ನಾನು ನಿಯತ್ತಿನ ನಾಯಿ ಎಂದ ಬೊಮ್ಮಾಯಿ: ಸಿದ್ದುಗೆ ಸಿಎಂ ಟಾಂಗ್..!
ಬೊಮ್ಮಾಯಿ ಅವರನ್ನು ನಾಯಿಗೆ ಹೋಲಿಸಿದ ಸಿದ್ದರಾಮಯ್ಯ, ನಾನು ನಿಯತ್ತಿನ ನಾಯಿ ಎಂದ ಬಸವರಾಜ ಬೊಮ್ಮಾಯಿ. ಬಳ್ಳಾರಿಯಲ್ಲಿ ಮಾಜಿ ಹಾಲಿ ಸಿಎಂಗಳ ನಾಯಿ ಹೆಸರಿನ ಜಗಳ, ಎಲ್ಲೇ ಮೀರಿದ ಹಾಲಿ ಮಾಜಿ ಸಿಎಂಗಳ ಮಾತಿನ ಭರಾಟೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ(ಜ.04): ರಾಜಕೀಯದಲ್ಲಿ ಪರಸ್ಪರ ಟಿಕೆ, ಟಿಪ್ಪಣೆ ಸೇರಿದಂತೆ ಅಭಿವೃದ್ಧಿ ವಿಚಾರದಲ್ಲಿ ಕೆಸರೆರಾಚಾಟ ಸಾಮಾನ್ಯ. ಆದ್ರೇ, ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರ ಮಾತುಗಳು ಹದ್ದು ಮೀರುತ್ತಿವೆ. ಅದರಲ್ಲೂ ಬಳ್ಳಾರಿಯಲ್ಲಿ ಮಾಜಿ ಮತ್ತು ಹಾಲಿ ಸಿಎಂಗಳು ಪರಿಸ್ಪರ ನಾಯಿಗೆ ತೋಳಕ್ಕೆ ಹೊಲಿಸಿಕೊಳ್ಳುವ ಮೂಲಕ ರಾಜಕೀಯದಲ್ಲಿ ತಳ ಹಂತದ ಮಾತುಗಳನ್ನಾಡಿದ್ಧಾರೆ. ಅಷ್ಟಕ್ಕೂ ಈ ಇಬ್ಬರು ನಾಯಕರು ನಾಯಿ ಮತ್ತು ತೋಳಕ್ಕೆ ಹೊಲಿಸಿಕೊಂಡಿದ್ದಾದ್ರೂ ಯಾಕೆ ಅಂತೀರಾ ಈ ಸ್ಟೋರಿ, ನೋಡಿ..
ಮೋದಿ ಎದುರು ಬೊಮ್ಮಾಯಿ ನಾಯಿಮರಿಯಂತೆ ಇರ್ತಾರೆ:
ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕರುಗಳ ಮಾತುಗಳ ಭರಾಟೆ ಜೋರಾಗಿದೆ. ಬೊಮ್ಮಾಯಿ ಸರ್ಕಾರ ಟಿಕಿಸೋ ಭರದಲ್ಲಿ ನಾಯಿಗೆ ಹೊಲಿಕೆ ಮಾಡಿದ ಸಿದ್ದರಾಮಯ್ಯ. ನಿಮ್ಮಂತೆ ತೋಳವಲ್ಲ ನಾನು ಜನಪರ ಕೆಲಸ ಮಾಡೋ ನಿಯತ್ತಿನ ನಾಯಿಯೇ ಎಂದು ಬೊಮ್ಮಾಯಿ. ಹೌದು, ನಿನ್ನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಮಾಲವಿ ಜಲಾಶಯಕ್ಕೆ ನೀರು ತುಂಬಿಸಿದ ನೆಪದಲ್ಲಿ ಕಾರ್ಯಕ್ರಮ ವೊಂದನ್ನು ಮಾಡೋ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿತ್ತು. ಶಾಸಕ ಭೀಮಾ ನಾಯ್ಕ್ ಅವರ ಸಾರ್ಥಕ ನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನಾಲಿಕೆ ಹರಿಬಿಟ್ಟರು. ಕೇಂದ್ರದಿಂದ ಸಮರ್ಪಕ ಅನುದಾನ ತರುವಲ್ಲಿ ವಿಫಲರಾದ ಬಿಜೆಪಿ ನಾಯಕರನ್ನು ಟಿಕಿಸುವ ಭರದಲ್ಲಿ ಅಸಂವಿಧಾನಿಕ ಪದ ಬಳಕೆ ಮಾಡಿದ್ರು. ಮುಖ್ಯಮಂತ್ರಿಯ ಸ್ಥಾನಕ್ಕೂ ಗೌರವ ನೀಡದೇ, ಮೋದಿಯ ಬಳಿ ಹೋದಾಗ ಬೊಮ್ಮಾಯಿ ನಾಯಿ ಮರಿಯಂತೆ ಇರುತ್ತಾರೆ ಎಂದು ಹೊಸ ವಿವಾದ ಸೃಷ್ಟಿಸಿದ್ರು.
