Asianet Suvarna News Asianet Suvarna News

ಚಾರ್ ಸೌ ಪಾರ್‌ ಅನ್ನೋದು ತಂತ್ರಗಾರಿಕೆ: ಪ್ರಧಾನಿ ಮೋದಿ

ವಿಪಕ್ಷಗಳಿಗೆ ತಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗಿ ತಲುಪಿಸಿದರು ಎಂಬುದೇ ಗೊತ್ತಾಗುತ್ತಿಲ್ಲ, ನಾನು ಆಬ್ ಕಿ ಬಾರ್ ಚಾರ್ ಸೌ ಪಾರ್ ಎಂದು ಹೇಳಿದ ಮೇಲೆ ಅವು 'ಮೋದಿ ಈ ಬಾರಿ 400 ಸೀಟು ದಾಟುತ್ತಾರೋ ಇಲ್ಲವೋ' ಎಂದು ಚರ್ಚೆ ಶುರುಮಾಡಿದವು ಎಂದು ಚಟಾಕಿ ಹಾರಿಸಿದ ಪ್ರಧಾನಿ ನರೇಂದ್ರ ಮೋದಿ

Char Sou Par is a Election Strategy Says PM Narendra Modi grg
Author
First Published May 25, 2024, 6:37 AM IST

ನವದೆಹಲಿ(ಮೇ.25): 'ಈ ಬಾರಿ ಎನ್‌ಡಿಎ ಮೈತ್ರಿಕೂಟ 400 ಸೀಟು ದಾಟುತ್ತದೆ (ಅಬ್ ಕಿ ಬಾರ್ ಚಾರ್ ಸೌಪಾರ್) ಎಂಬ ನನ್ನ ಹೇಳಿಕೆ ಒಂದು ಚುನಾವಣಾ ತಂತ್ರಗಾರಿಕೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 'ವಿಪಕ್ಷಗಳಿಗೆ ತಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗಿ ತಲುಪಿಸಿದರು ಎಂಬುದೇ ಗೊತ್ತಾಗುತ್ತಿಲ್ಲ, ನಾನು ಆಬ್ ಕಿ ಬಾರ್ ಚಾರ್ ಸೌ ಪಾರ್ ಎಂದು ಹೇಳಿದ ಮೇಲೆ ಅವು 'ಮೋದಿ ಈ ಬಾರಿ 400 ಸೀಟು ದಾಟುತ್ತಾರೋ ಇಲ್ಲವೋ' ಎಂದು ಚರ್ಚೆ ಶುರುಮಾಡಿದವು' ಎಂದು ಪ್ರಧಾನಿ ಚಟಾಕಿ ಹಾರಿಸಿದ್ದಾರೆ.

'ಇಂಡಿಯಾ ಟೀವಿ' ಸಂವಾದದಲ್ಲಿ ಮಾತನಾಡಿದ ಅವರು, 'ಪ್ರತಿಪಕ್ಷಗಳು ಕೇವಲ ನನ್ನನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿವೆ. ಅವುಗಳಿಗೆ ನಾನು ಏನು ಮಾಡು ತ್ತೇನೆ ಎಂಬುದೇ ಗೊತ್ತಾಗುವುದಿಲ್ಲ. ಅದೇ ಪ್ರಕಾರ ಈಗ ತಾವು ಗೆಲ್ಲುತ್ತೇವೋ ಇಲ್ಲವೋ ಅಥವಾ ಬಿಜೆಪಿಗೆ ಬಹುಮತ ಬರುತ್ತೋ ಇಲ್ಲವೋ ಎಂಬುದನ್ನು ಬಿಟ್ಟು ಮೋದಿಗೆ 400 ಸ್ಥಾನ ಬರುತ್ತೋ ಇಲ್ಲವೋ ಎಂಬ ಚರ್ಚೆಯಲ್ಲಿ ನಿರತ ವಾಗಿವೆ' ಎಂದು ಲೇವಡಿ ಮಾಡಿದರು.

