Asianet Suvarna News Asianet Suvarna News

ಮೊದಲ ಹಂತದಲ್ಲಿ ಸಚಿವಸ್ಥಾನ ನೀಡಲು ಮೀನಾಮೇಷ: ಕಾಂಗ್ರೆಸ್‌ ಕ್ಯಾಬಿನೆಟ್‌ನಲ್ಲಿ ಕಾಣದ ನಿಜ ಕಲ್ಯಾಣ!

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ನೇತೃತ್ವದ ಪೂರ್ಣ ಬಹುಮತದ ಕಾಂಗ್ರೆಸ್‌ ಸರ್ಕಾರದ ಸಂಪುಟದಲ್ಲಿ ಕಲ್ಯಾಣ ನಾಡಿಗೆ ಸಾಕಷ್ಟುಪ್ರಾತಿನಿಧ್ಯ ಸಿಗದೆ ಹೋಗಿರುವುದು ಇದೀಗ ಇಲ್ಲಿನ ಜನರ ತೀವ್ರ ಬೇಸರಕ್ಕೆ ಕಾರಣವಾಗಿದೆ.

Real welfare not seen in Congress CM siddaramaiah cabinet rav
Author
First Published May 22, 2023, 1:51 PM IST

ಶೇಷಮೂರ್ತಿ ಅವಧಾನಿ

ಕಲಬುರಗಿ (ಮೇ.22) : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ನೇತೃತ್ವದ ಪೂರ್ಣ ಬಹುಮತದ ಕಾಂಗ್ರೆಸ್‌ ಸರ್ಕಾರದ ಸಂಪುಟದಲ್ಲಿ ಕಲ್ಯಾಣ ನಾಡಿಗೆ ಸಾಕಷ್ಟುಪ್ರಾತಿನಿಧ್ಯ ಸಿಗದೆ ಹೋಗಿರುವುದು ಇದೀಗ ಇಲ್ಲಿನ ಜನರ ತೀವ್ರ ಬೇಸರಕ್ಕೆ ಕಾರಣವಾಗಿದೆ.

ಹಿಂದಿನ ಬಿಜೆಪಿ ಸರ್ಕಾರವೂ ತನ್ನ ಇಡೀ ಅವಧಿಯಲ್ಲಿ ಬೀದರ್‌ನ ಪ್ರಭು ಚವ್ಹಾಣ್‌(Prabhu chauhan) ಒಬ್ಬರನ್ನು ಹೊರತುಪಡಿಸಿದರೆ ಯಾರಿಗೂ ಸಚಿವಗಿರಿ ನೀಡದೆ ಸಾಗಹಾಕಿತ್ತು. ಈ ವಿಚಾರ ಕಲ್ಯಾಣದವರನ್ನು ಸಾಕಷ್ಟುಕೆರಳಿಸಿತ್ತು ಕೂಡಾ. ಇದೀಗ ಆರಂಭದಲ್ಲೇ ಕಾಂಗ್ರೆಸ್‌ ಕೂಡಾ ತನ್ನ ಸಂಪುಟದಲ್ಲಿ ಕಲ್ಯಾಣದವರನ್ನು ಅಲಕ್ಷಿಸಿರೋದು ಮತ್ತೊಮ್ಮೆ ಜನರನ್ನು ಕೆರಳುವಂತೆ ನಾಡಿದೆ.

ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ಜನಪರ ಕಾರ್ಯಗಳಲ್ಲಿ ಸಿಎಂ ಸಕ್ರಿಯ

ಕಲ್ಯಾಣ ನಾಡಿನ(Kalyana karnataka) 7 ಜಿಲ್ಲೆಗಳಲ್ಲಿ ಇರುವ 41 ಅಸೆಂಬ್ಲಿ ಸ್ಥಾನಗಳಲ್ಲಿ 29 ರಷ್ಟುಕೈವಶವಾಗಿದ್ದರೂ ಕೂಡಾ ಮೊಲ ಸಂಪುಟದಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರದ ಪ್ರಿಯಾಂಕ್‌ ಖರ್ಗೆ(Priyanka kharge) ಅವರಿಗೆ ಮಾತ್ರ ಸಚಿವ ಸ್ಥಾನ ದಕ್ಕಿದೆ. ಇನ್ನುಳಿದಂತೆ ಹೆಚ್ಚಿನ ಸ್ಥಾನಮಾನ ಮೊದಲ ಹಂತದಲ್ಲೇ ಕಲ್ಯಾಣಕ್ಕೆ ನೀಡಿದ್ದರೆ ತಪ್ಪೇನಿತ್ತು? ಎಂದು ಜನ ಪ್ರಸ್ನಿಸುವಂತಾಗಿದೆ.

