ವಿಜಯೇಂದ್ರ ಸ್ಪರ್ಧೆ ಬಗ್ಗೆ ಮತ್ತೊಂದು ಸ್ಪಷ್ಟನೆ ಕೊಟ್ಟ ಯಡಿಯೂರಪ್ಪ

ಶಿಕಾರಿಪುರ ಕ್ಷೇತ್ರದ ಮತದಾರರಿಗೆ ಪುತ್ರ ಬಿ ವೈ ವಿಜಯೇಂದ್ರನನ್ನು ಬೆಂಬಲಿಸಲು ಯಡಿಯೂರಪ್ಪ ಬಹಿರಂಗ ಕರೆ ನೀಡಿದ್ದರು. ಇದು ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಇದಕ್ಕೆ ಬಿಎಸ್‌ವೈ ಸ್ಪಷ್ಟನೆ ಕೊಟ್ಟಿದ್ದಾರೆ.

BJP high command will decide vijayendra contest From Shikaripura Says Yediyurappa rbj

ಬೆಂಗಳೂರು, (ಜುಲೈ.23):  ನಾನು ನೀಡಿದ ಹೇಳಿಕೆ ಬಗ್ಗೆ ಸಾಕಷ್ಟು ಗೊಂದಲ ಆಗಿದೆ. ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲ. ಆದರೆ ವಿಜಯೇಂದ್ರನ ವಿಚಾರದಲ್ಲಿ ಹೈಕಮಾಂಡ್‌ ತಿರ್ಮಾನವೇ ಅಂತಿಮ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಶಿಕಾರಿಪುರದ ಜನ ಚುನಾವಣೆ ನಿಲ್ಲಲು ಒತ್ತಾಯ ಮಾಡಿದರು. ಆದರೆ ನಿಲ್ಲೋದಿಲ್ಲ, ವಿಜಯೇಂದ್ರ ಸ್ಪರ್ಧಿಸುತ್ತಾರೆ ಎಂದು ಹೇಳಿದೆ. ನಿನ್ನೆ (ಶುಕ್ರವಾರ) ಅಲ್ಲಿಯ ಜನ ಒತ್ತಾಯ ಮಾಡಿದ ಕಾರಣ ನಾನು ಹಾಗೆ ಹೇಳಿದ್ದೇನೆ. ಆದರೆ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿ ಅಂತಿಮ ತೀರ್ಮಾನವನ್ನು ಮಾಡುತ್ತಾರೆ. ಪಕ್ಷದ ತೀರ್ಮಾನವೇ ಅಂತಿಮವಾಗುತ್ತದೆ. ನಿನ್ನೆ ಹೇಳಿದ್ದು, ನನ್ನ ಸಲಹೆ ಅಷ್ಟೇ ಎಂದು ಸಮಾಜಾಯಿಷಿ ನೀಡಿದರು.

ಪುತ್ರಿನಿಗೆ ಬಿಎಸ್‌ವೈ ಕ್ಷೇತ್ರ ತ್ಯಾಗ: ಯತೀಂದ್ರ ಸಿದ್ದರಾಮಯ್ಯ ಹಾದಿ ಸುಗಮ, ಕಾಂಗ್ರೆಸ್‌ಗೆ ಪ್ಲಸ್

ವಿಜಯೇಂದ್ರ ಎಲ್ಲೇ ನಿಂತರೂ ಗೆಲ್ಲುವ ಒಂದು ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ. ಹಳೆ ಮೈಸೂರು, ಶಿಕಾರಿಪುರ ಎಲ್ಲೇ ನಿಂತರೂ ಅವರು ಗೆಲ್ಲುತ್ತಾರೆ. ಆದರೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ.  ಎಂದರು.

ಕುಟುಂಬ ರಾಜಕೀಯದ ಆಗೋದಿಲ್ಲವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೋದಿ ಹೇಳಿದ್ದಾರೆ. ಹಾಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬದಲಿಗೆ ನನ್ನ ಮಗ ಸ್ಪರ್ಧಿಸುತ್ತಾನೆ. ಈ ಕಾರಣಕ್ಕೆ ನಾನು ಚುನಾವಣೆಯಿಂದ ಹಿಂದೆ ಸರಿದಿದ್ದೇನೆ. ನನಗೆ ಪಕ್ಷದಲ್ಲಿ ಸಾಕಷ್ಟು ಅವಕಾಶ ಸಿಕ್ಕಿದೆ. ರಾಷ್ಟ್ರಮಟ್ಟದಲ್ಲಿ ಬೆಳೆಸಿದ್ದಾರೆ ಎಂದು ಹೇಳಿದರು.

