ಬೆಂಗಳೂರು, (ಜುಲೈ.31): ಕರ್ನಾಟ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಿದ್ದ ಬಿ ವೈ ವಿಜಯೇಂದ್ರಗೆ ಪಕ್ಷದಲ್ಲಿ ಬಡ್ತಿ ಸಿಕ್ಕಿದೆ.

ಹೌದು.... ರಾಜ್ಯ ಬಿಜೆಪಿ ಪದಾಧಿಕಾರಿಗಳ ನೇಮಕ ಮಾಡಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಬಿಜೆಪಿ ಉಪಾಧ್ಯಕ್ಷ ಪಟ್ಟ ನೀಡಲಾಗಿದೆ.

ಕರ್ನಾಟಕ ಬಿಜೆಪಿ ಹೊಸ ಪದಾಧಿಕಾರಿಗಳ ನೇಮಕ: ವಿಜಯೇಂದ್ರಗೆ ಬಂಪರ್

ಉಪಾಧ್ಯಕ್ಷರಾಗಿ ವಿಜಯೇಂದ್ರ, ತೇಜಸ್ವಿನಿ ಅನಂತಕುಮಾರ್, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಅರವಿಂದ ಲಿಂಬಾವಳಿ, ನಿರ್ಮಲಾ ಕುಮಾರ್ ಸುರಾನಾ, ಮಾಲೀಕಯ್ಯ ಗುತ್ತೇದಾರ್ ಅವರನ್ನು ನೇಮಿಸಲಾಗಿದೆ.

ವಿಜಯೇಂದ್ರಗೆ ಸ್ಟಾರ್ ತಂದುಕೊಟ್ಟ ಬೈ ಎಲೆಕ್ಷನ್ 

ಯೆಸ್...ಕರ್ನಾಟಕ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಿದ್ದ ಬಿ ವೈ ವಿಜಯೇಂದ್ರ ಅವರು ಇತ್ತೀಚೆಗೆ ನಡೆದ ಬೈ ಎಲೆಕ್ಷನ್‌ನಲ್ಲಿ ಜೆಡಿಎಸ್‌ ಭದ್ರಕೋಟೆ ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಕೇಸರಿ ಬಾವುಟ ಹಾರಿಸುವಲ್ಲಿ ಯಶ್ವಿಯಾಗಿದ್ದರು. ಅಂದಿನಿಂದ ವಿಜಯೇಂದ್ರನ ಸ್ಟಾರ್ ಬದಲಾಯ್ತು. ಸ್ವತಃ ಕೇಂದ್ರ ನಾಯಕರೇ ವಿಜಯೇಂದ್ರ ಅವರಿಗೆ ಕರೆ ಮಾಡಿ ಶಭಾಷ್ ಹೇಳಿದ್ದರು.

JDS ಭದ್ರಕೋಟೆ ಭೇದಿಸಿದ ವಿಜಯೇಂದ್ರಗೆ ಹೈಕಮಾಂಡ್‌ನಿಂದ ರತ್ನಗಂಬಳಿ ಸ್ವಾಗತ

ಈ ಹಿನ್ನೆಲೆಯಲ್ಲಿ ವಿಜಯೇಂದ್ರಗೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಮಹತ್ವದ ಹುದ್ದೆ ಸಿಗುವ ಎಲ್ಲಾ ಲಕ್ಷಣಗಳು ಇದ್ದವು. ಅದರಂತೆ ಕೊನೆಗೆ ಅವರನ್ನ ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

 ವಿಜಯೇಂದ್ರ ಕಣ್ಣಿಟ್ಟಿದ್ದೆ ಬೇರೆ ಹುದ್ದೆ

ಹೌದು...ವಿಜಯೇಂದ್ರ ರಾಜ್ಯ ಬಿಜೆಪಿ ಯುವದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಅದು ದೊರೆಯದಿದ್ದರೆ,  ಪ್ರಧಾನ ಕಾರ್ಯದರ್ಶಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಯಾಕಂದ್ರೆ ಪ್ರಧಾನ ಕಾರ್ಯದರ್ಶಿ ಹುದ್ದೆ ಪಕ್ಷ ಸಂಘಟನೆ ವಿಚಾರದಲ್ಲಿ ಉಪಾಧ್ಯಕ್ಷ ಹುದ್ದೆಗಿಂತ ದೊಡ್ಡದು. ಇನ್ನು ಬಿ ವೈ ವಿಜಯೇಂದ್ರಗೆ ಪ್ರಧಾನ ಕಾರ್ಯದರ್ಶಿ ಮಾಡುವ ಚರ್ಚೆಯೂ ಸಹ ಪಕ್ಷದಲ್ಲಿ ನಡೆದಿತ್ತು. ಆದ್ರೆ, ಆದ್ರೆ ವಿಜಯೇಂದ್ರಗೆ ಫೈನಲಿ ಉಪಾಧ್ಯಕ್ಷನಾಗಿ ನೇಮಕಗೊಳಿಸಲಾಗಿದೆ.

ಭದ್ರಕೋಟೆ ಛಿದ್ರ ಮಾಡಿದ ಚತುರ : ಅಮಿತ್ ಶಾ ಭೇಟಿಯಾದ ವಿಜಯೇಂದ್ರ

ತಂದೆ ಆಶೀರ್ವಾದ ಪಡೆದ ವಿಜಯೇಂದ್ರ

ಅಂದುಕೊಂಡಿದ್ದು ಸಿಕ್ಕಿಲ್ಲವೆಂದು ಮುನುಸಿಕೊಳ್ಳದೇ, ಸಿಕ್ಕಿದ್ದೇ ಶಿವಾ ಅಂತ ವಿಜಯೇಂದ್ರ ರಾಜ್ಯ ಉಪಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ನೇರವಾಗಿ ತಂದೆ ಬಿಎಸ್ ಯಡಿಯೂರಪ್ಪನವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡರು. ಅಲ್ಲದೇ ಆಯ್ಕೆ ಮಾಡಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು, ಸಿಎಂ ಪುತ್ರ, ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಇದೀಗ “ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷ” ಸ್ಥಾನದ ಮಹತ್ವದ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಹೊರಿಸಲಾಗಿದೆ. ಇದಕ್ಕಾಗಿ ಪಕ್ಷದ ವರಿಷ್ಠ ಮಂಡಳಿಗೆ ನಾನೆಂದೂ ಆಭಾರಿ. ಹಿರಿಯರ ಮಾರ್ಗದರ್ಶನ, ಕಾರ್ಯಕರ್ತರ ಸಹಕಾರ, ಜನರ ಆಶೀರ್ವಾದ ಮಾತ್ರ ನನ್ನ ಮುಂದಿನ ಹೆಜ್ಜೆಗಳಿಗೆ ಯಶಸ್ಸಿನ ಮೆಟ್ಟಿಲಾಗಬಲ್ಲದು ಎಂದು ಬರೆದುಕೊಂಡಿದ್ದಾರೆ.