ಜಾತ್ಯಾತೀತ ಹೆಸರಿಟ್ಟುಕೊಂಡು ಕೋಮುವಾದಿಗಳೊಂದಿಗೆ ಸೇರಿಕೊಂಡ ಜೆಡಿಎಸ್: ಸಿಎಂ ಸಿದ್ದರಾಮಯ್ಯ
ನಾನು ಜೆಡಿಸ್ ಅನ್ನು ಬಿಜೆಪಿಯ ಬಿ ಟೀಮ್ ಅಂತಿದ್ದೆ ಅದಕ್ಕೆ ಅವರು ಕೋಪಿಸಿಕೊಳ್ತಿದ್ರು. ಜ್ಯಾತ್ಯಾತೀತ ಹೆಸರಿಟ್ಟುಕೊಂಡು ಕೋಮುವಾದಿಗಳೊಂದಿಗೆ ಸೇರಿಕೊಂಡರು. ದೇವೇಗೌಡರು ಯಾರೊಂದಿಗೂ ಸೇರಿಕೊಳ್ಳಲ್ಲ ಅಂತ ಪಕ್ಷದ ಉಳಿವಿಗಾಗಿ ಸೇರಿಕೊಂಡಿದ್ದೇವೆ ಅಂತಾರೆ ಅಧಿಕಾರಕ್ಕಾಗಿ ಏನೆಲ್ಲಾ ಮಾಡ್ತಾರೆ ಎಂಬುದು ಇದರಲ್ಲೇ ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿ (ಸೆ.09): ನಾನು ಜೆಡಿಸ್ ಅನ್ನು ಬಿಜೆಪಿಯ ಬಿ ಟೀಮ್ ಅಂತಿದ್ದೆ ಅದಕ್ಕೆ ಅವರು ಕೋಪಿಸಿಕೊಳ್ತಿದ್ರು. ಜ್ಯಾತ್ಯಾತೀತ ಹೆಸರಿಟ್ಟುಕೊಂಡು ಕೋಮುವಾದಿಗಳೊಂದಿಗೆ ಸೇರಿಕೊಂಡರು. ದೇವೇಗೌಡರು ಯಾರೊಂದಿಗೂ ಸೇರಿಕೊಳ್ಳಲ್ಲ ಅಂತ ಪಕ್ಷದ ಉಳಿವಿಗಾಗಿ ಸೇರಿಕೊಂಡಿದ್ದೇವೆ ಅಂತಾರೆ ಅಧಿಕಾರಕ್ಕಾಗಿ ಏನೆಲ್ಲಾ ಮಾಡ್ತಾರೆ ಎಂಬುದು ಇದರಲ್ಲೇ ಗೊತ್ತಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿದ್ಯುತ್ ಸಮಸ್ಯೆ ಕುರಿತು ಉತ್ತರಿಸಿದ ಅವರು, ಆಗಸ್ಟ್ ತಿಂಗಳಲ್ಲಿ ಮಳೆ ಆಗಿಲ್ಲ. ವಿದ್ಯುತ್‌ಗಾಗಿ ರೈತರಿಗೆ ಸ್ವಲ್ಪ ತೊಂದರೆ ಆಗಿದೆ ಎಂದರು. ಜಿ20 ಶೃಂಗ ಸಭೆಗೆ ವಿರೋಧ ಪಕ್ಷ ನಾಯಕನನ್ನು ಆಹ್ವಾನಿಸದ ವಿಚಾರವಾಗಿ, ಅಧಿಕೃತವಾಗಿ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಬೇಕಿತ್ತು, ಆಹ್ವಾನಿಸಿಲ್ಲ. ಇದು ಖಂಡನಾರ್ಹ ಎಂದು ತಿಳಿಸಿದರು.
ಮಹದಾಯಿ ಕಾಮಗಾರಿ ವಿಚಾರಕ್ಕೆ ಉತ್ತರಿಸಿದ ಸಿಎಂ, ಮೊದಲು ಫಾರೆಸ್ಟ್ ಕ್ಲಿಯರೆನ್ಸ್ ಕೊಡ್ಲಿ, ನಾವು ಮಾಡ್ತೇವೆ. ಪ್ರಧಾನಿಗೆ ಪತ್ರ ಬರೆದಿದ್ವಿ ಇದುವರೆಗೂ ಸ್ಪಂದನೆ ಬಂದಿಲ್ಲ. ನಾವು ಬರಗಾಲ ಘೋಷಣೆ ಮಾಡೇ ಮಾಡ್ತೀವಿ. ಕೇಂದ್ರ ಸರ್ಕಾರದ ನೆರವು ಕೂಡ ಬರ್ಬೇಕಲ್ಲ? ಜಿ20 ಸಭೆಗೆ ಕರ್ದಿಲ್ಲ, ಕರ್ದಿದ್ರೆ ಹೋಗ್ತಿದ್ದೆ. ಕೇವಲ ಊಟಕ್ಕೆ ಕರೆದಿದ್ದು ಅಷ್ಟೆ ಎಂದರು.
ಬಿಜೆಪಿ ಕೋಮುವಾದಿ, ಮತೀಯವಾದಿ ಪಕ್ಷ: ಸಂಸದ ಬಚ್ಚೇಗೌಡ ಆರೋಪ
ರಾಷ್ಟ್ರ ರಾಜಕಾರಣಕ್ಕೆ ಹೋಗುವ ವಿಚಾರವಾಗಿ ಪ್ರಜಾಪ್ರಭುತ್ವದಲ್ಲಿ ಯಾರು ಏನಬೇಕಾದ್ರೂ ಆಗಬಹುದು. ನೇರವಾಗಿ ಗುಜರಾತ್ ಸಿಎಂ ಆಗಿ, ಪ್ರಧಾನ ಮಂತ್ರಿ ಆದ್ರೂ ಮೋದಿ. ರಾಷ್ಟ ರಾಜಕಾರಣಕ್ಕೆ ನಾನು ಹೋಗಲ್ಲ. ನಾನು ಸಮಸ್ಯೆ ಬಗ್ಗೆ ಮಾತಾಡ್ತಾನೆ. ಸುಮ್ನೆ ಟೀಕೆ ಮಾಡಲ್ಲ ಎಂದು ಸಿದ್ದರಾಮಯ್ಯ ಹೇಳಿದರು.