ಬಿಎಸ್‌ವೈ ಹೇಳಿದ್ದೇನು?
ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಕ್ಷೇತ್ರ ಶಿಕಾರಿಪುರವನ್ನು ಮಗ ಬಿವೈ ವಿಜಯೇಂದ್ರನಿಗೆ ಬಿಟ್ಟು ಕೊಡುವುದಾಗಿ ಯಡಿಯೂರಪ್ಪ ಬಹಿರಂಗ ಹೇಳಿಕೆ ನೀಡಿದ್ದರು. ಶಿಕಾರಿಪುರ ಕ್ಷೇತ್ರದ ಮತದಾರರಿಗೆ ಪುತ್ರ ಬಿ ವೈ ವಿಜಯೇಂದ್ರನನ್ನು ಬೆಂಬಲಿಸಲು ಬಹಿರಂಗ ಕರೆ ನೀಡಿದ ಬಿಎಸ್ ವೈ. ಶಿಕಾರಿಪುರ ತಾಲೂಕಿನ ಅಂಜನಾಪುರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಬಹಿರಂಗ ಕರೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಗೆ ಶಕ್ತಿಮೀರಿ ಪ್ರಯತ್ನ ಮಾಡಿದ್ದೇನೆ. ನನ್ನನ್ನು ಬೆಂಬಲಿಸಿದಂತೆ ಬಿ ವೈ ವಿಜಯೇಂದ್ರನಿಗೆ ಸಂಪೂರ್ಣ ಸಹಕಾರ ನೀಡಿ. ವಿಜಯೇಂದ್ರನನ್ನು ಒಂದು ಲಕ್ಷ ಮತಗಳ ಬಾರಿ ಅಂತರದಿಂದ ಗೆಲ್ಲಿಸಿ. ಈ ಮೂಲಕ ನಾವು ಮಾಡಿದ ಸೇವೆಗೆ ಸಾರ್ಥಕತೆ ಬರುತ್ತದೆ ಎಂದು ಯಡಿಯೂರಪ್ಪ ಹೇಳಿದ್ದರು.

ದಕ್ಷಿಣದಲ್ಲಿ ಬಿಜೆಪಿ ಸರ್ಕಾರ ರಚಿಸಿದ ಮೊದಲಿಗ: ಶಿಕಾರಿಪುರದಲ್ಲಿ ರಾಜಕೀಯ ಪ್ರವೇಶಿಸಿ ರಾಜ್ಯದ ‘ಮಾಸ್‌ ಲೀಡರ್‌’ ಆದ ಬಿಎಸ್‌ವೈ..!

ಗೊಂದಲಕ್ಕೆ ಕಾರಣವಾಗಿದ್ದ ಬಿಎಸ್‌ವೈ ಹೇಳಿಕೆ
ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ತಮ್ಮ ಕ್ಷೇತ್ರ ಶಿಕಾರಿಪುರವನ್ನು ಮಗ ಬಿವೈ ವಿಜಯೇಂದ್ರನಿಗೆ ಬಿಟ್ಟು ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೇ  ಶಿಕಾರಿಪುರ ಕ್ಷೇತ್ರದ ಮತದಾರರಿಗೆ ಪುತ್ರ ಬಿ ವೈ ವಿಜಯೇಂದ್ರನನ್ನು ಬೆಂಬಲಿಸಲು ಬಹಿರಂಗ ಕರೆ ನೀಡಿದ್ದರು. 

ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ  ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಪ್ರಮುಖವಾಗಿ ಬಿಜೆಪಿಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರಿಂದ ಕೆಲ ನಾಯಕರು ವಿಜಯೇಂದ್ರಗೆ ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ ಎಂದು ಹೇಳಿಕೆ ನೀಡಿದ್ರು. ಇದರಿಂದ ಬಿಜೆಪಿ ನಾಯಕಲ್ಲಿ ಬಿಎಸ್‌ವೈ ಹೇಳಿಕೆ ಗೊಂದಲಕ್ಕೆ ಕಾರಣವಾಗಿತ್ತು. 
 

Latest Videos
Follow Us:
Download App:
  • android
  • ios