ಸಿಎಂ ಬೊಮ್ಮಾಯಿಯನ್ನು ನಾಯಿಗೆ ಹೋಲಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು
ಇನ್ನು ಸಿಎಂ ಬೊಮ್ಮಾಯಿ ಅವರನ್ನು ನಾಯಿಗೆ ಹೊಲಿಸಿದ ಸಿದ್ದರಾಮಯ್ಯ ವಿರುದ್ಧ ಇಡೀ ಬಿಜೆಪಿಯ ಎಲ್ಲ ನಾಯಕರು ಹರಿಹಾಯ್ದರು. ಬಳ್ಳಾರಿಯಲ್ಲಿ ಶ್ರೀರಾಮುಲು ಕೂಡ ಸೋನಿಯಾ ಮುಂದೆ ನಿಮ್ಮನ್ನು ಬೆಕ್ಕು ಇಲಿ ಜಿರಳೆಗೆ ಹೊಲಿಸಿದ್ರೇ ಹೇಗಿರುತ್ತದೆ ಎಂದು ಪ್ರಶ್ನಿಸಿದ್ರು. ನಿಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಿ ಕೂಡಲೇ ಸಿಎಂ ಕ್ಷಮೆಯಾಚಿಸಿ ಎಂದ್ರು ನಾನು ನಿಯತ್ತಿನ ನಾಯಿ ಅಧಿಕಾರ ಬಂದಾಗ ಲೂಟಿ ಹೊಡೆಯೋ ತೋಳ ಅಲ್ಲ ಎಂದ ಬೊಮ್ಮಾಯಿ.
Assembly eleciton: ಬಿಜೆಪಿ ಭ್ರಷ್ಟ ಸರ್ಕಾರ: ರಾಜ್ಯವನ್ನುಳಿಸಲು ಕಾಂಗ್ರೆಸ್ ಗೆಲ್ಲಿಸಿ; ಸಿದ್ದರಾಮಯ್ಯ ಕರೆ
ಸಿದ್ದರಾಮಯ್ಯ ತಿರುಗೇಟು ನೀಡಿದ ಬೊಮ್ಮಾಯಿ
ಬಳ್ಳಾರಿಯಲ್ಲಿ ವಿವಿಧ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿದ ಬೊಮ್ಮಾಯಿ ಅವರು, ಹೌದು ನಾನು ನಿಯತ್ತಿನ ನಾಯಿಯೇ, ಸಿದ್ದರಾಮಯ್ಯನವರ ಹೇಳಿಕೆಗೆ ಜನರೇ ತಕ್ಕ ಉತ್ತರ ನೀಡುತ್ತಾರೆ. ಆ ಹೇಳಿಕೆ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ತೋರಿಸುತ್ತದೆ ಎಂದ್ರು. ನಾಯಿ ನಿಯತ್ತಿನ ಪ್ರಾಣಿ, ಜನರಿಗಾಗಿ ನಿಯತ್ತಾಗಿ ಕೆಲಸ ಮಾಡುತ್ತಿರುವೆ. ನಿಯತ್ತನ್ನು ಜನರ ಪರವಾಗಿ ಉಳಿಸಿಕೊಂಡು ಹೋಗುವೆ. ಅವರ ಹಾಗೆ ಸಮಾಜ ಒಡೆಯುವ ಕೆಲಸ ಮಾಡಲ್ಲ. ಸೌಭಾಗ್ಯ ಕೊಡುತ್ತೇವೆ ಅಂತಾ ದೌಭಾಗ್ಯ ಕೊಟ್ಟಿಲ್ಲ. ಸುಳ್ಳು ಹೇಳಿಲ್ಲ, ಆ ತರಹದ ಕೆಲಸ ಮಾಡಿಲ್ಲ ಎಂದ್ರು. ಅಲ್ಲದೇ ನಿಮ್ಮ ಹಾಗೇ ಅಧಿಕಾರ ಸಿಕ್ಕಾಗ ಹಣ ಹೊಡೆಯುವ ತೋಳವು ನಾನಲ್ಲ ಎಂದ್ರು. ಇನ್ನೂ ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ದರಾಮಯ್ಯ ಆಹ್ವಾನ ಮಾಡಿದ್ದಾರೆನ್ನುವ ವಿಚಾರಕ್ಕೆ ಸಂಬಂಧಿಸಿದಂತೆ. ವಿಧಾನಸಭೆಗಿಂತ ದೊಡ್ಡ ವೇದಿಕೆ ಯಾವುದು ಇದೆ ಅಲ್ಲಿ ಮಾತನಾಡಲಾಗದೇ, ರಾಜಕೀಯಕ್ಕಾಗಿ ಹೊರಗೆ ಮಾತನಾಡುತ್ತಿದ್ದಾರೆ. ಕೆಲವರು ನಾಯಿ ರೂಪದಲ್ಲಿ ನರಿಕೂಡ ಇರ್ತಾವೆ, ಹುಷಾರಾಗಿರಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ಗೆ ತೀರುಗೇಟು ಕೊಟ್ರು.
ಆರೋಪ ಪ್ರತ್ಯಾರೋಪ ಸಾಮಾನ್ಯ
ಅಭಿವೃದ್ಧಿಯ ವಿಚಾರದಲ್ಲಿ ಪರಸ್ಪರ ಪರ, ಆರೋಪ ಪ್ರತ್ಯಾರೋಪ ಮಾಡಿಕೊಳ್ಳುವ ಘಟಾನುಘಟಿ ರಾಜಕೀಯ ನಾಯಕರು, ಈ ರೀತಿಯ ತಳಮಟ್ಟದ ರಾಜಕೀಯ ಮಾತುಗಳನ್ನಾಡೋದು, ಎಷ್ಟರ ಮಟ್ಟಿಗೆ ಸರಿ ಎನ್ನುವುದು ಪ್ರಜಾವಂತ ನಾಗರೀಕರ ಪ್ರಶ್ನೆಯಾಗಿದೆ.