Asianet Suvarna News Asianet Suvarna News

Assembly eleciton: ಬಿಜೆಪಿ ಭ್ರಷ್ಟ ಸರ್ಕಾರ: ರಾಜ್ಯವನ್ನುಳಿಸಲು ಕಾಂಗ್ರೆಸ್ ಗೆಲ್ಲಿಸಿ; ಸಿದ್ದರಾಮಯ್ಯ ಕರೆ

ಬಿಜೆಪಿ ಸುಳ್ಳಿನ ಫ್ಯಾಕ್ಟರಿಯಾಗಿದ್ದು, ರಾಜ್ಯವನ್ನು ಉಳಿಸುವುದಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಬೇಕಿದೆ. ಸಿಎಂ ಬಸವರಾಜ ಬೊಮ್ಮಾಯಿ ಅಭಿವೃದ್ಧಿ ವಿಷಯದಲ್ಲಿ ಚರ್ಚೆ ಮಾಡಲು ಒಂದೇ ವೇದಿಕೆಗೆ ಬರಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

BJP Corrupt Govt Support congress party says Siddaramaiah  rav
Author
First Published Jan 4, 2023, 1:15 PM IST

ಹೊಸಪೇಟೆ (ಜ.4): 

ಬಿಜೆಪಿ ಸುಳ್ಳಿನ ಫ್ಯಾಕ್ಟರಿಯಾಗಿದ್ದು, ರಾಜ್ಯವನ್ನು ಉಳಿಸುವುದಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಬೇಕಿದೆ. ಸಿಎಂ ಬಸವರಾಜ ಬೊಮ್ಮಾಯಿ ಅಭಿವೃದ್ಧಿ ವಿಷಯದಲ್ಲಿ ಚರ್ಚೆ ಮಾಡಲು ಒಂದೇ ವೇದಿಕೆಗೆ ಬರಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ವಿಜಯನಗರ(Vijayanagara) ಜಿಲ್ಲೆಯ ಹಗರಿಬೊಮ್ಮನಹಳ್ಳಿ(hagaribommanahalli) ತಾಲೂಕಿನ ಮಹತ್ವಾಕಾಂಕ್ಷಿ ಯೋಜನೆ ಮಾಲವಿ ಜಲಾಶಯಕ್ಕೆ ಶಾಶ್ವತ ನೀರೊದಗಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಹಾಗೂ ಸಾರ್ಥಕ ನಮನ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

Assembly election: ಸಿದ್ದರಾಮಯ್ಯ ನಾಯಿಮರಿ ಹೇಳಿಕೆಗೆ ಜ್ಞಾನಿಯಂತೆ ಉತ್ತರಿಸಿದ ಸಿಎಂ ಬೊಮ್ಮಾಯಿ: ಸಿದ್ದುಗೆ ನಾಚಿಕೆ..!

ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಬಂದಿರುವ ಹಿನ್ನೆಲೆ ಬಾಗಿನ ಅರ್ಪಣೆ ಮಾಡಿದ್ದೇವೆ. ನಲವತ್ತು ವರ್ಷಗಳ ಹೋರಾಟಕ್ಕೆ ಅಂತ್ಯ ಹಾಡಿದ್ದೇವೆ. ಭೀಮಾನಾಯ್ಕ ಜೆಡಿಎಸ್‌ ಶಾಸಕರಾಗಿದ್ದಾಗಲೇ ಅನುದಾನ ಬಿಡುಗಡೆ ಮಾಡಿದ್ದೇವೆ. ಅಭಿವೃದ್ಧಿ ವಿಷಯದಲ್ಲಿ ಪಕ್ಷದ ಅಗತ್ಯವಿಲ್ಲ. ಚುನಾವಣೆಯಲ್ಲಿ ಮಾತ್ರ ಭರವಸೆ ನೀಡುತ್ತೇವೆ. ಗೆದ್ದ ಮೇಲೆ ಆ ಪಕ್ಷ, ಈ ಪಕ್ಷ ಅಂತೇನಿಲ್ಲ. ಎಲ್ಲರ ಅಭಿವೃದ್ಧಿ ಮಾಡಬೇಕು. ನಾನು ಸಿಎಂ ಆಗಿದ್ದಾಗ ಪಕ್ಷಾತೀತವಾಗಿ ಎಲ್ಲ ಕ್ಷೇತ್ರಕ್ಕೆ ಅನುದಾನ ಒದಗಿಸಿರುವೆ ಎಂದರು.

ಬಿಜೆಪಿ ವಿರುದ್ಧ ವಾಗ್ದಾಳಿ:

ಕಳೆದ ಮೂರುವರೆ ವರ್ಷದಲ್ಲಿ ಬಿಜೆಪಿಯವರು ಒಂದೇ ಒಂದು ಭರವಸೆ ಈಡೇರಿಸಿದ್ದೀರಾ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದೇ ವೇದಿಕೆ ಮೇಲೆ ಬರಲಿ. ಧೈರ್ಯ ಇದ್ದರೆ ಅಭಿವೃದ್ಧಿ ವಿಷಯದ ಕುರಿತು ಚರ್ಚೆಗೆ ಒಂದೇ ವೇದಿಕೆಗೆ ಬರಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ದಮ್ಮಿದ್ರೇ ಸೂರು ಕೊಡಲಿ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ದಮ್ಮಿದ್ರೇ, ತಾಕತ್ತಿದ್ರೇ, ಬಡವರಿಗೆ ಒಂದು ಮನೆ ನಿರ್ಮಿಸಿ ಕೊಡಲಿ. ವಿಧಾನಸೌಧದ ಗೋಡೆಗಳು ನಲವತ್ತು ಪಸೆಂರ್‍ಟ್‌ಗೆ ಹೇಳುತ್ತಿವೆ. ಮಂತ್ರಿಗಳ ಹೆಸರು ಬರೆದು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಾಜಿ ಸಚಿವ ಈಶ್ವರಪ್ಪ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹೆಸರು ಪತ್ರದಲ್ಲಿ ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಶ್ವರಪ್ಪ ಅವರಿಗೆ ಕ್ಲೀನ್‌ ಚಿಟ್‌ ಕೊಟ್ಟಂತೆ ಲಿಂಬಾವಳಿಗೆ ಆಗಬಾರದು. ಲಿಂಬಾವಳಿ ಅವರನ್ನು ಬಂಧಿಸಬೇಕು. ಕಂಟ್ರಾಕ್ಟರ್‌ ಅಸೋಸಿಯೇಷನ್‌ ಪಸೆಂರ್‍ಟೇಜ್‌ ಬಗ್ಗೆ ಆರೋಪಿಸಿದೆ. ವಿಚಾರಣೆ ಮಾಡುವ ಬದಲು, ಕೆಂಪಣ್ಣ ಅವರನ್ನೇ ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ:

