ಸಿಎಂ ರಾಜೀನಾಮೆ ಕೊಡಲ್ಲ, ಬೆಂಬಲಕ್ಕೆ ನಾವಿದ್ದೇವೆ: ಸಚಿವ ಪರಮೇಶ್ವರ್
ನಮ್ಮ ನಾಯಕರಾದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಮಗೆ ನಿರ್ದೇಶನ ನೀಡಿರುವುದು ನಿಜ. ನಮ್ಮ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಎಲ್ಲರೂ ನಿಲ್ಲಬೇಕು ಎಂದು ಹೇಳಿದ್ದಾರೆ. ನಾವು ಸಹ ಅವರಿಗೆ ಬೆಂಬಲವಾಗಿದ್ದೇವೆ. ಸುರ್ಜೇವಾಲಾ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ ಎಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್
ಕೊಪ್ಪಳ/ಹೊಸಪೇಟೆ(ಆ.08): ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ಆಗ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸೋಮನಾಳ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ನಾಯಕರಾದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಮಗೆ ನಿರ್ದೇಶನ ನೀಡಿರುವುದು ನಿಜ. ನಮ್ಮ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಎಲ್ಲರೂ ನಿಲ್ಲಬೇಕು ಎಂದು ಹೇಳಿದ್ದಾರೆ. ನಾವು ಸಹ ಅವರಿಗೆ ಬೆಂಬಲವಾಗಿದ್ದೇವೆ. ಸುರ್ಜೇವಾಲಾ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ ಎಂದರು.
ಪಿಎಸ್ಐ ಪರಶುರಾಮ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ; ಗೃಹ ಸಚಿವ ಪರಮೇಶ್ವರ
ರಾಜ್ಯಪಾಲರು ಖಾಸಗಿ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ನೋಟಿಸ್ ಜಾರಿ ಮಾಡಿದ್ದರಿಂದ ಮುಖ್ಯಮಂತ್ರಿ ಅವರನ್ನು ಹೊರಗಿಟ್ಟು ಸಂಪುಟ ಸಭೆ ಮಾಡಿದ್ದೇವೆ.ರಾಜ್ಯಪಾಲರು ನೀಡಿದ್ದ ನೋಟಿಸ್ ನಿಯಮಾನುಸಾರ ಇಲ್ಲ ಎಂದು ಹೇಳಿದ್ದೇವೆ. ಈಗ ಅವರು ಏನು ಮಾಡುತ್ತಾರೆ ಎನ್ನುವುದನ್ನು ಕಾದು ನೋಡುತ್ತೇವೆ ಎಂದರು.