Asianet Suvarna News Asianet Suvarna News

ಅಸ್ತಿತ್ವವೇ ಇಲ್ಲದ ಶಿರಾದಲ್ಲಿ ವಿಜಯೇಂದ್ರ ಮಾಡಿದ ಮ್ಯಾಜಿಕ್‌ ಏನು?

ಅಸ್ತಿತ್ವವೇ ಇಲ್ಲದ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಬಿಜೆಪಿ ವಿಜಯಕ್ಕೆ ವಿಜಯೇಂದ್ರ ಮಾಡಿದ ಮ್ಯಾಜಿಕ್ ಏನು..? 

BY Vijayendra Magic in Shira Constituency snr
Author
Bengaluru, First Published Nov 11, 2020, 9:09 AM IST

ಶಿರಾ (ನ.11):  ಕೇವಲ ಮೂರು ವಾರಗಳ ಹಿಂದಿನ ಕಥೆ. ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕುಗಳಲ್ಲಿ ಒಂದಾದ ತುಮಕೂರು ಜಿಲ್ಲೆ ಶಿರಾದಲ್ಲಿ ಸ್ಥಳೀಯವಾಗಿ ಬಿಜೆಪಿ ಅಷ್ಟೊಂದು ಸದೃಢವಾಗಿರಲಿಲ್ಲ. ನಗರಸಭೆಯಾಗಲಿ, ತಾಲೂಕು ಪಂಚಾಯತ್‌ ಆಗಲಿ ಪಕ್ಷದ ಕೈಯಲ್ಲಿರಲಿಲ್ಲ, ಜಿಲ್ಲಾ ಪಂಚಾಯತ್‌ಗೆ ಬಿಜೆಪಿಯಿಂದ ಒಬ್ಬರೂ ಆಯ್ಕೆಯಾಗಿರಲಿಲ್ಲ. ಉಪ ಚುನಾವಣೆ ಹಿನ್ನೆಲೆಯಲ್ಲಿ ಮೂರು ವಾರಗಳ ಹಿಂದೆ ಶಿರಾ ನಗರಕ್ಕೆ ಬಂದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಶಿರಾದಲ್ಲಿ ಕೆ.ಆರ್‌. ಪೇಟೆ ಮಾದರಿಯಲ್ಲಿ ಚುನಾವಣೆ ನಡೆಸಬೇಕೆಂದು ಹೇಳಿದಾಗ ಸ್ಥಳೀಯ ಮುಖಂಡರೆಲ್ಲಾ ಅಚ್ಚರಿಪಟ್ಟಿದ್ದು ನಿಜ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಿದ್ದದ್ದು ಕೇವಲ 16 ಸಾವಿರ ಮತಗಳು. ಹೀಗಾಗಿ ವಿಜಯೇಂದ್ರ ಮಾತಿಗೆ ಸ್ವಪಕ್ಷದವರೂ ಸೇರಿದಂತೆ ಜೆಡಿಎಸ್‌, ಕಾಂಗ್ರೆಸ್‌ ಪಕ್ಷದವರೂ ವ್ಯಂಗ್ಯವಾಡಿದ್ದರು. ಆದರೆ ಈಗ ಮೂರೇ ವಾರದಲ್ಲಿ ಶಿರಾ ಉಪಚುನಾವಣೆಯಲ್ಲಿ ವಿಜಯೇಂದ್ರರ ತಂತ್ರಗಾರಿಕೆಗೆ ಎಲ್ಲರೂ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತಾಯಿತು.

