Asianet Suvarna News Asianet Suvarna News

ಬಿಜೆಪಿ-ಕಾಂಗ್ರೆಸ್ ನಡುವೆ ಮಾರಾಮಾರಿ, 18 ಮಂದಿ ಅರೆಸ್ಟ್, ಸುರಪುರ ಮತಕ್ಷೇತ್ರ ಬೂದಿ ಮುಚ್ಚಿದ ಕೆಂಡ

ಕೊಡೇಕಲ್ ಗ್ರಾಮದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ  ನಡುವೆ ನಡೆದ ಭೀಕರ ಬಡಿದಾಟ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ಎಫ್ಐಆರ್ ದಾಖಲಿಸಿ, 18 ಜನರನ್ನು ವಶಕ್ಕೆ ಪಡೆಯಲಾಗಿದೆ.  ಒಟ್ಟು 118 ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೋಲಿಸರು ಕೇಸ್ ದಾಖಲಿಸಿದ್ದಾರೆ.

Clash between BJP-Congress in surapura 18 people into custody gow
Author
First Published Apr 7, 2023, 7:51 PM IST

ಯಾದಗಿರಿ (ಏ.7): ಕೊಡೇಕಲ್ ಗ್ರಾಮದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ  ನಡುವೆ ನಡೆದ ಭೀಕರ ಬಡಿದಾಟ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ಎಫ್ಐಆರ್ ದಾಖಲಿಸಿ, 18 ಜನರನ್ನು ವಶಕ್ಕೆ ಪಡೆಯಲಾಗಿದೆ.  ಒಟ್ಟು 118 ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೋಲಿಸರು ಕೇಸ್ ದಾಖಲಿಸಿದ್ದಾರೆ. ಕೊಡೆಕಲ್, ಹುಣಸಗಿ ಹಾಗೂ ಸುರಪುರದಲ್ಲಿ ಖಾಕಿ ಪಡೆ ಗಸ್ತು ತಿರುಗುತ್ತಿದೆ. ಗಲಾಟೆ ನಿಯಂತ್ರಣಕ್ಕಾಗಿ ಡಿಸಿ ಸ್ನೇಹಲ್ 2 ದಿನಗಳ ಕಾಲ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ. ಸಂಘರ್ಷ ಹಿನ್ನೆಲೆ ಕಲ್ಬುರ್ಗಿ ಈಶಾನ್ಯ ವಲಯ ಐಜಿಪಿ ಅನುಪಮ ಅಗರವಾಲ್ ನಿನ್ನೆ ರಾತ್ರಿ ಕೊಡೆಕಲ್ ಗೆ ಆಗಮಿಸಿದ್ದಾರೆ.  ಇವರ ಜೊತೆಗೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಖಾಕಿ ಫುಲ್ ಅಲರ್ಟ್ ಆಗಿದೆ. ಪರಿಸ್ಥಿತಿ ನಿಯಂತ್ರಣಕ್ಕಾಗಿ 3 ಕೆ.ಎಸ್.ಆರ್.ಪಿ ತುಕಡಿ, 1 ಪ್ಯಾರಾ ಮಿಲಿಟರಿ ಪೋರ್ಸ್ ಕಂಪನಿ, ಇಬ್ಬರು ಡಿಎಸ್ಪಿ, 5 ಜನ ಸಿಪಿಐ, 10 ಪಿಎಸ್ಐ  100 ಜನ ಕಾನ್ಸಟೇಬಲ್ ನಿಯೋಜನೆ ಮಾಡಲಾಗಿದೆ. ಸದ್ಯ ಬೂದಿ ಮುಚ್ಚಿದ ಕೆಂಡದಂತಿರುವ ಸುರಪುರ ಮತಕ್ಷೇತ್ರ.

