ಅರಾಜಕತೆ ಸೃಷ್ಟಿಸಿದ್ರೆ ಕಾಂಗ್ರೆಸ್ ವಿರುದ್ಧ ಕೇಂದ್ರ ಕ್ರಮ: ಸದಾನಂದಗೌ
ಸಿಎಂ ಸಿದ್ದರಾಮಯ್ಯಗೆ ನೈತಿಕತೆಯಿದ್ದರೆ ರಾಜೀನಾಮೆ ನೀಡಿ ಮುಡಾ ಪ್ರಕರಣದ ತನಿಖೆ ಎದುರಿಸಲಿ. ರಾಜ್ಯಪಾಲರು ಬೆದರುಗೊಂಬೆ ಅಲ್ಲ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ ಎಂದ ಮಾಜಿ ಸಿಎಂ ಸದಾನಂದಗೌಡ
ತುಮಕೂರು(ಆ.23): ರಾಜ್ಯಪಾಲರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡುವುದನ್ನು ಕಾಂಗ್ರೆಸ್ ನಾಯಕರು ನಿಲ್ಲಿಸಬೇಕು. ರಾಜ್ಯದಲ್ಲಿ ಹೀಗೆ ಅರಾಜಕತೆ ಸೃಷ್ಟಿಸಿದರೆ ಕೇಂದ್ರ ಸರ್ಕಾರ ಖಂಡಿತವಾಗಿಯೂ ಕ್ರಮ ಕೈಗೊಳ್ಳಲು ಆಲೋಚನೆ ಮಾಡುತ್ತದೆ ಎಂದು ಮಾಜಿ ಸಿಎಂ ಸದಾನಂದಗೌಡ ಎಚ್ಚರಿಕೆ ನೀಡಿದರು.
ನಗರದಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯಗೆ ನೈತಿಕತೆಯಿದ್ದರೆ ರಾಜೀನಾಮೆ ನೀಡಿ ಮುಡಾ ಪ್ರಕರಣದ ತನಿಖೆ ಎದುರಿಸಲಿ. ರಾಜ್ಯಪಾಲರು ಬೆದರುಗೊಂಬೆ ಅಲ್ಲ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ ಎಂದರು.
ಸಿದ್ದರಾಮಯ್ಯನವರೇ 40 ವರ್ಷದ ನಿಮ್ಮ ರಾಜಕೀಯ ಜೀವನದ ಕಪ್ಪುಚುಕ್ಕೆಯನ್ನು ವೈಟ್ನರ್ ಅಳಿಸೀತಾ?: ಕೇಂದ್ರ ಸಚಿವ ಎಚ್‌ಡಿಕೆ
ರಾಜ್ಯದ ಆಡಳಿತ ಯಂತ್ರ ದುರುಪಯೋಗವಾದಾಗ, ಸರ್ಕಾರದ ಖಜಾನೆ ಲೂಟಿಯಾದಾಗ ರಾಜ್ಯಪಾಲರು ಕಾನೂನಾತ್ಮಕ ಕಾರ್ಯಾಚರಣೆ ಮಾಡುತ್ತಾರೆ. ನಿಮ್ಮ ಕರ್ಮಕಾಂಡವನ್ನು ಮುಚ್ಚಿಕೊಳ್ಳಲು ರಾಜ್ಯಪಾಲರ ವಿರುದ್ಧ ಹೀನಾಯವಾಗಿ ನಡೆದುಕೊಳ್ಳುತ್ತಿರುವುದು ಖಂಡನೀಯ. ಸಂವಿಧಾನ ಮತ್ತು ದೇಶ ವಿರೋಧಿ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ವಾಗ್ದಾಳಿ ನಡೆಸಿದರು.