕ್ಷೇತ್ರಗಳಿದ್ದು, ಇವುಗಳಲ್ಲಿ 17 ಕಾಯ್ದಿರಿಸಲಾಗಿರುವ ಕ್ಷೇತ್ರಗಳಾಗಿವೆ. ಅಂದರೆ ಕಾಂಗ್ರೆಸ್ ಇಂಧಿರಾ ಗಾಂಧಿ ಸಮಯದಲ್ಲಿ ತನ್ನ ಕೈಹಿಡಿದಿದ್ದ ಸದ್ಯ ಮಾಯಾವತಿಗೆ ಸಿಗುತ್ತಿರುವ ಮತಗಳ ಮೇಲೆ ಹೆಚ್ಚಿನ ಗಮನ ವಹಿಸಲಿದೆ. 

3. ಇಷ್ಟೇ ಅಲ್ಲದೇ ಪ್ರಿಯಾಂಕಾ ಮತ್ತೊಂದು ವಿಚಾರದಲ್ಲಿ ಮಾಯಾವತಿಯನ್ನು ಹಿಂದಿಕ್ಕಿದ್ದಾರೆ. ಅವರು ಉತ್ತರ ಪ್ರದೇಶದ ಚುನಾವಣಾ ಕಣಕ್ಕಿಳಿಯುವುದಕ್ಕೂ ಮೊದಲೇ ಟ್ವಿಟರ್ ಅಕೌಂಟ್ ಮಾಡಿದ್ದಾರೆ. ಇನ್ನು ಫಾಲೋವರ್ಸ್ ವಿಚಾರದಲ್ಲಿ 24 ಗಂಟೆಗಳಲ್ಲಿ ಮಾಯಾವತಿಯನ್ನು ಹಿಂದಿಕ್ಕಿದ್ದಾರೆ.

4. ಇನ್ನು ಎಸ್‌ಪಿ ಹಾಗೂ ಬಿಎಸ್‌ಪಿಯ ಮಹಾಮೈತ್ರಿ ಘೋಷಿಸಲು ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾಯಾ ಹಾಗೂ ಖಿಲೆಶ್ ಯಾದವ್ ಕಾಂಗ್ರೆಸ್‌ನ್ನು ಆಹ್ವಾನಿಸದೆ ದೂರವಿಟ್ಟಿದ್ದರು. ಆದರೀಗ ರಾಯ್ಬರೇಲಿ ಹಾಗೂ ಅಮೇಠಿಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಇಬ್ಬರೂ ಮುಖಂಡರೂ ನಿರ್ಧರಿಸಿದ್ದಾರೆ.

'ದೇಶಕ್ಕಾಗಿ ನಾನು ಪ್ರಿಯಾಂಕಾಳನ್ನು ಬಿಟ್ಟುಕೊಟ್ಟಿದ್ದೇನೆ, ಹುಷಾರಾಗಿ ನೋಡಿಕೊಳ್ಳಿ'

5. ಸೋಮವರದಂದು ಫಿರೋಜಾಬಾದ್‌ನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಖಿಲೆಶ್ ಯಾದವ್ ಬಿಎಸ್‌ಪಿಯೊಂದಿಗೆ ನಾವು ಮೈತ್ರಿ ಮಾಡಿಕೊಂಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಈ ಮೈತ್ರಿಯಲ್ಲಿ ಕಾಂಗ್ರೆಸ್‌ ಕೂಡಾ ಇದೆ ಎಂದು ನಿಮ್ಮ ಗಮನದಲ್ಲಿರಲಿ ಎಂದಿದ್ದಾರೆ. 

6. ಪ್ರಿಯಾಂಕಾ ಗಾಂಧಿ ಕಣಕ್ಕಿಳಿದ ಬಳಿಕ ಕಾಂಗ್ರೆಸ್‌ಗೆ ಯುಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರೆ ತಪ್ಪಾಗುತ್ತದೆ. ಆದರೆ ಅಮೆರಿಕಾದ ಪ್ರಮುಖ ಪತ್ರಿಕೆಯೊಂದು ಈ ಕುರಿತಾಗಿ ವರದಿ ಮಾಡುತ್ತಾ ಪ್ರಿಯಾಂಕಾರನ್ನು ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿರುವುದರಿಂದ ಪ್ರಚಾರ ಕಾರ್ಯಗಳಿಗೆ ಹೆಚ್ಚು ಹಣ ವ್ಯಯಿಸುವ ಅಗತ್ಯವಿಲ್ಲ ಎಂದಿದೆ. 

7. ಪ್ರಿಯಾಂಕಾ ಗಾಂಧಿ ಎಂಟ್ರಿಯಿಂದ ಸವರ್ಣೀಯರ ಮತಗಳನ್ನು ಪಡೆಯುವುದು ಸುಲಭವಾಗುವ ಸಾಧ್ಯತೆಗಳಿವೆ. ಯಾಕೆಂದರೆ ಇಂಧಿರಾ ಗಾಂಧಿ ಇದ್ದಾಗ ಬ್ರಾಹ್ಮಣರ ಮೇಲೆ ಪಕ್ಷವು ಪ್ರಾಬಲ್ಯ ಹೊಂದಿತ್ತು. ಆದರೀಗ ಬಿಜೆಪಿ ಪ್ರಾಬಲ್ಯ ಹೊಮದಿದೆ. ಇನ್ನು ಮೇಲ್ವರ್ಗಕ್ಕೆ ಮೀಸಲಾತಿ ಘೋಷಿಸಿದ ಬಳಿಕ ಬಿಜೆಪಿ ಮತ್ತಷ್ಟು ಪ್ರಾಬಲ್ಯ ಪಡೆಯುವ ಸಾಧ್ಯತೆಗಳಿವೆ.

ಟ್ವಿಟರ್‌ಗೆ ಪ್ರಿಯಾಂಕಾ ಲಗ್ಗೆ: ಫಾಲೋವಿಂಗ್ ಪಟ್ಟಿಯಲ್ಲಿದ್ದಾರೆ 7 ನಾಯಕರು!

8. ಇನ್ನು ಮೋದಿ ತಮ್ಮ ಭಾಷಣದಿಂದಲೇ ಯುವಕರನ್ನು ಸೆಳೆಯುತ್ತಾರೆನ್ನಲಾಗಿದೆ. ಆದರೆ ಕಳೆದ 4 ವರ್ಷಗಳಲ್ಲಿ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇತ್ತ ಪ್ರಿಯಾಂಕಾ ತ್ಮಮ ಭಾಷಣಗಳಲ್ಲಿ ಮೋದಿಯಂತೆ ಆಕ್ರಮಣಕಾರಿಯಾಗಿ ಮಾತನಾಡದೇ ಶಾಂತತೆಯಿಂದ ಅಭಿವೃದ್ಧಿ, ಉದ್ಯೋಗ ಹಾಗೂ ಭವಿಷ್ಯದ ಮಾತುಗಳನ್ನಾಡುತ್ತಾಋಎ. ಹೀಗಿರುವವಾಗ ಈ ವಿಚಾರ ಪ್ರಿಯಾಂಕಾಗೆ ಲಾಭ ತಂದು ಕೊಡುವ ಸಾಧ್ಯತೆಗಳಿವೆ.