ವಿಜಯೇಂದ್ರ ಶಿರಾಕ್ಕೆ ಬಂದಾಗ ಬಿಜೆಪಿಗೆ ಬೂತ್‌ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಇರಲಿಲ್ಲ. ಶಿರಾ ತಾಲೂಕಿನಾದ್ಯಂತ ಬಿಜೆಪಿ ನೆಲೆಯೇ ಇರಲಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಸಹ ಗೆದ್ದಿರಲಿಲ್ಲ. ಆದರೆ ಶಿರಾದಲ್ಲೇ ಕ್ಯಾಂಪ್‌ ಮಾಡಲು ವಿಜಯೇಂದ್ರ ಮತ್ತೆ ಬಂದಾಗ ಉತ್ಸಾಹ ಮೂಡತೊಡಗಿತು. ವಿಜಯೇಂದ್ರ ಶಿರಾಕ್ಕೆ ಬಂದವರೇ ಬೂತ್‌ ಮಟ್ಟದಲ್ಲಿ ಪಕ್ಷವನ್ನು ಕಟ್ಟಲು ಆರಂಭಿಸಿದರು. ಮುನಿಸಿಕೊಂಡವರು, ಪಕ್ಷ ಬಿಟ್ಟು ಹೋದವರನ್ನು ಒಟ್ಟಿಗೆ ಸೇರಿಸಿ ಅವರಲ್ಲಿ ವಿಶ್ವಾಸ ಮೂಡಿಸುವ ಮಾತುಗಳನ್ನು ಆಡಿದರು. ಅದರ ಜೊತೆಯಲ್ಲೇ ಶಿರಾ ತಾಲೂಕಿನ ಯುವಕರನ್ನು ಸಂಘಟಿಸಲು ಯತ್ನಿಸಿದರು. ನೋಡ ನೋಡುತ್ತಿದ್ದಂತೆ ಬಿಜೆಪಿಯಲ್ಲಿ ವಿಜಯೇಂದ್ರರ ಸಾರಥ್ಯದಲ್ಲಿ ಬಿಜೆಪಿ ಟ್ರೆಂಡಿಂಗ್‌ ಶುರುವಾಯಿತು.

ಶಿರಾ ತಾಲೂಕಿನಲ್ಲಿದ್ದ ಎಲ್ಲಾ 330 ಬೂತ್‌ಗಳಲ್ಲೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಖಂಡರನ್ನು ಹುಟ್ಟುಹಾಕಲು ಆರಂಭಿಸಿದರು. ಬೂತ್‌ಗೊಬ್ಬ ನಾಯಕನನ್ನು ಹುಟ್ಟುಹಾಕಿದರು. ಬಹುತೇಕ ಯುವಕರಿಗೆ ಆದ್ಯತೆ ನೀಡುತ್ತಾ ಬಂದರು. ಬಳಿಕ ಸಂಘಟನೆ ದೃಷ್ಟಿಯಿಂದ ಎ, ಬಿ, ಸಿ, ಡಿ ಕೆಟಗರಿ ಎಂದು ಮಾಡಿಕೊಂಡರು. ಎ ಅಂದರೆ ಅವರು ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಬಿ ಅಂದರೆ ಬಿಜೆಪಿಯಲ್ಲಿದ್ದುಕೊಂಡು ಬೇರೆ ಪಕ್ಷಗಳೊಂದಿಗೆ ಮೃದು ಧೋರಣೆ ಹೊಂದಿದವರು, ಸಿ ಅಂದರೆ ಬಿಜೆಪಿಯಲ್ಲಿದ್ದು ಬೇರೆ ಪಕ್ಷಕ್ಕೆ ವಲಸೆ ಹೋಗಿದ್ದವರು. ಇನ್ನು ಡಿ ಅಂದರೆ ಯಾವುದೇ ಕಾರಣಕ್ಕೂ ಅವರು ಬಿಜೆಪಿಗೆ ಬರುವುದಿಲ್ಲ ಅನ್ನುವವರು. ಆಗ ವಿಜಯೇಂದ್ರ ಅವರು ಬಿ, ಸಿ ಮತ್ತು ಡಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಅವರ ವಿಶ್ವಾಸವನ್ನು ಗೆದ್ದರು.

ಡಿ.ಕೆ.ಸುರೇಶ್ ಜೊತೆ ಹೊಂದಾಣಿಕೆ : ಗೆದ್ದ ಮುನಿರತ್ನ ...

ಪಂಚ ಪಾಂಡವರ ಟೀಮ್‌

ಇದಾದ ಬಳಿಕ ಪ್ರತಿ ಯುವಕರ ಮನವೊಲಿಸಲು ಮುಂದಾದರು. ಅವರಿಗೆ ವಿಶೇಷ ಜವಾಬ್ದಾರಿ ಕೊಡಲು ಹೊರಟರು. ಈ ಮಧ್ಯೆ ಪಂಚ ಪಾಂಡವರ ಟೀಮ್‌ ಸಿದ್ಧವಾಯಿತು. ಪಂಚ ಪಾಂಡವರ ಟೀಮ್‌ನಲ್ಲಿ ಅರ್ಜುನರಾದರು ವಿಜಯೇಂದ್ರ. ಅವರ ಜೊತೆ ಹಾಸನ ಶಾಸಕ ಪ್ರೀತಂಗೌಡ ಬೆನ್ನೆಲುಬಾಗಿ ನಿಂತರು. ಮೂರು ವಾರಗಳ ಕಾಲ ಹಗಲು, ರಾತ್ರಿಯೆನ್ನದೆ ಕ್ಷೇತ್ರವನ್ನು ಸುತ್ತಿ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿದರು. ಮೊದಲು ಮಾಹಿತಿಯನ್ನು ಕಲೆ ಹಾಕಿದರು. ಕ್ಷೇತ್ರದ ಭೌಗೋಳಿಕತೆ, ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿಮಾಡಿದರು.

