ನವದೆಹಲಿ [ಡಿ.14] : ರಾಜ್ಯ ಬಿಜೆಪಿ ಮುಖಂಡ ಹಾಗೂ ಬಿ.ಎಸ್ ಯಡಿಯೂರಪ್ಪ ಪುತ್ರ  ವಿಜಯೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ. 

"

ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ವಿಯೇಂದ್ರ ಭೇಟಿ ಮಾಡಿದ ವಿಜಯೇಂದ್ರ ಈ ಬಗ್ಗೆ ಟ್ವೀಟ್ ಮಾಡಿದ್ದು, ಅವರ ದಿಟ್ಟತನ, ಸಂಘಟನಾ ಚಾತುರ್ಯ, ಛಲವಂತಿಕೆ, ನಾಯಕತ್ವ ನನ್ನನ್ನೂ ಸೇರಿದಂತೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಪ್ರೇರಣಾದಾಯಕ ಎಂದಿದ್ದಾರೆ. 

ಇನ್ನು ನಾಯಕರ ಭೇಟಿ ವೇಳೆ ಕುಶಲೋಪರಿಗಳು ನಡೆದಿದ್ದು, ಹಲವು ರಾಜಕೀಯ ವಿಚಾರಗಳು, ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆಯೂ ಕೂಡ ಚರ್ಚೆ ನಡೆದಿದೆ. 

ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದ್ದು, ಈ ಮೂಲಕ ಸರ್ಕಾರ ಇನ್ನಷ್ಟು ಗಟ್ಟಿಯಾಗಿದ್ದಲ್ಲದೇ ಇದೇ ಮೊದಲ ಬಾರಿಗೆ ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಜಯಗಳಿಸಿದ್ದರು. ಇದಕ್ಕೆ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರೇ ಪ್ರಮುಖ ಕಾರಣರಾಗಿದ್ದರು.

 

ಕೆ.ಆರ್ ಪೇಟೆ ಕ್ಷೇತ್ರದಲ್ಲಿ 15 ದಿನಗಳ ಕಾಲ ವಾಸ್ತವ್ಯ ಹೂಡಿದ್ದ ವಿಜಯೇಂದ್ರ ತಮ್ಮ ಸಂಘಟನೆ ಹಾಗೂ ಚಾತುರ್ಯದಿಂದ ಕಾರ್ಯಕರ್ತರನ್ನು ಒಗ್ಗೂಡಿಸಿ ವಿಜಯದ ನೇತೃತ್ವ ವಹಿಸಿದ್ದರು. ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಇನ್ನಷ್ಟು ಬಲ ತುಂಬಿದಂತಾಗಿದ್ದು, ಈ ನಿಟ್ಟಿನಲ್ಲಿ ಬಿಜೆಪಿ ಹೈ ಕಮಾಂಡ್ ಫುಲ್ ಖುಷ್ ಆಗಿದ್ದು, ಅವರ ಕಾರ್ಯಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. 

JDS ಭದ್ರಕೋಟೆ ಭೇದಿಸಿದ ವಿಜಯೇಂದ್ರಗೆ ಹೈಕಮಾಂಡ್‌ನಿಂದ ರತ್ನಗಂಬಳಿ ಸ್ವಾಗತ...

ಅಲ್ಲದೇ ಅಮಿತ್ ಶಾ ಸ್ವತಃ ವಿಜಯೇಂದ್ರಗೆ ಕರೆ ಮಾಡಿ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದರು. 

ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸರ್ಕಾರ ಭದ್ರವಾಗಿದ್ದು, ಕಾಂಗ್ರೆಸ್ ಕೇವಲ 2 ಸ್ಥಾನ ಪಡೆದರು ಜೆಡಿಎಸ್ ಶೂನ್ಯ ಫಲಿತಾಂಶ ದಾಖಲಿಸಿತ್ತು.