Asianet Suvarna News Asianet Suvarna News

ಬ್ರಿಟಿಷರಂತೆ ಮೋದಿ ಲೂಟಿ: ಮಲ್ಲಿಕಾರ್ಜುನ ಖರ್ಗೆ

ಬ್ರಿಟಿಷರಂತೆ ಪ್ರಧಾನಿ ಮೋದಿ ದೇಶವನ್ನು ಲೂಟಿ ಮಾಡುತ್ತಿದ್ದು, ದೇಶದ ಆಸ್ತಿಯನ್ನು ತಮ್ಮ ಶ್ರೀಮಂತ ಸ್ನೇಹಿತರಿಗೆ ನೀಡುತ್ತಿದ್ದಾರೆ ಎಂದು ಆಪಾದಿಸಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 
 

PM Narendra Modi Looted like the British Says AICC President Mallikarjun Kharge grg
Author
First Published May 25, 2024, 4:32 AM IST

ದೇವಗಢ(ಜಾರ್ಖಂಡ್‌)(ಮೇ.25): ಬ್ರಿಟಿಷರಂತೆ ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷದ ಆಡಳಿತವಧಿಯಲ್ಲಿ ದೇಶದ ನೀರು, ಅರಣ್ಯ, ಭೂಮಿಯನ್ನು ಲೂಟಿ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದರು.

ಇಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ರಿಟಿಷರಂತೆ ಪ್ರಧಾನಿ ಮೋದಿ ದೇಶವನ್ನು ಲೂಟಿ ಮಾಡುತ್ತಿದ್ದು, ದೇಶದ ಆಸ್ತಿಯನ್ನು ತಮ್ಮ ಶ್ರೀಮಂತ ಸ್ನೇಹಿತರಿಗೆ ನೀಡುತ್ತಿದ್ದಾರೆ ಎಂದು ಆಪಾದಿಸಿದರು.

ಗಾಂಧಿ ಕುಟುಂಬದ ಮೇಲೆ ಆರೋಪ ಮಾಡೋದನ್ನ ಮೋದಿ ಮೊದಲು ನಿಲ್ಲಿಸಬೇಕು: ಮಲ್ಲಿಕಾರ್ಜುನ ಖರ್ಗೆ ಗರಂ

ಅಲ್ಲದೆ, ಬಿಜೆಪಿಯು ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಿದಂತೆ ಮುಸ್ಲಿಂ ಹಾಗೂ ಹಿಂದೂಗಳನ್ನು ವಿಭಜಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಹಿಂದೂ ಮತ್ತು ಮುಸ್ಲಿಮರನ್ನು ಒಗ್ಗೂಡಿಸುವ ಪ್ರಯತ್ನ ಮಾಡಿತ್ತಿದೆ ಎಂದು ಹೇಳಿದರು.
ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಸಂವಿಧಾನವನ್ನು ರಕ್ಷಿಸಬೇಕು ಎಂದು ಖರ್ಗೆ ಮತದಾರರಿಗೆ ಕರೆ ಕೊಟ್ಟರು.

Latest Videos
Follow Us:
Download App:
  • android
  • ios