ಮಂಡ್ಯದಲ್ಲಿ ಮಗ ಸೋತ ಬಳಿಕ ಮತ್ತೆ ಬಂದಿರುವ ಕುಮಾರಸ್ವಾಮಿಯನ್ನೂ ಸೋಲಿಸಿ ಮನೆಗೆ ಕಳುಹಿಸಿ: ಸಿಎಂ ಸಿದ್ದರಾಮಯ್ಯ
ಮಂಡ್ಯದಲ್ಲಿ ಕಳೆದ ಬಾರಿ ಕುಮಾರಸ್ವಾಮಿ ಮಗನನ್ನು ಸೋಲಿಸಿ ಕಳಿಸಿದ್ದೀರಿ. ಈಗ ಮತ್ತೆ ಕುಮಾರಸ್ವಾಮಿ ಸ್ಪರ್ಧೆಗೆ ಬಮದಿದ್ದು, ಅವರನ್ನೂ ಸೋಲಿಸಿ ಮನೆಗೆ ಕಳುಹಿಸಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯ (ಏ.17): ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಅವರ ಮಗನನ್ನ ನಿಲ್ಲಿಸಿದ್ದರು. ಆದರೆ, ಮಂಡ್ಯದಲ್ಲಿ ಸುಮಲತಾ ವಿರುದ್ಧ ಅವರ ಮಗ ಸೋತರು. ಈಗ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಿದ್ದಾರೆ. ಅವರನ್ನ ಸೋಲಿಸಿ ಮನೆಗೆ ಕಳುಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮಂಡ್ಯದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಇದೇ ಏ.26ಕ್ಕೆ ಮೊದಲ ಹಂತದ ಚುನಾವಣೆ ರಾಜ್ಯದಲ್ಲಿ ನಡೆಯಲಿದೆ. ನಮಗೆ ಮಾಹಿತಿ ಇರುವ ಪ್ರಕಾರ ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯನೋ, ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಕೂಡ ಅಷ್ಟೇ ಸತ್ಯ. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅವರ ಮಗನನ್ನ ನಿಲ್ಲಿಸಿದ್ದರು. ಆದ್ರೆ ಮಂಡ್ಯದಲ್ಲಿ ಸುಮಲತಾ ವಿರುದ್ಧ ಅವರ ಮಗ ಸೋತರು. ಈಗ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡ್ತಿದ್ದಾರೆ. ಅವರನ್ನ ಸೋಲಿಸಿ ಮನೆಗೆ ಕಳುಹಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ರಾಹುಲ್ ಗಾಂಧಿ ಕಾಲ್ಗುಣ ಶಕ್ತಿಶಾಲಿಯಾಗಿದೆ; ಪಾದಯಾತ್ರೆ ಮಾಡಿದಲ್ಲೆಲ್ಲಾ ಕಾಂಗ್ರೆಸ್ ಗೆದ್ದಿದೆ: ಡಿ.ಕೆ. ಶಿವಕುಮಾರ್
ದೇಶದಲ್ಲಿ ಮೋದಿ ಕೊಟ್ಟ ಯಾವುದೇ ಭರವಸೆ ಇಡೇರಿಸಿಲ್ಲ. 10 ವರ್ಷದಲ್ಲಿ ಯಾವುದೇ ಭರವಸೆ ಇಡೇರಿಸಿಲ್ಲ. ತೈಲ ಬೆಲೆಗಳು ಹೆಚ್ಚಾದವು, ಒಳ್ಳೆಯ ದಿನ ಬರುತ್ತೆ ಅಂದ್ರು ಇಲ್ಲಿವರೆಗೂ ಬರಲಿಲ್ಲ. ರೈತರ ಸಾಲಮನ್ನ ಮಾಡಲಿಲ್ಲ, ಅಭಿವೃದ್ಧಿ ಕೆಲಸ ಮಾಡಲಿಲ್ಲ. ಜನರಿಗೆ ಶಕ್ತಿ ತುಂಬಲು 5 ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಇವರು ಜಾತಿ, ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ಬೆಂಕಿ ಇಡುವ ಕೆಲಸ ಮಾಡ್ತಿದ್ದಾರೆ. ಯಾರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ, ಯಾರು ನಡೆದುಕೊಂಡಿಲ್ಲ ಅಂತ ನೋಡಿ. ಕೊಟ್ಟ ಮಾತಿನಂತೆ ನಡೆದುಕೊಂಡಿವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ 27 ಸಂಸದರು ಒಂದು ದಿನವು ಮಾತನಾಡಿಲ್ಲ. ನಾವು ಮಂಡ್ಯ ಸಕ್ಕರೆ ಕಾರ್ಖಾನೆಗೆ 50 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಹೊಸ ಶುಗರ್ ಫ್ಯಾಕ್ಟರಿಯನ್ನ ಕಟ್ಟಲು ಕ್ರಮ ತೆಗೆದುಕೊಂಡು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೇವೆ. ಈಗ ಕಾರ್ಖಾನೆ ಇರುವ ಜಾಗದಲ್ಲೇ ನಿರ್ಮಾಣ ಮಾಡುತ್ತೇವೆ. ಮಂಡ್ಯದಲ್ಲಿ ಒಂದು ಕೃಷಿ ಕಾಲೇಜು ಮಾಡಬೇಕು ಎಂದು ಚೆಲುವರಾಯಸ್ವಾಮಿ ಹೇಳಿದ್ದರು. ಒಂದು ತಜ್ಞರ ನಿಯೋಜನೆ ಮಾಡಿ ಕೃಷಿ ಕಾಲೇಜು ನಿರ್ಮಾಣ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಡಿಕೆಶಿ 9 ವರ್ಷದ ಹೆಣ್ಣು ಮಗು ಕಿಡ್ನಾಪ್ ಮಾಡಿ ಅವರಪ್ಪನ ಆಸ್ತಿ ಬರೆಸಿಕ ...
ಎಲೆಕ್ಷನ್ ಬಾಂಡ್ ಬಗ್ಗೆ ಮಾತನಾಡುವಾಗ ಮೋದಿ ಕೈ ನಡುಗುತ್ತಿತ್ತು:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ಮೋದಿ ಮೊನ್ನೆ ಸಂದರ್ಶನ ನೀಡಿದ್ದರು. ಅದರಲ್ಲಿ ಎಲೆಕ್ಟ್ರೋರಲ್ ಬಾಂಡ್ ಬಗ್ಗೆ ಮಾತನಾಡಿದ್ದಾರೆ. ಆ ಸಂದರ್ಶನ ಒಮ್ಮೆ ನೋಡಿ. ಎಲೆಕ್ಷನ್ ಬಾಂಡ್ ಬಗ್ಗೆ ಮಾತನಾಡುವಾಗ ಅವರ ಕೈ ನಡಗುತಿತ್ತು. ಎಲೆಕ್ಷನ್ ಬಾಂಡ್ ನಲ್ಲಿ ದೊಡ್ಡ ಹಗರಣ ನಡೆದಿದೆ. ಎಲೆಕ್ಷನ್ ಬಾಂಡ್ ಯಾರಿಗೆ ಹಣ ಕೊಡಲಾಗಿದೆ? ಯಾರಿಂದ ಕೊಡಲಿದೆ ಎಲ್ಲವೂ ನಿಗೂಢವಾಗಿದೆ. ಎಲೆಕ್ಷನ್ ಬಾಂಡ್ ಬಗ್ಗೆ ಬಹಿರಂಗವಾಗಿ ಸಾರ್ವಜನಿಕರಿಗೆ ತಿಳಿಸಬೇಕು. ಸಿಬಿಐ, ಇಡಿ ಹಾಗೂ ತೆರಿಗೆ ಇಲಾಖೆಗಳನ್ನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ವಿಶ್ವದಲ್ಲೇ ಅತ್ಯಂತ ಭ್ರಷ್ಟಾಚಾರ ಅಂದ್ರೆ ಎಲೆಕ್ಷನ್ ಬಾಂಡ್ ಹಗರಣದವಾಗಿದೆ. ಕೈಗಾರಿಕಾ ಸಂಸ್ಥೆಗಳಿಂದ ಹೆದರಿಸಿ ಬೆದರಿಸಿ ಹಣ ಸಂಗ್ರಹ ಮಾಡಲಾಗಿದೆ. ಈ ವಿಚಾರವನ್ನ ಮಾಧ್ಯಮಗಳು ನೇರವಾಗಿ ಜನರಿಗೆ ಹೇಳಲಾಗುತ್ತಿಲ್ಲ ಎಂದು ಹೇಳಿದರು.