ರಾಜ್ಯದಲ್ಲಿ ಆಪರೇಷನ್‌ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದೇ ಬರುತ್ತದೆ. ರಾಜ್ಯದ ಎಲ್ಲ ಕೆರೆ ತುಂಬಿಸುತ್ತೇವೆ. ಮಹದಾಯಿ ಯೋಜನೆ ನಿರ್ಮಾಣಕ್ಕೆ ಯಡಿಯೂರಪ್ಪ ರಕ್ತದಲ್ಲಿ ಬರೆದುಕೊಡ್ತೇನೆ ಎಂದಿದ್ದರು. ಡಬಲ್‌ ಎಂಜಿನ್‌ ಸರ್ಕಾರ ಏನು ಮಾಡ್ತಿದೆ ಯಡಿಯೂರಪ್ಪ ಎಂದು ಸಿದ್ದರಾಮಯ್ಯ ಗುಡುಗಿದರು.

ಮಾಜಿ ಸಂಸದ ಉಗ್ರಪ್ಪ ಮಾತನಾಡಿ, ಕ್ಷೇತ್ರದ ಜನತೆ 2023ರಲ್ಲಿ ಮತ್ತೊಮ್ಮೆ ಭೀಮನಾಯ್ಕರನ್ನು ಆಯ್ಕೆ ಮಾಡುವುದು ನಿಶ್ಚಿತ. ತಾಲೂಕು ಮಟ್ಟದಲ್ಲಿ ಬೃಹತ್‌ ಜನಸಂಖ್ಯೆ ಸೇರಿರುವ ಮೊದಲ ವೇದಿಕೆ ಇದಾಗಿದೆ. ಮಾಲವಿ ಜಲಾಶಯಕ್ಕೆ ಶಾಶ್ವತ ನೀರೊದಗಿಸಿ ಭೀಮನಾಯ್ಕ ಕ್ಷೇತ್ರದ ಭಗೀರಥನಾಗಿದ್ದಾರೆ. ಹಂಪಿಯ ವಾಲ್ಮೀಕಿ ಅಧ್ಯಯನ ಪೀಠದ ಬಾಗಿಲು ಹಾಕುವ ಮೂಲಕ ವಾಲ್ಮೀಕಿ ಸಮುದಾಯಕ್ಕೆ ಸರ್ಕಾರ ಅಪಮಾನವೆಸಗಿದೆ ಎಂದು ಕಿಡಿಕಾರಿದರು.

ಮಾಜಿ ಶಾಸಕ ಶಿರಾಜ್‌ಶೇಖ್‌ ಮಾತನಾಡಿ, ಆರ್‌ಎಸ್‌ಎಸ್‌ ಚಡ್ಡಿಗಳು ಮುಸ್ಲಿಂರನ್ನು ಕೆಣಕಿದಾಗ ಸಮುದಾಯದ ಪರ ನಿಂತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯನವರು. ಬಿಜೆಪಿಯವರು ಸಿದ್ದರಾಮೋತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾದ ಜನತೆ ನೋಡಿ ಬೆದರಿದ್ದಾರೆ ಎಂದು ತಿಳಿಸಿದರು.

ಶಾಸಕರಾದ ಎಸ್‌.ಭೀಮನಾಯ್ಕ, ಪಿ.ಟಿ. ಪರಮೇಶ್ವರನಾಯ್ಕ, ತುಕಾರಾಂ, ಜೆ.ಎನ್‌. ಗಣೇಶ, ಮಾಜಿ ಸಚಿವ ಸಂತೋಷ್‌ ಲಾಡ್‌, ಮಾಜಿ ಶಾಸಕ ಸಿರಾಜ್‌ ಶೇಖ್‌, ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಕಾಂಗ್ರೆಸ್‌ ಮುಖಂಡರು ಇದ್ದರು.

ಸಿದ್ದು ಆಪ್ತನ ಮನೆಗೆ ರೆಡ್ಡಿ ಭೇಟಿ; ಕಾಂಗ್ರೆಸ್ ಮತಬ್ಯಾಂಕ್‌ಗೆ ಲಗ್ಗೆ ಇಟ್ರಾ ಗಣಿಧಣಿ?

ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ: ಭೀಮಾನಾಯ್ಕ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ, ರಾಜ್ಯದ ಅಭಿವೃದ್ಧಿ ಆಗುತ್ತದೆ. ಮುಖ್ಯಮಂತ್ರಿ ಆಗೇ ಆಗ್ತಾರೆ ಎಂದು ಶಾಸಕ ಎಸ್‌. ಭೀಮಾನಾಯ್ಕ ಹೇಳಿದರು.

Follow Us:
Download App:
  • android
  • ios