3 ತಿಂಗ್ಳಳಲ್ಲಿ ಸಿದ್ದರಾಮಯ್ಯ ರಾಜೀನಾಮೆ: ವಿಜಯೇಂದ್ರ

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಅವರ ಪಕ್ಷದಲ್ಲಿ ಅನೇಕ ಶಾಸಕರು ಮತ್ತು ನಾಯಕರಿಗೆ ಇಷ್ಟವಿಲ್ಲ. ಒಂದು ರೀತಿಯಲ್ಲಿ ಮುಖ್ಯಮಂತ್ರಿ ವಿರುದ್ಧವೇ ಆ ಕಾಂಗ್ರೆಸ್ ಪಕ್ಷದಲ್ಲಿ ಯುದ್ಧ ಆರಂಭವಾಗಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ 

CM Siddaramaiah Resign in 3 months Says BJP State President BY Vijayendra grg

ಶಿವಮೊಗ್ಗ(ಜ.05): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ನಲ್ಲಿಯೇ ಯುದ್ಧ ನಡೆಯುತ್ತಿದೆ. ಇದು ಸಿದ್ದು ವರ್ಸಸ್ ಯುದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ ವ್ಯಂಗ್ಯವಾಡಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಅವರ ಪಕ್ಷದಲ್ಲಿ ಅನೇಕ ಶಾಸಕರು ಮತ್ತು ನಾಯಕರಿಗೆ ಇಷ್ಟವಿಲ್ಲ. ಒಂದು ರೀತಿಯಲ್ಲಿ ಮುಖ್ಯಮಂತ್ರಿ ವಿರುದ್ಧವೇ ಆ ಕಾಂಗ್ರೆಸ್ ಪಕ್ಷದಲ್ಲಿ ಯುದ್ಧ ಆರಂಭವಾಗಿದೆ ಎಂದರು. 

ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಆಪಕ್ಷದಲ್ಲಿ ಪ್ರಯತ್ನ ಆರಂಭವಾಗಿದೆ. ಅವರಿಗೆ ಸಿಎಂ ಪಟ್ಟ ಬಿಟ್ಟುಕೊಡಲು ಇಷ್ಟವಿಲ್ಲ. ಅವರದೇ ಪಕ್ಷದವರಿಗೆ ಅವರು ಮುಂದುವರೆಯಲು ಇಷ್ಟವಿಲ್ಲ. ಹೀಗಾಗಿ ಅಧಿಕಾರ ಕಳೆದುಕೊಳ್ಳುತ್ತಿರುವ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ವಿದೇಶ ಪ್ರವಾಸದಲ್ಲಿ ಇರುವ ವೇಳೆಯ ಲ್ಲಿಯೇ ಔತಣಕೂಟದ ನೆಪದಲ್ಲಿ ಕೆಲವು ಶಾಸಕ ರುಗಳ ಗುಪ್ತ ಸಭೆ ನಡೆಸಿ ತಮ್ಮ ಉಳಿವಿಗೆ ಪ್ರತಿತಂತ್ರ ರೂಪಿಸುವ ಯತ್ನ ನಡೆಸಿದ್ದಾರೆ. ಒಟ್ಟಾರೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಜಗಜ್ಜಾಹೀರಾಗಿದೆ ಎಂದು ಹೇಳಿದರು. 

ಹೈಕಮಾಂಡ್‌ಗೆ ದೂರು ನೀಡಲ್ಲ, ನಾ ಚಾಡಿಕೋರನಲ್ಲ: ಯತ್ನಾಳ್

ಸರ್ಕಾರದ ವಿರುದ್ಧ ಯಶಸ್ವಿ ಹೋರಾಟ: 

ಪಕ್ಷದ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟು ನನಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಿದ್ದು, ಆಡಳಿತ ಪಕ್ಷ ತುದಿಗಾಲಲ್ಲಿ ನಿಲ್ಲುವಂತೆ ಅದರ ಭ್ರಷ್ಟಾಚಾರ, ದುರಾಡಳಿತದ ವಿರುದ್ಧ ಹೋರಾಟಮಾಡುತ್ತಿದ್ದೇನೆ. ಮುಂದೆಯೂ ಕೂಡ ಅಧ್ಯಕ್ಷನಾಗಿ ಪಕ್ಷವನ್ನು ಸದೃಢಗೊಳಿಸಿ ಅಧಿಕಾರಕ್ಕೆ ತಂದೇ ತರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಿತೂರಿಗಳನ್ನು ಎದುರಿಸಿ ಜೀರ್ಣಿಸಿಕೊಳ್ಳುವ ಶಕ್ತಿ ಇದೆ:  ಬಿಜೆಪಿಯಲ್ಲಿನ ಬಂಡಾಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯಲ್ಲಿ ಒಂದಿಬ್ಬರ ಸಮಸ್ಯೆ ಇದೆ. ರಾಜಕೀಯ ಪಕ್ಷಗಳಲ್ಲಿ ಷಡ್ಯಂತ್ರ, ಪಿತೂರಿಗಳೆಲ್ಲವೂ ಸಹಜ, ಎಲ್ಲವನ್ನು ಜೀರ್ಣಿಸಿ ಕೊಂಡು ಪಕ್ಷ ಸಂಘಟನೆ ಮಾಡುವ ಶಕ್ತಿಯನ್ನು ಭಗವಂತ ನನಗೆ ಕೊಟ್ಟಿದಾನೆ. ಅದನ್ನು ಮಾಡುತ್ತೇನೆ ಎಂದರು. 

