ಸೋನಿಯಾ ಗಾಂಧಿ ಅವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಿಡುಗಡೆಯಾದ ಬೆನ್ನಲ್ಲೇ ಕಂಗನಾ ರಣಾವತ್ ಸರಣಿ ಪೋಸ್ಟ್ ಮಾಡಿದ್ದಾರೆ. ಇಂದಿರಾ, ರಾಜೀವ್, ಸಂಜಯ್ ಗಾಂಧಿ ಸಾವುಗಳ ಬಗ್ಗೆ ಕಂಗನಾ ಎತ್ತಿರುವ ಪ್ರಶ್ನೆಗಳು ವಿವಾದ ಸೃಷ್ಟಿಸಿವೆ.

ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿಯಾಗಿರುವ ಸೋನಿಯಾ ಗಾಂಧಿ(Sonia Gandhi) ಅವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್'(Belonging: A Journey of Love) ಬಿಡುಗಡೆಯಾದ ಬೆನ್ನಲ್ಲೇ ಇದೀಗ ಇಡೀ ದೇಶದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸೋನಿಯಾ ಆತ್ಮಕಥೆ ಬೆನ್ನಲ್ಲೇ ಕಂಗನಾ ಹೊಸ ವಿವಾದ

ಸೋನಿಯಾ ಗಾಂಧಿಯವರ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಬಿಡುಗಡೆಯಾಗಿರುವ ಬೆನ್ನಲ್ಲೇ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ ನಿಗೂಢ ಸಾವಿನ ಸುತ್ತಲಿನ ಸಂದರ್ಭಗಳನ್ನ ಉಲ್ಲೇಖಿಸಿ ಕಂಗನಾ ರಣಾವತ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಸರಣಿ ಪೋಸ್ಟ್‌ಗಳು ಹೊಸ ವಿವಾದವೆಬ್ಬಿಸಿವೆ. ಅಷ್ಟೇ ಅಲ್ಲದೆ ಮೇನಕಾ ಗಾಂಧಿ ಮತ್ತು ಅವರ ಅತ್ತೆ-ಮಾವನ ನಡುವಿನ ಸಮಸ್ಯೆಗಳು, ತೊಂದರೆಗೊಳಗಾದ ಬಗ್ಗೆ ರಣಾವತ್ ಹಂಚಿಕೊಂಡಿದ್ದಾರೆ.

ಕಂಗನಾ ರಣಾವತ್ ಈ ಹಿಂದೆ ತಮ್ಮ 'ಎಮರ್ಜೆನ್ಸಿ' ಚಿತ್ರದಲ್ಲಿ ತುರ್ತು ಪರಿಸ್ಥಿತಿ ಚಿತ್ರೀಕರಣ ಸಂದರ್ಭದಲ್ಲಿ ನಾನು ಗಾಂಧಿ ಕುಟುಂಬದ ರಾಜಕಾರಣ, ಭಾರತದ ರಾಜಕಾರಣ, ತುರ್ತು ಪರಿಸ್ಥಿತಿ ದಿನಗಳ ಬಗ್ಗೆ ಆಳವಾಗಿ ಸಂಶೋಧನೆ ನಡೆಸಿದ್ದೇನೆ ಎಂದು ಕಂಗನಾ ಹೇಳಿಕೊಂಡಿದ್ದಾರೆ. ಪ್ರಸ್ತುತ ವಿಶ್ವದಾದ್ಯಂತ ಸಂಚಲನ ಮೂಡಿಸಿರುವ NVIDIA ಹನಿ-ಟ್ರ್ಯಾಪ್ ವಿವಾದವನ್ನು ಉಲ್ಲೇಖಿಸಿರುವ ಕಂಗನಾ ರಣಾವತ್, ಗಾಂಧಿ ಕುಟುಂಬಕ್ಕೆ ಈ ನಿಗೂಢ ವಿದೇಶಿ ಪ್ರಜೆ ಭಾರತದೊಳಗೆ ಪ್ರವೇಶ ಪಡೆದ ಬಗ್ಗೆಯೂ ಹೋಲಿಕೆ ಮಾಡಿದ್ದಾರೆ. ಅಂದರೆ ಸೋನಿಯಾ ಗಾಂಧಿ ಭಾರತೀಯರಲ್ಲ, ವಿದೇಶಿ ಪ್ರಜೆಯಾಗಿದ್ದು. ಹಿಂದೆ ಅದೇ ರೀತಿ ಹನಿಟ್ರ್ಯಾಪ್ ಮಾಡಿ ರಾಜೀವ್ ಗಾಂಧಿಯನ್ನ ಮದುವೆಯಾಗಿ ಭಾರತಕ್ಕೆ ಬಂದಿರಬಹುದೇ, ಗಾಂಧಿ ಕುಟುಂಬದಲ್ಲಾದ ರಾಜೀವ್, ಸಂಜಯ್, ಇಂದಿರಾ ಗಾಂಧಿ ಸಾವುಗಳ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿ ಸೋನಿಯಾ ಗಾಂಧಿಯವರ ರಾಜಕೀಯ ಪ್ರಾಮುಖ್ಯತೆಯ ಸುತ್ತ ಹಲವು ಹೋಲಿಕೆಗಳನ್ನು ಮಾಡಿದ್ದಾರೆ.

ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಂತೆ, 'ಎಲ್ಲರೂ NVIDIA ಹನಿ ಟ್ರ್ಯಾಪ್ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಈ ಬಗ್ಗೆ ಯಾರಿಗೂ ಅನುಮಾನ ಬರುತ್ತಿಲ್ಲವೇಕೆ? ಇಂದಿರಾ ಗಾಂಧಿ ಕಾಲದಲ್ಲಾದ ತುರ್ತು ಪರಿಸ್ಥಿತಿ ಬಗ್ಗೆ ಚಿತ್ರ ಮಾಡುವಾಗ ನಾನು ಭಾರತೀಯ ರಾಜಕೀಯ ಮತ್ತು ಗಾಂಧಿ ಕುಟುಂಬದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದೇನೆ. ಆದರೆ ನನಗೆ ಇದುವರೆಗೂ ಅರ್ಥವಾಗದ ವಿಷಯವೆಂದರೆ ಒಬ್ಬ ನಿಗೂಢ ವಿದೇಶಿ ಪ್ರಜೆ(ಸೋನಿಯಾ ಗಾಂಧಿ) ಗಾಂಧಿ ಕುಟುಂಬಕ್ಕೆ ಪ್ರವೇಶಿಸುತ್ತಿದ್ದಂತೆ ಇಂದಿರಾ ಗಾಂಧಿ ಕೊಲ್ಲಲ್ಪಟ್ಟರು, ಸಂಜಯ್ ಗಾಂಧಿ ರಾಜೀವ್ ಗಾಂಧಿ ಭಾರತದ ಆಡಳಿತ ಚುಕ್ಕಾಣಿ ಹಿಡಿದ, ಹಿಡಿಯಬೇಕಿದ್ದ ಎಲ್ಲಾ ಸಂಭಾವ್ಯ ಉತ್ತರಾಧಿಕಾರಿಗಳು ನಿಗೂಢವಾಗಿ ಕೊಲ್ಲಲ್ಪಟ್ಟರು. ಈ ಸಾವುಗಳ ಬಗ್ಗೆ ಯಾರಿಗೂ ಅನುಮಾನ ಬರಲಿಲ್ಲ, ಬದಲಿಗೆ ವಿದೇಶಿ ಪ್ರಜೆ, ಗಾಂಧಿ ಕುಟುಂಬದ ಸೊಸೆ ಎಂದು ಸಹಾನುಭೂತಿ ಗಿಟ್ಟಿಸಿಕೊಂಡರು. ಆದರೆ ಆ ವಿದೇಶಿಯೊಬ್ಬಳು ಭಯೋತ್ಪಾದಕರಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಳು. ಆದರೂ ಅವರು 2014 ರವರೆಗೆ ದಶಕಗಳ ಕಾಲ ಸರ್ಕಾರವನ್ನು ಮುನ್ನಡೆಸುವಲ್ಲಿ ಹೇಗೆ ಯಶಸ್ವಿಯಾದರೆಂಬುದು ನನಗೂ ಇಂದಿಗೂ ಕಾಡುವ ಪ್ರಶ್ನೆ ಎಂದಿದ್ದಾರೆ.

View post on Instagram