ರಾಹುಲ್ ಗಾಂಧಿ ಕಾಲ್ಗುಣ ಶಕ್ತಿಶಾಲಿಯಾಗಿದೆ; ಪಾದಯಾತ್ರೆ ಮಾಡಿದಲ್ಲೆಲ್ಲಾ ಕಾಂಗ್ರೆಸ್ ಗೆದ್ದಿದೆ: ಡಿ.ಕೆ. ಶಿವಕುಮಾರ್

ರಾಹುಲ್‌ ಗಾಂಧಿ ಅವರ ಕಾಲ್ಗುಣ ಬಹಳ ಶಕ್ತಿಯಾಲಿಯಾಗಿದೆ. ಅವರು ಪಾದಯಾತ್ರೆ ಮಾಡಿದ ಕ್ಷೇತ್ರಗಳಲ್ಲೆಲ್ಲಾ ಕಾಂಗ್ರೆಸ್‌ ಗೆದ್ದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

Rahul Gandhi leg very powerful he wherever marched there is won Congress said DK Shivakumar sat

ಮಂಡ್ಯ (ಏ.17): ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರ ಕಾಲ್ಗುಣ ಬಹಳ ಶಕ್ತಿಯಾಲಿಯಾಗಿದೆ. ದೇಶದ ಜನರ ಸಮಸ್ಯೆಗಳನ್ನ ಕೇಳಲು ಪಾದಯಾತ್ರೆ ಮಾಡಿದ್ರು. ಅವರು ಪಾದಯಾತ್ರೆ ಮಾಡಿದ ಕ್ಷೇತ್ರಗಳಲ್ಲೆಲ್ಲಾ ಕಾಂಗ್ರೆಸ್‌ ಗೆದ್ದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಮಂಡ್ಯದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಎಷ್ಟು ಕ್ಷೇತ್ರದಲ್ಲಿ ಪಾದಯಾತ್ರೆ ಮಾಡಿದ್ರೋ ಅಷ್ಟು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಅವರ ಕಾಲ್ ಗುಣ ಬಹಳ ಶಕ್ತಿ ಶಾಲಿಯಾಗಿದೆ. ನಿಮ್ಮ ಸಮಸ್ಯೆಗಳನ್ನ ಕೇಳಲು ಪಾದಯಾತ್ರೆ ಮಾಡಿದ್ರು. ಮಂಡ್ಯ ಗೆದ್ರೆ ಇಂಡಿಯಾ ಗೆಲ್ಲುತ್ತೇನೆ ಅಂತ ಇಂದು ಇಲ್ಲಿಗೆ ಬಂದಿದ್ದಾರೆ. ನಾನು ಯಾವ ಅಭ್ಯರ್ಥಿ ಬಗ್ಗೆಯೂ ಮಾತನಾಡಲ್ಲ. ಅವರು ಮಂಡ್ಯ ಜಿಲ್ಲೆಗೆ ಏನೂ ಕೊಟ್ಟಿಲ್ಲ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದರು.

ಡಿಕೆಶಿ 9 ವರ್ಷದ ಹೆಣ್ಣು ಮಗು ಕಿಡ್ನಾಪ್ ಮಾಡಿ ಅವರಪ್ಪನ ಆಸ್ತಿ ಬರೆಸಿಕೊಂಡ ದಾಖಲೆಯಿದೆ; ಹೆಚ್.ಡಿ. ದೇವೇಗೌಡ ಆರೋಪ

