ಬೆಂಗಳೂರು/ನವದೆಹಲಿ, [ಡಿ.11]:  ಹಾಗೆಯೇ ಇದೇ ಮೊದಲ ಬಾರಿಗೆ ಮಂಡ್ಯದ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ [ನಾರಾಯಣಗೌಡ] ಅಭೂತ ಪೂರ್ವ ಗೆಲುವು ಸಾಧಿಸಿದೆ. 

ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಖುಷಿ ಒಂದ್ಕಡೆಯಾದ್ರೆ, ತವರಿನಲ್ಲಿ  ಮೊದಲ ಬಾರಿಗೆ ಕಮಲ ಅರಳಿಸಿದ ಖಷಿ ಇನ್ನೊಂದ್ಕಡೆ. 

ಬಪ್ಪರೇ..! ಅಪ್ಪನ ಸರ್ಕಾರ ಉಳಿವಿಗೆ ಹೆಗಲು ಕೊಟ್ಟ ಮಕ್ಕಳು, ತಂದೆಗೆ ಗೆಲುವಿನ ಉಡುಗೊರೆ

ಕೆಆರ್. ಪೇಟೆಯಲ್ಲಿನ ಬಿಜೆಪಿ ಗೆಲುವು ಯಡಿಯೂರಪ್ಪ ಪಾಲಿಗೆ ಉಳಿದೆಲ್ಲಾ ಗೆಲುವಿಗಿಂತಲೂ ದೊಡ್ಡದು. ಮೂಲತಃ ಕೆ.ಆರ್.ಪೇಟೆ ತಾಲೂಕು ಬೂಕನಕೆರೆಯವರಾದ ಯಡಿಯೂರಪ್ಪಗೆ  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ನನ್ನ ಹುಟ್ಟೂರಲ್ಲಿ ಒಂದು ಸ್ಥಾನವನ್ನೂ ಬಿಜೆಪಿ ಗೆದ್ದಿಲ್ಲ ಅನ್ನೋ ಕೊರಗಿತ್ತು. ಆ ಕೊರಗಿಗೆ ಕಿರಿಯ ಪುತ್ರ ವಿಜಯೇಂದ್ರ  ಮುಕ್ತಿಕೊಟ್ಟರು.

ವಿಜಯೇಂದ್ರಗೆ ರತ್ನಗಂಬಳಿ ಸ್ವಾಗತ
ಹೌದು... ಇದು ಅಕ್ಷರಶಃ ಸತ್ಯ. ಕೆ.ಆರ್.ಪೇಟೆಯಲ್ಲಿ ಕಮಲ ಅರಳಿಸುವಲ್ಲಿ ಅಗಲಿರುಳು ಶ್ರಮಿಸಿದ ಬಿಜೆಪಿ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರಗೆ ಸ್ವತಃ ಹೈಕಮಾಂಡ್ ನಿಂದ ರತ್ನಂಬಳಿ ಸ್ವಾಗತ ಸಿಕ್ಕಿದೆ.  ಗೆಲುವಿನ ರೂವಾರಿ ಬಿ.ವೈ.ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೂರವಾಣಿ ಕರೆ ಮಾಡಿ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.

ಲೋಕಸಭೆ ಎಲೆಕ್ಷನ್‌ನಲ್ಲಿನ ಚಾಳಿ ಮುಂದುವರಿಸಿದ JDS:ಕೆ.ಆರ್.ಪೇಟೆಯಲ್ಲಿ ಕಮಲ ಅರಳಲು 5 ಕಾರಣ..!

ನಿನ್ನೆ [ಮಂಗಳವಾರ] ಸ್ವತಃ ಅಮಿತ್ ಶಾ,  ವಿಜಯೇಂದ್ರಗೆ ಫೋನ್ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ನವದೆಹಲಿಗೆ ಬಂದು ತಮ್ಮನ್ನು ಭೇಟಿ ಮಾಡುವಂತೆ ವಿಜಯೇಂದ್ರಗೆ ಸೂಚಿಸಿದ್ದಾರೆ. 

ದೆಹಲಿ ಹಾರಿದ ವಿಜಯೇಂದ್ರ
ಅಮಿತ್ ಶಾ ಅವರಿಂದ ಸೂಚನೆ ಬರುತ್ತಿದ್ದಂತೇ ವಿಜಯೇಂದ್ರ ಇಂದು [ಬುಧವಾರ] ದೆಹಲಿಗೆ ಹಾರಿದರು. ಆದ್ರೆ, ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ತರುವಲ್ಲಿ ಶಾ ಬ್ಯುಸಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರಗೆ ಶಾ ಭೇಟಿಗೆ ಸಮಯ ಸಿಕ್ಕಿಲ್ಲ. 

ಒಟ್ಟಿನಲ್ಲಿ ಮರಭೂಮಿಯಲ್ಲಿ ನೀರು ಹುಡುಕಿದಂತೆ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಇಟ್ಟು ವಿಜಯಪತಾಕೆ ಹಾರಿಸಿದ ವಿಜಯೇಂದ್ರಗೆ ಮುಂದಿನ ದಿನಗಳಲ್ಲಿ ಹೈಕಮಾಂಡ್ ಒಂದೊಳ್ಳೆ ಹುದ್ದೆ ನೀಡುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.