ಬ್ರಿಟಿಷರಂತೆ ಮೋದಿ ಲೂಟಿ: ಮಲ್ಲಿಕಾರ್ಜುನ ಖರ್ಗೆ

'3ನೇ ಹಂತ ಮುಗಿದ ಬಳಿಕ ಮೋದಿಗೆ 400 ಸ್ಥಾನ ಬರುತ್ತೋ ಇಲ್ಲವೋ ಎಂಬ ಬಗ್ಗೆ ವಿಪಕ್ಷಗಳಲ್ಲೇ ಚರ್ಚೆ ನಡೆ ಯಿತು. ತಾವು ಏನು ಮಾಡುತ್ತಿದ್ದೇವೆ ಎಂಬುದೇ ಪ್ರತಿಪಕ್ಷ ಗಳಿಗೆ ಅರಿವಿರಲಿಲ್ಲ. ಆ ಪ್ರಕಾರ ಅವರು ಪ್ರಚಾರದಲ್ಲಿ ದಿಕ್ಕು ತಪ್ಪಿದರು' ಎಂದು ಚಾಟಿ ಬೀಸಿದರು. ಈ ಮೂಲಕ ಜಯಿಸು ವ ಬಗ್ಗೆ ಯೋಚನೆ ಬಿಡಲಿ, ಮೋದಿಗೆ 400 ಬರುತ್ತೋ ಇಲ್ಲ ವೋ ಎಂಬುದೇ ಪ್ರತಿಪಕ್ಷಗಳಿಗೆ ಮುಖ್ಯ ವಿಚಾರವಾಗಿಬಿಟ್ಟಿದೆ ಎಂದು ಪರೋಕ್ಷವಾಗಿ ವ್ಯಂಗ್ಯವಾಡಿದರು.

ಇನ್ನು ಬಿಜೆಪಿ ಹಾಗೂ ಎನ್‌ಡಿಎನ 'ಅಬ್ಬಿ ಬಾರ್ 400 ಪಾರ್' ಎಂಬ ಘೋಷಣೆಯ ಹಿಂದಿನ ರಹಸ್ಯ ಬಿಚ್ಚಿಟ್ಟ ಅವರು, 'ಈ ಘೋಷಣೆಯನ್ನು ನಾವು ಮಾಡಿದ್ದಲ್ಲ ಇದು ಜನರ ಹೃದಯದಿಂದ ಬಂದಿದೆ. 2019ರಿಂದ 2024ರವರೆಗೆ ನಮ್ಮ ಎನ್‌ಡಿಎ ಸುಮಾರು 360 ಸ್ಥಾನದವರೆಗೆ ಬಂದು ನಿಂತಿತ್ತು. ಹೆಚ್ಚ ಕಡಿಮೆ ನಾವು 400ರ ಸನಿಹದಲ್ಲೇ ಇದ್ದೆವು. ಏಕೆಂದರೆ ನಮ್ಮ ಜತೆ ನಮ್ಮ 2-3 ಮಿತ್ರರು ಉತ್ತಮ ಸ್ಥಾನ ಗೆದ್ದಿದರು' ಎಂದರು.
ಇದೇ ವೇಳೆ 400 ಸ್ಥಾನದ ಗುರಿ ಏಕೆ ಎಂಬುದಕ್ಕೆ ಅವರು ಉದಾಹರಣೆ ನೀಡಿದರು. 'ನಿಮ್ಮ ಕುಟುಂಬದಲ್ಲಿ ಒಂದು ಮಗು 90 ಅಂಕಗಳನ್ನು ಗಳಿಸುತ್ತದೆ ಎಂದಿಟ್ಟುಕೊಳ್ಳಿ. ಅವನ ಸ್ಪರ್ಧಿಗಳು 30-40 ಅಂಕಗಳನ್ನು ಪಡೆಯಬಹುದು. ಆಗ ನಿಮ್ಮ ಮಗುವಿಗೆ ನೀವು, 'ನಿನ್ನ ಸ್ಪರ್ಧಿ 40 ಅಂಕ ಪಡೆದಿದ್ದಾನೆ ಬಿಡು.. ನೀನು 50 ತಗೊಂಡರೆ ಸಾಕು' ಎನ್ನುವುದಿಲ್ಲ.

