ಯಡಿಯೂರಪ್ಪ ನಿವೃತ್ತಿಯಾಗುತ್ತಾರೆಂದು ಅನೇಕರು ನೆಮ್ಮದಿಯಿಂದಿದ್ದರು, ಈಗ ಅವರಿಗೆ ಮರಿ ಯಡಿಯೂರಪ್ಪನಿಂದ ಸಮಸ್ಯೆ
ಬೆಂಗಳೂರು(ಜು.25): ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಯಸ್ಸಾಯಿತು, ರಾಜಕೀಯವಾಗಿ ನಿವೃತ್ತಿ ಆಗುತ್ತಾರೆ ಎಂದು ಪ್ರತಿಪಕ್ಷದವರು ಭಾವಿಸಿ, ನೆಮ್ಮದಿ ಕಂಡಿದ್ದರು. ಆದರೆ, ಮರಿ ಯಡಿಯೂರಪ್ಪ ಹುಟ್ಟಿಕೊಂಡಿರುವುದು ಬಹಳಷ್ಟು ಜನರಿಗೆ ಸಮಸ್ಯೆಯಾಗಿ ಕಾಡುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ. ಶರಣ ವಕೀಲರ ವೇದಿಕೆ ವಿಜಯನಗರದ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪರವಾಗಿ ಆಗಮಿಸಿ ವೇದಿಕೆಯ ವೆಬ್‌ಸೈಟ್ ಬಿಡುಗಡೆ ಮಾಡಿ ಮಾತನಾಡಿದರು.
ತಮ್ಮನ್ನು ತಾವು ಮರಿ ಯಡಿಯೂರಪ್ಪ ಎಂದು ಬಣ್ಣಿಸಿಕೊಂಡ ಅವರು, ‘ಯಡಿಯೂರಪ್ಪ ಅವರು ಚಿಕ್ಕಂದಿನಿಂದ ಕಬಡ್ಡಿ ಆಡುತ್ತ ರಾಜಕೀಯವಾಗಿ ಮೇಲಕ್ಕೆ ಬಂದವರು. ಹಾಗೆಯೇ ನಾನು ಕೂಡ ಕಬಡ್ಡಿ ಆಡುತ್ತ ಬೆಳೆದಿದ್ದೇನೆ. ಇತ್ತೀಚೆಗೆ ಚೆಸ್ ಆಡಲು ಕಲಿತಿರುವುದು ಕೆಲವರಿಗೆ ಸಮಸ್ಯೆ ಆಗಿದೆ’ ಎಂದು ಮಾರ್ಮಿಕವಾಗಿ ಹೇಳಿದರು.
ನಿನ್ನೆ ವಿಜಯೇಂದ್ರಗೆ ಟಿಕೆಟ್ ಅಂತ ಹೇಳಿದ್ರು, ಈಗ ಹೈಕಮಾಂಡ್ ತೀರ್ಮಾನ ಅಂದ್ರು, ಏನಿದು BSY ಲೆಕ್ಕಾಚಾರ?
ತಮ್ಮ ಭಾಷಣಕ್ಕೂ ಮೊದಲು ಮಾತನಾಡಿದ್ದ ಮಾಜಿ ಸಚಿವ, ಲಿಂಗಾಯತ ನಾಯಕ ಎಂ. ಬಿ. ಪಾಟೀಲ್ ತಮ್ಮನ್ನು ಹೊಗಳಿದ್ದನ್ನು ಉಲ್ಲೇಖಿಸಿದ ವಿಜಯೇಂದ್ರ, ‘ನನ್ನ ವಿಚಾರದಲ್ಲಿ ಹೇಳುವುದಾದರೆ, ನಮ್ಮವರಿಗಿಂತ ಬೇರೆ ಪಕ್ಷದವರೇ ನನ್ನನ್ನು ಹೆಚ್ಚು ಪ್ರೀತಿ- ವಿಶ್ವಾಸದಿಂದ ಕಾಣುತ್ತಾರೆ. ಯಾರು ಯಾವ ಪಕ್ಷದಲ್ಲಿದ್ದಾರೆ, ಯಾವ ಪಕ್ಷದವರು ಯಾರನ್ನು ಹೊಗಳುತ್ತಾರೆ. ಯಾರು ಯಾರ ಜೊತೆ ಗುರುತಿಸಿಕೊಳ್ಳುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ. ಅಂತಹ ವಿಚಿತ್ರ ಪರಿಸ್ಥಿತಿ ರಾಜ್ಯದಲ್ಲಿದೆ’ ಎಂದು ಹೇಳಿದರು.