ಕೇಸರಿ ಶಾಲು ಟ್ರೆಂಡಿಂಗ್‌

ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಗ್ಗೆ ಕಾರ್ಯಕರ್ತರು ಮತ್ತು ಮತದಾರರಲ್ಲಿ ನಿರಾಶೆ ಭಾವನೆ ಮೂಡುತ್ತಿತ್ತು. ಆದರೆ ವಿಜಯೇಂದ್ರ ಶಿರಾಕ್ಕೆ ಕಾಲಿಟ್ಟದಿನದಿಂದ ಮಿಂಚಿನ ಸಂಚಾರ ಶುರುವಾಯ್ತು. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರ ಸಭೆ, ಯುವಕರಿಗೆ ಚುನಾವಣಾ ಜವಾಬ್ದಾರಿ ಕೊಟ್ಟಬೆನ್ನಲ್ಲೇ ಇಡೀ ಕ್ಷೇತ್ರದಾದ್ಯಂತ ಕೇಸರಿ ಶಾಲಿನ ಟ್ರೆಂಡಿಂಗ್‌ ಶುರು ಮಾಡಿದರು ವಿಜಯೇಂದ್ರ. ಎಲ್ಲಾ ವಯೋಮಾನದವರ ಕೊರಳಲ್ಲಿ ಕೇಸರಿ ಶಾಲು ರಾರಾಜಿಸುವಂತೆ ಮಾಡಿದರು. ಪಕ್ಷಕ್ಕೆ ಬರುವವರಿಗೆ, ಪಕ್ಷದ ಕಾರ್ಯಕರ್ತರಿಗೆಲ್ಲಾ ಶಾಲು ನೀಡಲಾಯಿತು. ಹೀಗಾಗಿ ಶಿರಾ ತಾಲೂಕಿನಾದ್ಯಂತ ಕೇಸರಿ ಶಾಲಿನ ದೊಡ್ಡ ಟ್ರೆಂಡಿಂಗ್‌ ಆರಂಭವಾಯಿತು. ಜೊತೆಗೆ ಕೇಸರಿ ಶಾಲು ಹೊದ್ದ ಯುವಕರ ಗುಂಪು ಸೆಲ್ಫಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಹೊಸ ಹೊಸ ಟ್ರೆಂಡಿಂಗ್‌ಗೆ ಅಡಿ ಇಟ್ಟರು.

ಮಹಿಳಾ ಮತದಾರರ ಸೆಳೆತ

ಮುಂದಿನ ಹಂತವಾಗಿ ಮಹಿಳಾ ಮತದಾರರನ್ನು ಬಿಜೆಪಿಗೆ ಆಕರ್ಷಿಸಲು ಮುಂದಾದರು. ಜೆಡಿಎಸ್‌ನಿಂದ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿದ್ದರಿಂದ ಹೆಚ್ಚಿನ ಮತಗಳು ಜೆಡಿಎಸ್‌ಗೆ ವಾಲಬಹುದೆಂದು ದೊಡ್ಡ ಮಹಿಳಾ ಕಾರ್ಯಪಡೆಯನ್ನೇ ನಿರ್ಮಿಸಿಬಿಟ್ಟರು. ಪ್ರತಿ ಬೂತ್‌ನಲ್ಲೂ ಮಹಿಳಾ ಪ್ರತಿನಿಧಿಗಳಿಂದ ಕ್ಯಾಂಪೇನ್‌ ಮಾಡಿಸಿದರು. ಇದೆಲ್ಲದರ ಜೊತೆಗೆ ಬರದ ನಾಡಾದ ಶಿರಾದ ಮದಲೂರು ಕೆರೆಗೆ ನೀರು ಹರಿಸುವ ಭರವಸೆಯನ್ನು ನೀಡಿದರು. ಅಲ್ಲದೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಂದ ಮದಲೂರಿನಲ್ಲೇ ಸಮಾವೇಶ ಮಾಡಿಸಿದರು. ಇದೆಲ್ಲದರ ಫಲವಾಗಿ ಮೂರು ವಾರಗಳ ಹಿಂದೆ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಮೂದಲಿಸುತ್ತಿದ್ದವರೆ ಪಕ್ಷ ಸದೃಢವಾಗಿದ್ದನ್ನು ನೋಡಿ ಅಚ್ಚರಿ ಬಿಟ್ಟರು. ನೋಡ ನೋಡುತ್ತಿದ್ದಂತೆ ಎರಡೂ ಪಕ್ಷಗಳ ದೊಡ್ಡ ದೊಡ್ಡ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಲ್ಲುವಂತಾಯಿತು. 3 ವಾರಗಳ ಪ್ರಚಾರದ ಅಬ್ಬರ ಹೇಗಿತ್ತೆಂದರೆ ಶಿರಾ ತಾಲೂಕಿನಾದ್ಯಂತ ಎಲ್ಲಿ ನೋಡಿದರೂ ಬಿಜೆಪಿ ಕಾರ್ಯಕರ್ತರೇ ಕಾಣುವಂತೆ ನೋಡಿಕೊಂಡರು.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಶಿರಾ ಮೂರನೇ ಶಿಕಾರಿಪುರ ಆಗುತ್ತದೆ ಎಂದು ಘೋಷಿಸಿದರು. ನೀವು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅವರು ಆಡಳಿತ ಪಕ್ಷದ ಶಾಸಕರಾಗುತ್ತಾರೆ. ಹೀಗಾಗಿ ಅಭಿವೃದ್ಧಿಯ ಮಹಾಪೂರವೇ ಶಿರಾಕ್ಕೆ ಹರಿದು ಬರುತ್ತದೆ ಎಂಬ ಘೋಷಣೆಯೂ ತಾಲೂಕಿನಾದ್ಯಂತ ಮೊಳಗಿತು. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರೇ ಇಲ್ಲದ ಶಿರಾದಲ್ಲಿ ಚುನಾವಣೆ ಮುಗಿಯುವುದರೊಳಗೆ ದೊಡ್ಡ ಯುವಪಡೆಯನ್ನೇ ವಿಜಯೇಂದ್ರ ಕಟ್ಟಿದರು.
  