ಘಟನೆ ಹಿನ್ನೆಲೆ: ಹುಣಸಗಿ ತಾಲೂಕಿನ ಕೊಡೇಕಲ್‌ ಗ್ರಾಮದಲ್ಲಿ ಗುರುವಾರ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವಿನ ವಾಗ್ವಾದ ಕಲ್ಲುತೂರಾಟಕ್ಕೆ ತಿರುಗಿ, 15ಕ್ಕೂ ಹೆಚ್ಚು ವಾಹನಗಳಿಗೆ ಹಾನಿಯಾಗಿದೆ. ಘಟನೆಯಿಂದ ಕಾಲಜ್ಞಾನಿ ಬಸವಣ್ಣನ ನಾಡು ಕೊಡೇಕಲ್‌ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಸುರಪುರದ ಹಾಲಿ ಶಾಸಕ ರಾಜೂಗೌಡ ಹಾಗೂ ಮಾಜಿ ಶಾಸಕ, ಕಾಂಗ್ರೆಸ್‌ನ ರಾಜಾ ವೆಂಕಟಪ್ಪ ನಾಯಕರ ಬಣಗಳ ತಿಕ್ಕಾಟವೇ ಈ ಘಟನೆಗೆ ಕಾರಣ. ಕೊಡೇಕಲ್‌ ಗ್ರಾಮದಲ್ಲಿ ಕಾಲಜ್ಞಾನಿ ಬಸವಣ್ಣ ಪಲ್ಲಕ್ಕಿ ಉತ್ಸವ ನಡೆದಿತ್ತು. ಇದರಿಂದ ಭಾರೀ ಪ್ರಮಾಣದಲ್ಲಿ ಭಕ್ತರು ಸೇರಿದ್ದರು. ಆಗ ವಾಹನ ಚಾಲಕರು ದಾರಿಗಾಗಿ ಹಾರ್ನ್‌ ಹೊಡೆದಿದ್ದಾರೆ. ಇದೇ ಗಲಾಟೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಕಾರಿಗೆ ಅಡ್ಡಲಾಗಿ ಮತ್ತೊಂದು ಕಾರೊಂದನ್ನು ನಿಲ್ಲಿಸಿದ್ದಾರೆ. ಆಗ ವಾಗ್ವಾದ ನಡೆದಿದೆ. ನೋಡ ನೋಡುತ್ತಿದ್ದಂತೆ ಅಲ್ಲಿದ್ದ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಕಲ್ಲು ತೂರಾಟ ನಡೆದಿದೆ.

ಕೊಡಗಿನ ಎರಡು ಕ್ಷೇತ್ರಕ್ಕೆ ಅಳೆದು ತೂಗಿ ಟಿಕೆಟ್ ನೀಡಿದ ಕಾಂಗ್ರೆಸ್‌ ಗೆ ಬಂಡಾಯದ ಬಿಸಿ!

ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ್‌, ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ್‌ ಹಾಗೂ ಶಾಂತಗೌಡ ಚೆನ್ನಪಟ್ಟಣ ಮುಂತಾದವರು ಈ ವೇಳೆ ಕಾರಿನಲ್ಲಿದ್ದರು. ದಿಢೀರ್‌ ನಡೆದ ಈ ಕಲ್ಲುತೂರಾಟದಿಂದ ಕೆಲಕಾಲ ಗೊಂದಲವಾಗಿತ್ತು.

ಯಾದಗಿರಿ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ, ಕಲ್ಲು ತೂರಾಟ, ಉದ್ವಿಗ್ನ ವಾತಾವರಣ

ಗಲಾಟೆಯ ಚಿತ್ರೀಕರಣ ಮಾಡುತ್ತಿದ್ದ ಸಾರ್ವಜನಿಕರ ಕೆಲ ಮೊಬೈಲ್‌ಗಳನ್ನು ದುಷ್ಕರ್ಮಿಗಳು ಕಸಿದು ಕಲ್ಲಿನಿಂದ ಜಜ್ಜಿ ಹಾಕಿದ್ದಾರೆಂಬ ಆರೋಪಗಳೂ ಇವೆ. ಸದ್ಯ ಕೊಡೇಕಲ್‌ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ.

Follow Us:
Download App:
  • android
  • ios