Asianet Suvarna News Asianet Suvarna News

ಪಂಚರಾಜ್ಯ ಚುನಾವಣೆಗೆ ಕರ್ನಾಟಕದಿಂದ ಹಣ? ಸಿಎಂ ಸಿದ್ದರಾಮಯ್ಯ ಹೇಳಿದ್ದಿಷ್ಟು

ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಗುತ್ತಿಗೆದಾರರ ಮನೆಯೊಂದರಲ್ಲಿ 42 ಕೋಟಿ ರು. ನಗದು ಪತ್ತೆಯಾಗಿರುವ ಬಗ್ಗೆ ಬಿಜೆಪಿ ಶಾಸಕರು ಮಾಡುತ್ತಿರುವ ಆರೋಪಗಳ ಬಗ್ಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

CM Siddaramaiah React to Karnataka Money for Elections grg
Author
First Published Oct 14, 2023, 8:01 AM IST

ಬೆಂಗಳೂರು(ಅ.14):  ‘ರಾಜ್ಯದ ಹಣ ಪಂಚರಾಜ್ಯಗಳ ಚುನಾವಣೆಗೆ ಬಳಕೆ ಮಾಡುತ್ತಾರೆ ಎಂಬ ಬಿಜೆಪಿ ಶಾಸಕರ ಆರೋಪ ಸಂಪೂರ್ಣ ಸುಳ್ಳು. ಅದನ್ನು ಅವರು ನೋಡಿದ್ದಾರಾ? ಅಥವಾ ನೀವು ನೋಡಿದ್ದೀರಾ? ಇಂತಹ ಸುಳ್ಳು ಆರೋಪಗಳಿಗೆ ನಾವು ಉತ್ತರ ಕೊಡಬೇಕಾಗಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಗುತ್ತಿಗೆದಾರರ ಮನೆಯೊಂದರಲ್ಲಿ 42 ಕೋಟಿ ರು. ನಗದು ಪತ್ತೆಯಾಗಿರುವ ಬಗ್ಗೆ ಬಿಜೆಪಿ ಶಾಸಕರು ಮಾಡುತ್ತಿರುವ ಆರೋಪಗಳ ಬಗ್ಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಐಟಿ ದಾಳಿಯಲ್ಲಿ ಸಿಕ್ಕಿದ್ದು ಕಮಿಷನ್‌ ಹಣ: ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಒತ್ತಾಯ

ಶಾಸಕ ಮುನಿರತ್ನ ಅವರು ಮಾಡಿರುವ ಈ ಆರೋಪದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲಾ ಆರೋಪಗಳು ಸುಳ್ಳುಗಳಿಂದ ಕೂಡಿವೆ. ಬಿಜೆಪಿ ಶಾಸಕರ ಆರೋಪಗಳು ನಿಜವಲ್ಲ ಎಂದು ಹೇಳಿದರು.

ಕೆಂಪಣ್ಣ ಜತೆ ಮಾತನಾಡುತ್ತೇನೆ:

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಆರೋಪದ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಗುತ್ತಿಗೆದಾರ ಸ್ಥಿತಿ ದಯನೀಯವಾಗಿದೆ ಎಂದು ಅವರು ಹೇಳಿರುವುದನ್ನು ನೋಡಿದ್ದೇನೆ. ಕೆಂಪಣ್ಣ ಅವರ ಜತೆ ಶನಿವಾರ ಮಾತನಾಡುತ್ತೇನೆ ಎಂದು ಹೇಳಿದರು.

Follow Us:
Download App:
  • android
  • ios