ಕುಮಾರಸ್ವಾಮಿಯವರ ತಂದೆ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿ ಹಾಗೂ ಮುಖ್ಯಮಂತ್ರಿ ಆದರು. ಇನ್ನು ಬಿಜೆಪಿ ಡಬ್ಬಲ್ ಇಂಜಿನ್ ಸರ್ಕಾರ ಇದ್ದರೂ, ಮೇಕೆದಾಟು ಯೋಜನೆಗೆ ಅವಕಾಶ ಕೊಡಲಿಲ್ಲ. ನಾನು ಮಾತು ಕೊಡುತ್ತಿದ್ದೇನೆ ನಮ್ಮ ಸರ್ಕಾರದ ಅವಧಿಯಲ್ಲೆ ಮೇಕೆದಾಟು ಆರಂಭ ಮಾಡುತ್ತೇವೆ. ಇವತ್ತು ಭಾರತಕ್ಕೆ ರಾಹುಲ್ ಗಾಂಧಿ ನ್ಯಾಯ ಯಾತ್ರೆ ಮಾಡಿದ್ದಾರೆ. ಇವತ್ತು ಚಂದ್ರು ಅಲ್ಲ ಅಭ್ಯರ್ಥಿ, ಡಿಕೆಶಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅಭ್ಯರ್ಥಿ ಎಂದುಕೊಳ್ಳಿ. ನಿಮ್ಮನ್ನ ಸಿಎಂ ಮಾಡಿದ್ದು ಇದೇ ಮಂಡ್ಯ ಜನರು. ಆದ್ರೆ ಅವರ ಕಿವಿಗೆ ಹೂ ಇಡಿಲು ಬಂದಿದ್ದಿರಾ ಇವತ್ತು ಎಂದು ಪ್ರಶ್ನೆ ಮಾಡಿದರು. ರಾಹುಲ್‌ಗಾಂಧಿ ಅಭ್ಯರ್ಥಿ ಎಂದು ನೀವು ಹಳ್ಳಿ ಹಳ್ಳಿಗೂ ಹೋಗಿ ಪ್ರಚಾರ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕಿಡ್ನಾಪ್ ಹೇಳಿಕೆಗೆ ರಿಯಾಕ್ಟ್ ಮಾಡಲ್ಲ; ಡಿಸಿಎಂ ಡಿ.ಕೆ. ಶಿವಕುಮಾರ್!

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳ್ತಾನೆ ಗ್ಯಾರಂಟಿ ತಾತ್ಕಾಲಿಕ ಅಂತೆ. ನಾನು ಭವರಸೆ ಕೊಡ್ತಿದ್ದೇನೆ ಯಾವ ಯೋಜನೆಯೂ ನಿಲ್ಲೋದಿಲ್ಲ. ಮಿಸ್ಟರ್ ಯಡಿಯೂರಪ್ಪ, ಮಿಸ್ಟರ್ ವಿಜಯೇಂದ್ರ ಇದು ಕಾಂಗ್ರೆಸ್ ಶಕ್ತಿ ಇದು ಜನರ ಶಕ್ತಿ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲೋದಿಲ್ಲ. ಬೆಲೆ ಏರಿಕೆಯಿಂದ ತೊಂದರೆ ಸಿಲುಕಿರುವ ಮಹಿಳೆಯರ ರಕ್ಷಣೆ ಉದ್ದೇಶ ನಮ್ಮದಾಗಿದೆ. ಕೇವಲ‌ ಮತ ಪಡೆಯುವುದು ನಮ್ಮ ದೃಷ್ಟಿ ಅಲ್ಲ. ಕಾಂಗ್ರೆಸ್ ಅಂದ್ರೆ ಎಲ್ಲರ ಹಿತ. ಮಹಿಳೆಯರ ಪರವಾದ ನಿಲುವು ಕಾಂಗ್ರೆಸ್ ನಿಲುವು. ನಮ್ಮದು ಓಟ್ ಬ್ಯಾಂಕ್ ಅಲ್ಲ, ಬದುಕಿನ ಬ್ಯಾಂಕ್. ಕಷ್ಟದ ಮಹಿಳೆಯರಿಗೆ ಅನುಕೂಲ ಆಗೋದು ನಮ್ಮ ಉದ್ದೇಶ ಎಂದು ಹೇಳಿದರು.

Latest Videos
Follow Us:
Download App:
  • android
  • ios