ಅದರ ಬದಲು 'ನೀನು ಮುಂದಿನ ಸಲ 95 ಅಂಕ ತೆಗೆದುಕೋ' ಎನ್ನುತ್ತೇವೆ. ಅದೇ ಸಾಲಿನಲ್ಲಿ ನಾವು ನಮ್ಮ ಮೈತ್ರಿಗೆ, ಕಳೆದ ಸಲದ 360ಕ್ಕಿಂತ ಹೆಚ್ಚಿನದಾದ 400 ಲೋಕಸಭಾ ಸ್ಥಾನಗಳ ಗುರಿ ಇಟ್ಟುಕೊಂ ಡಿದ್ದೇವೆ' ಎಂದು ಮೋದಿ ಹೇಳಿದರು. ಇನ್ನು ಎನ್‌ಡಿಎಗೆ 400 ಗುರಿ ಆದರೆ ಬಿಜೆಪಿಗೆ ಏಕೆ 370ರ ಗುರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಬಿಜೆಪಿಯ ಗುರಿ 370 ಸ್ಥಾನ ಎಂಬುದು ಸೃಜನಶೀಲ ವ್ಯಕ್ತಿಗಳಿಂದ ಬಂದಿದೆ.

ಚಾರ್ ಸೌ ಪಾರ್ ಘೋಷಣೆಯಿಂದ ವಿಪಕ್ಷಗಳ ಸ್ಥಿತಿ ಏನಾಯ್ತು? ನಿಜವಾಯ್ತಾ ಪ್ರಶಾಂತ್ ಕಿಶೋರ್ ಭವಿಷ್ಯ ?

ನಮ್ಮ ಕಾಶ್ಮೀರದ ಹಿತೈಷಿಯೊಬ್ಬರು 370 ಎಂಬುದು (ಆರ್ಟಿಕಲ್ 370 ಅನ್ನು ಉಲ್ಲೇಖಿಸಿ) ದೇಶದ ಏಕತೆಯನ್ನು ಬಿಂಬಿಸುತ್ತದೆ. ಹೀಗಾಗಿ 370 ಸೀಟುಗಳ ಗುರಿ ಇಟ್ಟುಕೊಳ್ಳಿ ಎಂಬ ಕಲ್ಪನೆ ಮುಂದಿಟ್ಟರು. ಹೀಗಾಗಿ ಇದು ಜನರ ಮನಸ್ಸಿನಲ್ಲಿ ಚಿರಸ್ಥಾಯಿ ಆಗಿ ಉಳಿದು ಏಕತೆಯ ಮಹತ್ವವನ್ನು ಜನರು ಅರ್ಥೈಸಿಕೊಳ್ಳಬೇಕು ಎಂಬ ಉದ್ದೇಶದಿಂದ 370ರ ಗುರಿಯನ್ನು ಬಿಜೆಪಿ ಹೊಂದಿದೆ' ಎಂದು ಸ್ಪಷ್ಟಪಡಿಸಿದರು.

ಮೋದಿ ಹೇಳಿದ್ದೇನು?

ವಿಪಕ್ಷಗಳಿಗೆ ಈಗ ಚುನಾವಣೆಯಲ್ಲಿ ಗೆಲ್ಲುವ ಯೋಚನೆಯೇ ಹೊರಟುಹೋಗಿದೆ
ಎನ್‌ಡಿಎಗೆ 400 ಸ್ಥಾನ ಗಳಿಸಲು ಬಿಡಬಾ ರದು ಎಂಬುದಷ್ಟೇ ಅವುಗಳ ಗುರಿಯಾಗಿದೆ
3ನೇ ಹಂತದ ಚುನಾವಣೆ ಬಳಿಕ ವಿಪಕ್ಷಗಳ ಪ್ರಚಾರವೇ ಸಂಪೂರ್ಣ ದಿಕ್ಕು ತಪ್ಪಿದೆ
ಸಾಧನೆ ಹಾಗೂ ಸುಧಾರಣೆ ಧೈಯ ದೊಂದಿಗೆ ನಮ್ಮದು 400ರ ಗುರಿ
ಮಗು ಪ್ರತಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಯತ್ನಿಸುವಂತೆ ನಮ್ಮದೂ ಪ್ರಯತ್ನ
ಕಾಶ್ಮೀರದ 370ನೇ ಪರಿಚ್ಛೇದ ರದ್ದತಿಯ ನೆನಪಿಗಾಗಿ ಬಿಜೆಪಿಗೆ ಈ ಬಾರಿ 370ರ ಗುರಿ

Latest Videos
Follow Us:
Download App:
  • android
  • ios