ವರಿಷ್ಠರ ಜತೆ ಈ ವಾರವೇ ಸಿಎಂ ಬೊಮ್ಮಾಯಿ ಸಂಪುಟ ಚರ್ಚೆ?

ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ಪಕ್ಷದ ಹೈಕಮಾಂಡ್‌ ಭೇಟಿಗೆ ಈ ವಾರ ಸಮಯ ಕೇಳಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ ಭೇಟಿಗೆ ಸಮಯ ಕೇಳಿದ್ದೇನೆ.

CM Basavaraj Bommai Likely To Visit Delhi Regarding Karnataka Cabinet Expansion gvd

ಬೆಂಗಳೂರು (ಅ.19): ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ಪಕ್ಷದ ಹೈಕಮಾಂಡ್‌ ಭೇಟಿಗೆ ಈ ವಾರ ಸಮಯ ಕೇಳಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್‌ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ಕೊಟ್ಟರೆ ಈ ವಾರದೊಳಗೆ ಜನಸಂಕಲ್ಪ ಯಾತ್ರೆ ನಡುವೆ ದೆಹಲಿಗೆ ಹೋಗುತ್ತೇನೆ ಎಂದು ಹೇಳಿದರು. ಆಡಳಿತಾರೂಢ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದ್ದು, ತೆರವಾಗಿರುವ ಒಟ್ಟು ಆರು ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಈಗ ಪಕ್ಷದ ಹಿರಿಯ ನಾಯಕರ ಜನಸಂಕಲ್ಪ ಯಾತ್ರೆ ನಡೆಯುತ್ತಿರುವುದರಿಂದ ತಕ್ಷಣಕ್ಕೇ ಸಂಪುಟ ವಿಸ್ತರಣೆ ಮಾಡಲಾಗುತ್ತದೆಯೇ ಎಂಬ ಕುತೂಹಲವೂ ಇದೆ.

ಸಂಪುಟದ ವಿಸ್ತರಣೆ ಸಿಎಂ, ನಾಯಕರ ವಿವೇಚನೆ: ರಾಜ್ಯ ಸರ್ಕಾರದ ಸಚಿವ ಸಂಪುಟದ ವಿಸ್ತರಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ನಾಯಕರ ವಿವೇಚನೆಗೆ ಬಿಟ್ಟವಿಚಾರವಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು. ಚುನಾವಣೆ ಪೂರ್ವದಲ್ಲಿ ಸಚಿವ ಸಂಪುಟ ವಿಸ್ತರಿಸುವುದರ ಬಗ್ಗೆ ಮತ್ತೆ ಆಲೋಚನೆಗಳು ಸಾಗಿದ್ದು ಈಗಲಾದರು ಸಚಿವ ಸಂಪುಟದಲ್ಲಿ ರಾಯಚೂರು ಜಿಲ್ಲೆಗೆ ಸ್ಥಾನ ನೀಡುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು. ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ. ಸಿಎಂ ಹಾಗೂ ಕೇಂದ್ರದ ನಾಯಕರು ಸೇರಿ ಸೂಕ್ತರನ್ನು ನಿಯುಕ್ತಿ ಮಾಡುತ್ತಾರೆ. ಈ ಕುರಿತು ನನ್ನ ಸಲಹೆ ಕೇಳಿದರೆ ರಿಕಮೆಂಡ್‌ ಮಾಡುವುದಾಗಿ ಹೇಳಿದರು.