ಮಾತೆತ್ತಿದರೆ ಸಾಕು, ಕಲ್ಯಾಣ ಹಿಂುಳಿದ ಪ್ರದೇಶ, ಬಿಜೆಪಿ ಅಲಕ್ಷತನ ತೋರುತ್ತಿದೆ, ಇಲ್ಲಿ ಒಬ್ಬರಿಗೆ ಸಚಿವ ಸ್ಥಾನ ಕೊಟ್ಟು ಮೋಸ ಮಾಡಿದೆ ಎಂದು ಕಾಂಗ್ರೆಸ್ಸಿಗರು ಟೀಕಿಸದ್ದೇ ಬಂತು. ಸರ್ಕಾರ ತಾವು ರಚಿಸಿರುವ ಈ ಅವಧಿಯಲ್ಲಿ ತಾವೇ ಮಾಡಿದ ಟೀಕೆಗಳನ್ನು ಮರೆತಿದ್ದಾರೆಂದೂ ಜನ ಅಸಮಾಧಾನ ಹೊರಹಾಕುತ್ತಿದ್ದಾರೆ.

ಕಲ್ಯಾಣದ ಜಿಲ್ಲೆಗಳ ಅನೇಕರು ಮುಂದಿನ ದಿನಗಳಲ್ಲಿ ಸಂಪುಟ ವಿಸ್ತರಣೆಯಾಗುತ್ತದೆ, ಸಚಿವರನ್ನಾಗಿ ಮಾಡುತ್ತಾರೆ, ಆ ಮಾತಿರಲಿ, ಮೊದಲ ಹಂತದಲ್ಲೇ ತಾವು ಕಲ್ಯಾಣದ ಪರವಾಗಿದ್ದೇವೆ. ನಿಜ ಕಲ್ಯಾಣವೇ ನಮ್ಮ ಕನಸು ಎಂದು ಸಾರುವ ಮೂಲಕ ಇಲ್ಲಿನ ಜನ ನಾಯಕರಿಗೆ ಸಂಪುಟದಲ್ಲಿ ಹೆಚ್ಚಿನ ಆದ್ಯತೆ ನೀಡಬಹುದಿತ್ತಲ್ಲ ಎಂದು ಸಾಮಾನ್ಯ ಜನರೂ ಕಾಂಗ್ರೆಸ್‌ನ ಸಂಪುಟ ಮೊದಲ ಹಂತದಲ್ಲಿನ ಈ ಕೊರತೆಯನ್ನು ಎತ್ತಿ ತೋರಿಸಿ ಟೀಕಿಸುತ್ತಿದ್ದಾರೆ.

ಕಲ್ಯಾಣದ ಪರವಾಗಿದ್ದೇವೆ. ಕಲ್ಯಾಣಕ್ಕೇ 10 ಂಶಗಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆಂದು ಹೇಳುವ ಕಾಂಗ್ರೆಸ್ಸಿಗರಿಗೆ ಮೊದಲ ಹಂತದ ಸಂಪುದಲ್ಲಿ ಕಲ್ಯಾಣದಿಂದ ಯಾರೂ ಜನನಾಯಕರು ಸಿಗಲಿಲ್ಲವೆ? ಮುಂದಿನ ವಿಸ್ತರಣೆ ಅದ್ಯಾವಾಗ ಆಗುವುದೋ, ವಾರ, ತಿಂಗಲುಗಳೇ ಉರುಳಬಹುದು ಎಂದು ಅನೇಕರು ತಮ್ಮ ಮನದಾಳದ ನೋವನ್ನು ಹೊರಹಾಕುತ್ತಿದ್ದಾರೆ.

ಕಾಂಗ್ರೆಸ್‌ ಪಕ್ಷದಿಂದ ಗೆದು ಬಂದಿರುವ ಇಲ್ಲಿನ ಜನಪ್ರತಿನಿಧಿಗಳಲ್ಲಿಯೂ ಈ ಅಸಮಾಧಾನವಿದೆಯಾದರೂ ಅವರು ಮೇಲೆ ಎಲ್ಲಿಯೂ ತೇರಿಸದಂತೆ ಮೌನವಾಗಿದ್ದಾರೆ. ಯಾವ್ಕುಕೂ ಹೈಕಮಾಂಡ್‌ ಎಲ್ಲ ನಿರ್ಣಯಿಸುತ್ತದೆಂದು ಹೇಳುತ್ತಿದ್ದಾರೆ.

ಕಲ್ಯಾಣ ನಾಡಿನ ಹಿರಿಯ ಕಾಂಗ್ರೆಸ್ಸಿಗರಾದ ಕಲಬುರಗಿಯಿಂದ ಡಾ. ಅಜಯ್‌ ಸಿಂಗ್‌, ಡಾ. ಶರಣಪ್ರಕಾಶ ಪಾಟೀಲ್‌, ಬಿಆರ್‌ ಪಾಟೀಲ್‌, ಕೊಪ್ಪಳದಿಂದ ಬಸವರಾಜ ರಾಯರೆಡ್ಡಿ, ಬಳ್ಳಾರಿಯಿಂದ ಬಿ ನಾಗೇಂದ್ರ, ಬೀದರ್‌ನಿಂದ ಈಶ್ವರ ಖಂಡ್ರೆ, ಯಾದಗಿರಿಯಿಂದ ಶರಣಬಸಪ್ಪ ದರ್ಶನಾಪುರ ಇವರು ಸಂಭಾವ್ಯ ಸಚಿವರ ಪಟ್ಟಿಯಲ್ಲಿದ್ದರೂ ಮೊದಲ ಹಂತದಲ್ಲಿ ಇವರ್ಯಾರಿಗೂ ಸಚಿವಸ್ಥಾನ ದಕ್ಕಿಲ್ಲ.

ಕಾಂಗ್ರೆಸ್‌ನಿಂದ ಗೆದ್ದು ಸದನ ಪ್ರವೇಶಿಸಿರುವ ಅನೇಕರು ರಾಜಕೀಯದಲ್ಲಿ ಇವೆಲ್ಲ ಇದ್ದದ್ದೇ, ಇವು ಸಹಜ ಕೂಡಾ. ನಾವು ನಮ್ಮ ಆಶೆ, ನಿರೀಕ್ಷೆ ಬಿಡಬಾರದು. ಬರು ದಿನಗಳಲ್ಲಿ ಕ್ಯಾಬಿನೆಟ್‌ ವಿಸ್ತಣೆಯಾಗತ್ತದೆ. ನಮಗೆಲ್ಲರಿಗೂ ಸಂಪುಟದಲ್ಲಿ ಸಚಿವ ಸ್ಥಾನ ದೊರಕುವ ಸಾಧ್ಯತೆಗಳು ಇವೆ ಎಂದು ಕನ್ನಡಪ್ರಭ ಜೊತೆ ಮಾತನಾಡಿದ ಅನೇಕ ಕಾಂಗ್ರೆಸ್‌ ಶಾಸಕರು ಹೇಳಿದ್ದಾರೆ.

ಕಳೆದ ಬಾರಿಗೆ ಕಲ್ಯಾಣದಲ್ಲಿ 41ರಲ್ಲಿ 18ರಲ್ಲಿ ಮಾತ್ರ ಗೆದ್ದು ತನ್ನ ಪಾಡಿಗಿದ್ದ ಕಾಂಗ್ರೆಸ್‌ ಈ ಬಾರಿ 29ರಲ್ಲಿ ಗೆದ್ದು ಬೀಗಿದ್ದರೂ ಮೊದಲ ಹಂತದಲ್ಲಿ ಯಾಕೆ ಈ ರೀತಿ ಕ್ಯಾಬಿನೆಟ್‌ನಲ್ಲಿ ಸ್ಥಾನಮಾನ ನೀಡುವಲ್ಲಿಯೂ ಮೀನಮೇಷ ಎಂದು ಹೈಕಮಾಂಡ್‌ ನಿರ್ಣಯಗಳ ಬಗ್ಗೆಯೂ ಜನರನೇಕರು ಖಾರವಾಗಿಯೇ ಪ್ರಶ್ನೆ ಮಾಡುತ್ತ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.

ಸೋಲುವ ಭಯದಿಂದ ಸ್ಪೀಕರ್‌ ಆಗಲು ಬಹುತೇಕರು ಹಿಂದೇಟು!

ಸಿಎಂ, ಡಿಸಿಎಂ ಜೊತೆಗೇ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಪಡೆಯೋದೇ ಮಹತ್ವದ್ದು. ಮುಂದಿನ 2ನೇ, 3ನೇ ಹಂತದಲ್ಲಿ ಮಂತ್ರಿಗಿರ ಸಿಗೋದು ಅದರಲ್ಲೇನು ಮಜಾ ಇರೋದಿಲ್ಲಬಿಡ್ರಿ, ಕಲ್ಯಾಣದ ಬಗ್ಗೆ ಕಾಂಗ್ರೆಸ್‌ಗೆ ನಿಜವಾದಂತಹ ಕಳಕಳಿ ಇದ್ದಿದ್ದರೆ ಇನ್ನೂ ಹಚ್ಚಿನವರಿಗೆ ಇಲ್ಲಿಂದ ಕ್ಯಾಬಿನೆಟ್‌ನಲ್ಲಿ ಸೇರಿಸಿಕೊಳ್ಳುತ್ತಿತ್ತು. ತÊನ್ನ ಮೊದಲ ಹಂತದಲ್ಲೇ ಕಾಂಗ್ರೆಸ್ಸಿಗರು ತಾವೂ ಕಲಾಣದ ಪ್ರತಿ ಅಷ್ಟಕ್ಕಷ್ಟೆಎಂಬುದನ್ನು ತೋರಿಸಿಕೊಟ್ಟಿದ್ದಾರೆಂದು ಜನತೆ ನೂತನ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಕಲ್ಯಾಣದರಿಗೆ ದೂರ ಇಟ್ಟಿರೋದನ್ನ ಪ್ರಸ್ನಿಸಿ ಟೀಕಿಸುತ್ತಿದ್ದಾರೆ.

Follow Us:
Download App:
  • android
  • ios