ಯಡಿಯೂರಪ್ಪ ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ನಾನು ಸಾಗಬೇಕಾಗಿದ್ದು, ಸಮಾಜದ ಹಿರಿಯರ ಆಶೀರ್ವಾದ - ಮಾರ್ಗದರ್ಶನ ಬೇಕಾಗಿದೆ. ನಾನು ವೀರಶೈವ ಲಿಂಗಾಯತ ಸಮುದಾಯದಲ್ಲಿ ಹುಟ್ಟಿರುವುದಕ್ಕೆ ನನಗೆ ಹೆಮ್ಮೆಯಿದೆ. ಆದರೆ ಇದರ ಜೊತೆಗೆ ಎಲ್ಲ ಸಮುದಾಯಗಳನ್ನು ಒಟ್ಟಾಗಿ ಕರೆದುಕೊಂಡು ಹೋಗುವ ರಾಜಕೀಯ ದೃಷ್ಟಿಕೋನವನ್ನು ಹೊಂದಿದ್ದೇನೆ’ ಎಂದು ಹೇಳಿದರು.
ವಿಜಯೇಂದ್ರ ಸ್ಪರ್ಧೆ ಬಗ್ಗೆ ಮತ್ತೊಂದು ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ
ಬಿಎಸ್‌ವೈ ಹೊಗಳಿ ಶುಭ ಹಾರೈಸಿದ ಎಂಬಿಪಾ:
ಮಾಜಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ‘ರಾಜಕಾರಣದಲ್ಲಿ ಯಡಿಯೂರಪ್ಪ ಅವರದ್ದು ಮತ್ತು ನನ್ನದು ಬೇರೆ ಬೇರೆ ಪಕ್ಷಗಳಾಗಿರಬಹುದು. ಚುನಾವಣೆ ಸಂದರ್ಭದಲ್ಲಿ ನನ್ನ ಕ್ಷೇತ್ರಕ್ಕೇ ಬಂದ ಯಡಿಯೂರಪ್ಪ ಅವರು ನನ್ನನ್ನು ಸಾಕಷ್ಟುಬೈದು ಹೋಗಿದ್ದಾರೆ. ಅದರೆ, ಅವರು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಮೆಚ್ಚುತ್ತೇನೆ. ಯಡಿಯೂರಪ್ಪ ಅವರು ತಮ್ಮ ಉತ್ತರಾಧಿಕಾರಿಯಾಗಿ ವಿಜಯೇಂದ್ರ ಅವರನ್ನು ಘೋಷಿಸಿದ್ದಾರೆ. ಯಡಿಯೂರಪ್ಪ ಅವರ ಹಾದಿಯಲ್ಲಿ ವಿಜಯೇಂದ್ರ ಸಾಗುತ್ತಾರೆ ಎಂಬ ವಿಶ್ವಾಸವಿದೆ. ವಿಜಯೇಂದ್ರ ಅವರಿಗೆ ಒಳ್ಳೆಯದಾಗಲಿ’ ಎಂದು ಶುಭ ಹಾರೈಸಿದರು.
ಈಗ ಚೆಸ್ ಕಲಿತಿದ್ದೇನೆ
ಯಡಿಯೂರಪ್ಪ ಅವರು ಚಿಕ್ಕಂದಿನಿಂದ ಕಬಡ್ಡಿ ಆಡುತ್ತ ರಾಜಕೀಯವಾಗಿ ಮೇಲಕ್ಕೆ ಬಂದವರು. ಹಾಗೆಯೇ ನಾನು ಕೂಡ ಕಬಡ್ಡಿ ಆಡುತ್ತ ಬೆಳೆದಿದ್ದೇನೆ. ಇತ್ತೀಚೆಗೆ ಚೆಸ್ ಆಡಲು ಕಲಿತಿರುವುದು ಕೆಲವರಿಗೆ ಸಮಸ್ಯೆ ಆಗಿದೆ ಅಂತ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