ಒಕ್ಕಲಿಗರು ಹೆಚ್ಚು ಮೀಸಲು ಕೇಳುವುದು ತಪ್ಪಲ್ಲ: ಸಿಎಂ ಬೊಮ್ಮಾಯಿ

ಜನರ ಮನೆ ಬಾಗಿಲಿಗೆ ಆಡಳಿತ ನೀಡುವ ಉದ್ದೇಶದಿಂದ ಗ್ರಾಮವಾಸ್ತವ್ಯ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತವೆ ಎನ್ನುವ ನಂಬಿಕೆ ಜನರಲ್ಲಿ ಮೂಡಿದೆ. ಇದರಿಂದ ಒಂದೇ ಕಡೆ ಸಾವಿರಾರು ಜನ ಸಮಸ್ಯೆ ಪರಿಹರಿಸಲು ಸಹಾಕಾರವಾಗಲಿದೆ. ಅರಕೇರಾ ಗ್ರಾಮವಾಸ್ತವ್ಯವು ಫಲಪ್ರದಗೊಂಡಿದ್ದು, ಸಾವಿರಾರು ಜನರಿಗೆ ವಿವಿಧ ಸವಲತ್ತುಗಳನ್ನು ಒದಗಿಸಿಕೊಡುವ ಪ್ರಯತ್ನವನ್ನು ಮಾಡಲಾಗಿದೆ. ಅರಿಕೇರಾ ಹೊಸ ತಾಲೂಕು ಉದ್ಘಾಟನೆಯೊಂದಿಗೆ ಜೊತೆಗೆ 17 ಸಾವಿರ ಜನರಿಗೆ ವಿವಿಧ ಸೌಲಭ್ಯ ದೊರೆತಿವೆ.ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಅರ್ಜಿಗಳು ವಿಲೇವಾರಿ ಮಾಡಲಾಗಿದೆ. ಕಳೆದ 24 ಗಂಟೆಗಳಿಂದ ಗ್ರಾಮದಲ್ಲಿ ವಾಸ್ತವ್ಯ ಇದ್ದು ಜನರ ಸಮಸ್ಯೆ ಪರಿಹರಿಸಲಾಗಿದೆ. ಯಾದಗಿರಿ, ಕುಷ್ಟಗಿ ಭಾಗದಿಂದ ಜನರು ಬಂದಿದ್ದಾರೆ. ಗ್ರಾಮ ವಾಸ್ತವ್ಯದಿಂದ ಸಮಸ್ಯೆ ಪರಿಹಾರಗೊಳ್ಳುವ ವಿಶ್ವಾಸ ಜನರದಾಗಿದೆ.

ಆರೆಸ್ಸೆಸ್‌, ಸಿಎಂ, ಬಿಜೆಪಿ ಹೆಸರೆತ್ತದೆ ಸಿದ್ದು ಮಾತಾಡಲಿ: ಬೊಮ್ಮಾಯಿ ತಿರುಗೇಟು

ವಸತಿ ರಹಿತರಿಂದ 300 ಮನೆಗಳ ಬೇಡಿಕೆ ಬಂದಿದೆ. ರಾಜ್ಯ ವಸತಿ ಸಚಿವರೊಂದಿಗೆ ಮನೆ ದೊರಕಿಸಿಕೊಡಲಾಗಿದೆ. ಇನ್ನು ಹೆಚ್ಚಿನ ಬೇಡಿಕೆ ಇದ್ದರೆ, ಸಚಿವರೊಂದಿಗೆ ಮಾತನಾಡುವೆ. ಸೈನಿಕರ ನಿವೇಶನಕ್ಕಾಗಿ ರಾಯಚೂರು ಜಿಲ್ಲಾ ಕೇಂದ್ರದಲ್ಲಿ ಆರು ಎಕರೆ ಜಮೀನು ಮಂಜೂರಿಗೆ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು. ಏಮ್ಸ್‌ ಮಂಜೂರಾತಿಗೆ ಸಂಬಂಧಿಸಿ ಈಗಾಗಲೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಏಮ್ಸ್‌ ಮಂಜೂರಿಗೆ ವಿಮಾನ ನಿಲ್ದಾಣ ಮತ್ತು ಮಹಾನಗರ ಪಾಲಿಕೆ ಅಗತ್ಯವಾಗಿದೆ. ನಗರದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ ಹಾಗೂ ನಗರವನ್ನು ಮಹಾನಗರ ಪಾಲಿಕೆಯನ್ನಾಗಿ ಅಭಿವೃದ್ಧಿ ಪಡಿಸಿ ಜಿಲ್ಲೆಗೆ ಏಮ್ಸ್‌ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕ ಕೆ. ಶಿವನಗೌಡ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios