ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್‌ನಿಂದ ದಲಿತರಿಗೆ ಮೋಸ: ಸಿ.ಟಿ.ರವಿ

ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ದಲಿತರಿಗೆ ಕಾಂಗ್ರೆಸ್‌ ಮೋಸ ಮಾಡಿತು, ಆದರೆ ಬಿಜೆಪಿ ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಿತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

BJP Leader CT Ravi Slams On Congress Over Reservation gvd

ಚಿಕ್ಕಮಗಳೂರು (ಫೆ.05): ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ದಲಿತರಿಗೆ ಕಾಂಗ್ರೆಸ್‌ ಮೋಸ ಮಾಡಿತು, ಆದರೆ ಬಿಜೆಪಿ ದಲಿತರಿಗೆ ಮೀಸಲಾತಿ ಹೆಚ್ಚಳ ಮಾಡಿತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿ.ಪರಮೇಶ್ವರ್‌ ಹಾಗೂ ಮುನಿಯಪ್ಪ ಅವರನ್ನು ಸೋಲಿಸಿದ್ದು ಕಾಂಗ್ರೆಸ್ಸಿಗರೇ, ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ, ಇದು ಬಹಿರಂಗ ಸತ್ಯ, ನಾನೇ ಸೋಲಿಸಿದ್ದು, ನಾನೇ ಸೋಲಿಸಿದ್ದು ಎಂದು ಸಿದ್ದರಾಮಯ್ಯ ಅವರ ಎದೆಯೊಳಗಿನಿಂದ ಕೇಳಿಸುತ್ತದೆ. 

ಪರಮೇಶ್ವರ್‌ ಸೋಲಿಸಲು ಯಾರಿಗೆ ಹಫ್ತಾ ಕೊಟ್ಟಿದ್ದರು ಎನ್ನುವುದನ್ನು ಅವರೇ ಹೊರಗಡೆ ಹೇಳಿದ್ದಾರೆ. ಸಂಕಟವನ್ನು ಎಷ್ಟುದಿನ ಒಳಗೆ ಇಟ್ಟು ಕೊಳ್ಳಲು ಅಗುತ್ತದೆ ಸ್ಟೋಟವಾಗಲೇಬೇಕು ಎಂದರು. ನಾನು ಆರ್‌ಎಸ್‌ಎಸ್‌ ಅದರಲ್ಲಿ ಯಾವುದೇ ಅನುಮಾನ ಇಲ್ಲ, ಸಂಘ ದೇಶಭಕ್ತಿ ಕಲಿಸುತ್ತದೆ, ಸಂಸ್ಕಾರ ಕಲಿಸುತ್ತದೆ. ನಾನು ಸುಳ್ಳು ಹೇಳುವ ರಾಜಕಾರಣಿ ಅಲ್ಲ. ಸುಳ್ಳು ಹೇಳುವುದು ಯಾರು ಎನ್ನುವುದು ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತು ಎಂದರು. ಚಿಕ್ಕಮಗಳೂರಿಗೆ ಮಂಜೂರಾದ ಮೆಡಿಕಲ್‌ ಕಾಲೇಜು ರದ್ದು ಮಾಡಿದರು. ನಮ್ಮ ಸರ್ಕಾರ ಬಂದ ಮೇಲೆ 630 ಕೋಟಿ ಕೊಟ್ಟು ಮೆಡಿಕಲ್‌ ಕಾಲೇಜು ಕಟ್ಟುತ್ತಿದ್ದೇವೆ. ದತ್ತಪೀಠಕ್ಕೆ ಮೋಸ ಮಾಡಿದರು. 

ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಮೊರೆ ಹೋದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಊರಿಗೆ ಬೆಂಕಿ ಹಾಕಿದ ಗ್ಯಾಂಗಿನವರಿಗೆ ಬೆಂಬಲ ನೀಡಿದ್ದು ಕಾಂಗ್ರೆಸ್‌, ಎಸ್‌ಡಿಪಿಐ ಮೇಲಿನ ಕೇಸು ಹಿಂತೆಗೆದಿದ್ದು ಕಾಂಗ್ರೆಸ್‌ ಸರ್ಕಾರ. ಆದರೂ ನಾವು ಹಿಂತೆಗೆದಿಲ್ಲ ಎಂದು ಸುಳ್ಳು ಹೇಳಿದರು ಎಂದರು. ಬಿಜೆಪಿಗೆ ಒಂದು ಸೀಟು ಲೋಕಸಭಾ ಚುನಾವಣೆಯಲ್ಲಿ ಬರುವುದಿಲ್ಲ ಎಂದರು. ರಾಜ್ಯದ ಜನ 25 ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿದರು. ಬಿ.ಎಸ್‌.ಯಡಿಯೂರಪ್ಪ ಅವರು ಅವರಪ್ಪನಾಣೆ ಸಿಎಂ ಆಗುವುದಿಲ್ಲ ಎಂದು ಸುಳ್ಳು ಹೇಳಿದರು. ಯಡಿಯೂರಪ್ಪ ಸಿಎಂ ಆದರು. ನಾವು ಸುಳ್ಳು ಹೇಳುವವರಲ್ಲ. ನಾವು ಏನು ಹೇಳುತ್ತೇವೆ ಅದನ್ನೇ ಮಾಡುತ್ತೇವೆ. ಏನು ಮಾಡುತ್ತೇವೋ ಅದನ್ನೇ ಹೇಳುತ್ತೇವೆ ಎಂದರು. ಪಾಕಿಸ್ಥಾನದಲ್ಲಿ ಸರ್ವೇ ನಡೆಸಿದೆ ಅಲ್ಲಿ, 150 ಅಲ್ಲ, 200 ಕ್ಷೇತ್ರದಲ್ಲಿಯೂ ಕಾಂಗ್ರೆಸ್‌ ಗೆಲ್ಲಬಹುದು, ನಮ್ಮ ರಾಜ್ಯ, ದೇಶದಲ್ಲಿ ಬರಲ್ಲ, ಕಾಂಗ್ರೆಸ್‌ಗೆ ಮತ ಹಾಕುವವರು ದಿನೇ ದಿನೇ ಕಡಿಮೆಯಾಗುತ್ತಿದ್ದಾರೆ, ಇಲ್ಲಿ ಠೇವಣಿ ಉಳಿಸಿಕೊಳ್ಳುವುದು ಕಷ್ಟಎಂದು ಹೇಳಿದರು.

ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್‌ ಪಾಸ್‌: ಸಿಎಂ ಬೊಮ್ಮಾಯಿ

ಈಶ್ವರಪ್ಪ ಮಂತ್ರಿ ಆಗಬೇಕಿತ್ತು: ಕೆ.ಎಸ್‌.ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು, ಅವರ ಜಾಗದಲ್ಲಿ ನಾನಿದ್ದರೂ ಅದನ್ನೇ ಹೇಳುತ್ತಿದ್ದೆ. ಪಕ್ಷ ಕಟ್ಟಿದ ನಾಯಕರಲ್ಲಿ ಅವರು ಒಬ್ಬರು, ಅಂದು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದಾರೆ. ತನಿಖೆಯಲ್ಲಿ ಪಾತ್ರವಿಲ್ಲ ಎಂದು ಸಾಭೀತಾಗಿದ್ದು, ಈಗ ಮಂತ್ರಿ ಸ್ಥಾನ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವರ ಗೌರವಕ್ಕೂ ಯಾವುದೇ ಕುಂದು ಉಂಟಾಗಲ್ಲ, ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಪಕ್ಷದ ಗೆಲುವಿಗಾಗಿ ಸಲಹೆಗಳನ್ನು ನೀಡಿದ್ದಾರೆ, ಮಂತ್ರಿಯಾದರೇ ಸಂತೋಷಪಡುವುದರಲ್ಲಿ ನಾನು ಒಬ್ಬ ಎಂದರು.

Latest Videos
Follow Us:
Download App:
  • android
  • ios