ಜೆಡಿಎಸ್‌ ಮತ್ತು ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಯಾಗುವ ಪ್ರತಿಯೊಬ್ಬರಿಗೂ ಕೇಸರಿ ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು. ಇಡೀ ತಾಲೂಕಿನಾದ್ಯಂತ ಎಲ್ಲಿ ನೋಡಿದರೆ ಕೇಸರಿ ಹವಾ ಆರಂಭವಾಯಿತು. ಇದಲ್ಲದೆ ಎಲ್ಲಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷದ ಅಸಮಾಧಾನಿತರನ್ನು ಭೇಟಿಯಾಗಿ ಅವರನ್ನು ಬಿಜೆಪಿಗೆ ಸೆಳೆಯುವ ಕೆಲಸವನ್ನು ಮಾಡಿದರು. ಇನ್ನು ರಾಜೇಶಗೌಡರಿಗೆ ಟಿಕೆಟ್‌ ನೀಡಿದ್ದರಿಂದ ಅಸಮಾಧಾನಗೊಂಡಿದ್ದ ಕಳೆದ ವಿಧಾನಸಭೆಯ ಬಿಜೆಪಿ ಅಭ್ಯರ್ಥಿ ಎಸ್‌.ಆರ್‌. ಗೌಡ ಹಾಗೂ ಬಿ.ಕೆ. ಮಂಜುನಾಥ ಅವರನ್ನು ಮನವೊಲಿಸಿ ಅವರಿಗೆ ಸರ್ಕಾರದಲ್ಲಿ ಜವಾಬ್ದಾರಿ ಕೊಡುವ ಭರವಸೆ ನೀಡಿ ಬೇರೆ ಪಕ್ಷಕ್ಕೆ ಹೋಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ಮುಂದಿನ ಹಂತವಾಗಿ ಮಹಿಳಾ ಮತದಾರರನ್ನು ಬಿಜೆಪಿಗೆ ಆಕರ್ಷಿಸಲು ಮುಂದಾದರು. ಜೆಡಿಎಸ್‌ನಿಂದ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿದ್ದರಿಂದ ಹೆಚ್ಚಿನ ಮತಗಳು ಜೆಡಿಎಸ್‌ಗೆ ವಾಲಬಹುದೆಂದು ದೊಡ್ಡ ಮಹಿಳಾ ಕಾರ್ಯಪಡೆಯನ್ನೇ ನಿರ್ಮಿಸಿ ಬಿಟ್ಟರು. ಪ್ರತಿ ಬೂತ್‌ನಲ್ಲೂ ಮಹಿಳಾ ಪ್ರತಿನಿಧಿಗಳಿಂದ ಕ್ಯಾಂಪೇನ್‌ ಮಾಡಿಸಿದರು. ಇದೆಲ್ಲದರ ಜೊತೆಗೆ ಬರದ ನಾಡಾದ ಶಿರಾದ ಮದಲೂರು ಕೆರೆಗೆ ನೀರು ಹರಿಸುವ ಭರವಸೆಯನ್ನು ನೀಡಿದರು. ಅಲ್ಲದೇ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಂದ ಮದಲೂರಿನಲ್ಲೇ ಸಮಾವೇಶ ಮಾಡಿಸಿದರು. ಈ ಮೂಲಕ ಹುಲಿಕುಂಟೆ, ಗೌಡಗೆರೆ, ಕಸಬಾ ಸೇರಿದಂತೆ ಎಲ್ಲಾ ಹೋಬಳಿಗಳನ್ನು ಗುರಿಯಾಗಿಸಿಕೊಂಡು ಪ್ರಚಾರ ಮಾಡಿದರು. ಜೊತೆಗೆ ಶಿರಾ ನಗರದಲ್ಲಿ ದೊಡ್ಡ ರೋಡ್‌ ಶೋ ನಡೆಸಿದರು. ಹೋದ ಹೋದ ಕಡೆಯಲ್ಲೆಲ್ಲಾ ಕೇಸರಿ ಶಾಲಿನ ಟ್ರೆಂಡಿಂಗ್‌ ಶುರು ಮಾಡಿದರು. ಮೂರು ವಾರಗಳ ಹಿಂದೆ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಮೂದಲಿಸುತ್ತಿದ್ದವರೇ ಪಕ್ಷ ಸದೃಢವಾಗಿದ್ದನ್ನು ನೋಡಿ ಅಚ್ಚರಿ ಬಿಟ್ಟರು. ನೋಡ ನೋಡುತ್ತಿದ್ದಂತೆ ಎರಡೂ ಪಕ್ಷಗಳ ದೊಡ್ಡ ದೊಡ್ಡ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಲ್ಲುವಂತಾಯಿತು. 3 ವಾರಗಳ ಪ್ರಚಾರದ ಅಬ್ಬರ ಹೇಗಿತ್ತೆಂದರೆ ಶಿರಾ ತಾಲೂಕಿನಾದ್ಯಂತ ಎಲ್ಲಿ ನೋಡಿದರೂ ಬಿಜೆಪಿ ಕಾರ್ಯಕರ್ತರೇ ಕಾಣುವಂತೆ ನೋಡಿಕೊಂಡರು.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಶಿರಾ ಮೂರನೇ ಶಿಕಾರಿಪುರ ಆಗುತ್ತದೆ ಎಂದು ಘೋಷಿಸಿದರು. ನೀವು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಅವರು ಆಡಳಿತ ಪಕ್ಷದ ಶಾಸಕರಾಗುತ್ತಾರೆ. ಹೀಗಾಗಿ ಅಭಿವೃದ್ಧಿಯ ಮಹಾಪೂರವೇ ಶಿರಾಕ್ಕೆ ಹರಿದು ಬರುತ್ತದೆ ಎಂಬ ಘೋಷಣೆಯೂ ತಾಲೂಕಿನಾದ್ಯಂತ ಮೊಳಗಿತು. ಬೂತ್‌ ಮಟ್ಟದಲ್ಲಿ ಕಾರ್ಯಕರ್ತರೇ ಇಲ್ಲದ ಶಿರಾದಲ್ಲಿ ಚುನಾವಣೆ ಮುಗಿಯುವುದರೊಳಗೆ ದೊಡ್ಡ ಯುವಪಡೆಯನ್ನೇ ವಿಜಯೇಂದ್ರ ಕಟ್ಟಿಹೋಗಿದ್ದಾರೆ.

Follow Us:
Download App:
  • android
  • ios