ನಾನು ಹೈಕಮಾಂಡ್ ಗೆ ಚಾಡಿ ಹೇಳಲು ದೆಹಲಿಗೆ ಹೋಗಿರಲಿಲ್ಲ. ಪಕ್ಷದ ಅಧ್ಯಕ್ಷನಾಗಿ ಪಕ್ಷದೊಳಗಿನ ವಿದ್ಯಮಾನಗಳನ್ನು ವರಿಷ್ಠರಿಗೆ ತಿಳಿಸಿದ್ದೇನೆ. ಎಲ್ಲವನ್ನೂ ಅವರು ಗಮನಿಸುತ್ತಿದ್ದಾರೆ. ಸದ್ಯದಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ಯತ್ನಾಳ್ ಅವರ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿದರು. ಸಚಿವರುಗಳ ರಾಜೀನಾಮೆಗೆ ಆಗ್ರಹ: ಗುತ್ತಿಗೆದಾರ ರೊಬ್ಬರ ಆತ್ಮಹತ್ಯೆಗೆ ಕಾರಣರಾದ ಆರೋಪದಲ್ಲಿ ಸಿಲುಕಿರುವ ಸಚಿವ ಪ್ರಿಯಾಂಕ ಖರ್ಗೆ ಹೆದರಿದ್ದಾರೆ. ಈ ಪ್ರಕರಣದಲ್ಲಿ ಅವರದ್ದೇ ನೇರ ಪಾತ್ರವಿದೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು. ಬಾಣಂತಿ, ಹಸುಗೂಸು ಸಾವಿನ ಪ್ರಕರಣಗಳಿಗೆ ನೈತಿಕ ಹೊಣೆಹೊತ್ತು ಸಚಿವ ದಿನೇಶ್ ಗುಂಡೂರಾವ್ ಮತ್ತು ಸಚಿವೆ ಲಕ್ಷ್ಮೀಹಬಾಳ್ಕರ್‌ ಅವರು ರಾಜೀನಾಮೆ ನೀಡಬೇಕು. ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. 

ಹೊಸವರ್ಷ ದಿನವೇ ಭಿನ್ನರ ವಿರುದ್ಧ ಶಾಗೆ ವಿಜಯೇಂದ್ರ ದೂರು

ರಾಜ್ಯದಲ್ಲಿ ಸರ್ಕಾರದ ಸಾಧನೆ ಶೂನ್ಯ: 

ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷವಾಗಿದೆ. ಅವರ ಸಾಧನೆ ಏನು ಎಂದು ಕೇಳಿದರೆ ಶೂನ್ಯ ವಷ್ಟೇ ಎಲ್ಲಿ ಯೂ ಅಭಿವೃದ್ಧಿ ನಡೆದಿಲ್ಲ. ಬಿಜೆಪಿ ಶಾಸಕರುಗಳಿಗೆ ಇರಲಿ ಕಾಂಗ್ರೆಸ್ ಶಾಸಕರಿಗೂ ಅನುದಾನವಿಲ್ಲ. ಅದರಲ್ಲೂ ಹೊಸದಾಗಿ ಆಯ್ಕೆಯಾದವರು ಜನರ ಹತ್ತಿರ ಹೋಗುವುದೇ ಕಷ್ಟವಾಗಿದೆ. ಆ ಪಕ್ಷದಿಂದಲೇ ಬೇಸರದ ಮಾತುಗಳು ಕೇಳಿಬರುತ್ತಿವೆ . ಇದಕ್ಕೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ದೂರಿದರು. ರಾಜ್ಯಸರ್ಕಾರ ಬಸ್ ದರ ಏರಿಕೆ ಮಾಡಿ ಗ್ಯಾರಂಟಿ ಯೋಜನೆಗಳ ಹೊರೆಯನ್ನು ಸರಿದೂ ಗಿಸಲು ಹೊರಟಿದೆ. ಜನರಿಗೆ ಅನ್ಯಾಯ ಮಾಡು ತ್ತಿದೆ. ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಕೆ.ಜಿ.ಕುಮಾರಸ್ವಾಮಿ, ಎಸ್. ದತ್ತಾತ್ರಿ. ಕೆ.ಬಿ.ಅಶೋಕ್ಷಾಯ್, ಮಾಲತೇಶ್, ಮೋಹನೊಡ್ಡಿ, ಗಾಯಿತ್ರಿ ಮಲ್ಲಪ್ಪ, ಮಧುರಾ ಶಿವಾ ನಂದ್, ಕೆ.ವಿ.ಅಣ್ಣಪ್ಪ, ಶಿವರಾಜ್, ಹರಿಕೃಷ್ಣ ಸೇರಿದಂತೆ ಹಲವರಿದ್ದರು.

Latest Videos
Follow Us:
Download App:
  • android
  • ios