ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಸಂಜೆ ವೇಳೆ ಭೇಟಿ ನೀಡಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರುಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು. ಇವರೊಂದಿಗೆ ಪತ್ನಿ ಚೆನ್ನಮ್ಮ ಇದ್ದರು.

CM Basavaraj bommai Visit kukke subrahmanya temple at subrahmanya rav

ಸುಬ್ರಹ್ಮಣ್ಯ (ಏ.13) : ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಸಂಜೆ ವೇಳೆ ಭೇಟಿ ನೀಡಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರುಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು. ಇವರೊಂದಿಗೆ ಪತ್ನಿ ಚೆನ್ನಮ್ಮ ಇದ್ದರು.

ಬೊಮ್ಮಾಯಿ(CM Basavaraj Bommai) ಅವರಿಗೆ ಕ್ಷೇತ್ರದ ಪ್ರಧಾನ ಅರ್ಚಕ ಸೀತರಾಮ ಯಡಪಡಿತ್ತಾಯ ಶಾಲು ಹೊದೆಸಿ ದೇವರ ಪ್ರಸಾದ ನೀಡಿ ಹರಸಿದರು. ಬಳಿಕ ಸಂಪುಟ ನರಸಿಂಹ ಸ್ವಾಮಿ ದೇವರ ದರುಶನ ಪಡೆದರು. ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.

Karnataka BJP: ಕೇಂದ್ರ-ರಾಜ್ಯ ನಾಯಕರ ಒಮ್ಮತದ ಕೊರತೆ; ಬಿಜೆಪಿ ಅಭ್ಯರ್ಥಿ ಪಟ್ಟಿ ಇನ್ನೂ ಕಗ್ಗಂಟು!

ಜನರ ಸುಭೀಕ್ಷೆಗಾಗಿ ಪ್ರಾರ್ಥನೆ: ಕರಾವಳಿಯ ದೇವಸ್ಥಾನಗಳಿಗೆ ಆಗಾಗ ಬರುತ್ತಿರುತ್ತೇನೆ. ಕಟೀಲು, ಧರ್ಮಸ್ಥಳ, ಕೊಲ್ಲೂರಿಗೆ ಭೇಟಿ ನೀಡುತ್ತಿರುತ್ತೇನೆ. ಇಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದೇನೆ. ಇದೀಗ ಚುನಾವಣೆ ಬಂದಿದೆ ಆ ಹಿನ್ನೆಲೆಯಲ್ಲೂ ಭೇಟಿ ನೀಡಿ, ರಾಜ್ಯದ ಜನರ ಸುಭೀಕ್ಷೆಗೆ ಪ್ರಾರ್ಥಿಸಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.

ಇತರೆ ರಾಜಕೀಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಮಂಗಳೂರಿನತ್ತ ತೆರಳಿದರು. ಧರ್ಮಸ್ಥಳದಿಂದ ಹೆಲಿಕಾಪ್ಟರ್‌ ಮೂಲಕ ಬಿಳಿನೆಲೆಗೆ ಆಗಮಿಸಿ ಅಲ್ಲಿಂದ ಕಾರಿನಲ್ಲಿ ಕುಕ್ಕೆಗೆ ಆಗಮಿಸಿದರು. ಸಿಎಂ ಭೇಟಿ ಹಿನ್ನೆಲೆಯಲ್ಲಿ ಬಿಳಿನೆಲೆಯಿಂದ ಕುಕ್ಕೆ ಸುಬ್ರಹ್ಮಣ್ಯದವರೆಗೆ ಹೆಚ್ಚುವರಿ ಪೊಲೀಸರಿಂದ ಬಿಗಿ ಪೊಲೀಸ್‌ ಬಂದೋಬಸ್‌್ತ ಮಾಡಲಾಗಿತ್ತು.

4 ವರ್ಷದ ಹಿಂದಿನ ಹರಕೆ ಈಗ ತೀರಿಸಿದ ನಟ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಿಂಹ ಪ್ರಿಯಾ!

ಮಳೆ ಸಿಂಚನ: ಸಿಎಂ ಬೊಮ್ಮಾಯಿ ಅವರು ಕ್ಷೇತ್ರಕ್ಕೆ ಆಗಮಿಸುವ ಕೆಲ ಕ್ಷಣದ ಮೊದಲು ಮಳೆ ಆರಂಭಗೊಂಡಿದ್ದು, ಮುಖ್ಯಮಂತ್ರಿಗಳು ದೇವರ ದರುಶನ ಪಡೆದು ತೆರಳುವ ವೇಳೆಗೆ ಮಳೆ ವಿರಾಮ ನೀಡಿತ್ತು.

ದೇವಸ್ಥಾನಕ್ಕೆ ಆಗಮಿಸಿದ ಮುಖ್ಯ ಮಂತ್ರಿಗಳನ್ನು ದೇವಳದ ವತಿಯಿಂದ ಸ್ವಾಗತಿಸಿ, ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಸದಸ್ಯರಾದ ವನಜಾ ವಿ.ಭಟ್‌, ಶೋಭಾ ಗಿರಿಧರ್‌, ಮಾಸ್ಟರ್‌ಪ್ಲಾನ್‌ ಸದಸ್ಯ ಮನೋಜ್‌ ಕುಮಾರ್‌, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಸುಳ್ಯ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಸುಳ್ಯ ತಾ.ಪಂ. ಇಒ ಭವಾನಿಶಂಕರ್‌, ಕಡಬ ತಾ.ಪಂ. ಇಒ ನವೀನ್‌ ಕುಮಾರ್‌, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಫÜಕೀರ, ಡಿವೈಎಸ್ಪಿ ಡಾ. ವೀರಯ್ಯ ಹಿರೇಮಠ್‌, ವೃತ್ತ ನಿರೀಕ್ಷಕ ರವೀಂದ್ರ, ಸುಳ್ಯ ನ.ಪಂ. ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ, ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ಎ.ವಿ. ತೀರ್ಥರಾಮ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್‌ ಕಂಜಿಪಿಲಿ, ಪ್ರಮುಖರಾದ ವೆಂಕಟ್‌ ದಂಬೆಕೋಡಿ, ಸುಬೋದ್‌ ಶೆಟ್ಟಿ, ಶ್ರೀಕುಮಾರ್‌ ಬಿಲ್ವಧ್ವಾರ, ಶಿಷ್ಟಾಚಾರ ವಿಭಾಗದ ಜಯರಾಮ ರಾವ್‌, ಗೋಪಿನಾಥ, ನವೀನ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios