Asianet Suvarna News Asianet Suvarna News

ಸರ್ಕಾರಿ ಟೆಂಡರ್‌ ಬಾಯ್ಕಟ್‌ ಮಾಡಿ: ಗುತ್ತಿಗೆದಾರರಿಗೆ ಎಚ್ಡಿಕೆ ಕರೆ

ಗುತ್ತಿಗೆದಾರರು 6 ತಿಂಗಳು ಸರ್ಕಾರಿ ಟೆಂಡರ್‌ನಲ್ಲಿ ಭಾಗವಹಿಸಲ್ಲ ಅಂತಾ ಬಾಯ್ಕಟ್‌ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಲಹೆ ನೀಡಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

boycott government tender contract six months says hd kumaraswamy gvd
Author
First Published Aug 27, 2022, 7:56 PM IST

ಮೈಸೂರು (ಆ.27): ಗುತ್ತಿಗೆದಾರರು 6 ತಿಂಗಳು ಸರ್ಕಾರಿ ಟೆಂಡರ್‌ನಲ್ಲಿ ಭಾಗವಹಿಸಲ್ಲ ಅಂತಾ ಬಾಯ್ಕಟ್‌ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಲಹೆ ನೀಡಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಕಿರುಕುಳ ನೀಡಿ ಹಣ ವಸೂಲಿ. ಆ ಸರ್ಕಾರ, ಈ ಸರ್ಕಾರ ಅಂತ ಲಿಮಿಟೆಡ್‌ ಆಗಿದ್ದ ಪರ್ಸೆಂಟೆಜ್‌ ವ್ಯವಹಾರ 2008ರಲ್ಲಿ ಬಿಜೆಪಿ ಸರ್ಕಾರ ರಚನೆ ಆದ ಮೇಲೆ ಪರ್ಸೆಂಟೆಜ್‌ ಹೆಚ್ಚಾಯ್ತು. 2008ರಿಂದ ವ್ಯವಸ್ಥೆ ಕುಲಗೆಡಿಸಿದರು. ಆತ್ಮಸಾಕ್ಷಿಗಿಂತಾ ಸಾಕ್ಷಿ ಬೇಕಾ ಬಿಜೆಪಿಯವರಿಗೆ ಎಂದು ಪ್ರಶ್ನಿಸಿದರು.

ಸರ್ಕಾರದ ನಡವಳಿಕೆ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯವಿದೆ. ಪರ್ಸೆಂಟಜ್‌ ವ್ಯವಸ್ಥೆ ಸ್ವಾತಂತ್ರ್ಯ ಪೂರ್ವದಲ್ಲಿ ಕೂಡ ಇತ್ತು. ಬ್ರಿಟಿಷರ ಕಾಲದಲ್ಲೂ ಇತ್ತು. ಇದನ್ನು ಪುಸ್ತಕಗಳಲ್ಲಿ ಓದಿದ್ದೇನೆ. ಕೇಂದ್ರ- ರಾಜ್ಯ ಸರ್ಕಾರದವರೆಗೂ ಸಣ್ಣ ಮಟ್ಟದಲ್ಲಿ ಎಲ್ಲಾ ಕಾಲದಲ್ಲೂ ಇತ್ತು. ಅಬಕಾರಿ ಲಾಬಿ, ಶಿಕ್ಷಣ ಲಾಬಿ, ಗುತ್ತಿಗೆದಾರರೂ ಮೊದಲಿಂದಲ್ಲೂ ಶೇ.2-3 ಪರ್ಸೆಂಟೆಜ್‌ ಮೊದಲಿಂದಲ್ಲೂ ಫಿಕ್ಸ್‌ ಆಗಿದೆ ಎಂದು ಅವರು ತಿಳಿಸಿದರು. ನಾನು ಸಿಎಂ ಆಗಿದ್ದಾಗ ಪರ್ಸೆಂಟೆಜ್‌ ಕೇಳಿಲ್ಲ. ಎರಡು ಅವಧಿಯಲ್ಲೂ ಆದ ಬಿಜೆಪಿ ಸರ್ಕಾರ ಬಂದ ಮೇಲೆ ಶಾಸಕರ ಮಟ್ಟದಲ್ಲೇ ಪರ್ಸೆಂಟೆಜ್‌ ಶುರುವಾಯ್ತು. 

ಗಂಭೀರ ಆರೋಪ ಬಂದಾಗ ಭಂಡತನ ಬೇಡ: ಸಿದ್ದರಾಮಯ್ಯ

ಶಾಸಕರೇ ಬೆಟ್ಟಗುಡ್ಡ ಲೀಸ್‌ ಹಾಕಿಸಿಕೊಂಡು ಕ್ರಷರ್‌ ಶುರು ಮಾಡಿದ್ದಾರೆ. ಇದೆಲ್ಲ ಶುರುವಾಗಿದ್ದು ಬಿಜೆಪಿ ಸರ್ಕಾರದಲ್ಲಿ ಎಂದು ಅವರು ಆರೋಪಿಸಿದರು. ನನ್ನ ಆಡಳಿತ ಕಾಲದಲ್ಲೂ ಕೆಲವೊಂದು ಇಲಾಖೆಯಲ್ಲೇ ಪರ್ಸೆಂಟೆಜ್‌ ಪಡೆದಿದ್ದಾರೆ. ಅದು ನನಗೆ ಗೊತ್ತು. ನನ್ನ ಪಕ್ಷದ ಕೈಯಲ್ಲಿದ್ದ ಇಲಾಖೆಗಳಲ್ಲಿ ಅದು ಆಗಲಿಲ್ಲ. ನಾನು ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಕಾಂಗ್ರೆಸ್‌ ನಾಯಕರು ಇದು ನನ್ನ ಇಲಾಖೆ, ನನ್ನ ಮೇಲೆ ಹಿಡಿತ ಮಾಡಬಾರದು ಎಂದು ಪದೇ ಪದೇ ಹೇಳ್ತಿದ್ದರು. ಹೀಗಾಗಿ, ಕಾಂಗ್ರೆಸ್‌ ನಾಯಕರಿಗೆ ಪರ್ಸೆಂಟೆಜ್‌ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಲಾಟರಿ ನಿಷೇಧಿಸದಂತೆ ಒತ್ತಡ: ಲಾಟರಿ ನಿಷೇಧ ಮಾಡುವಾಗ ನನ್ನ ಮೇಲೆ ಒತ್ತಡ ತಂದರು. ಆಫರ್‌ ಮೇಲೆ ಆಫರ್‌ ಇಟ್ಟಿದ್ದರು. ಆಫರ್‌ ಕೊಟ್ಟವರು ಇನ್ನೂ ಬದುಕಿದ್ದಾರೆ. ಹೈಕಮಾಂಡ್‌ಗೆ ಹಣ ಕಳಿಸುವ ಪ್ರಕ್ರಿಯೆ ಎರಡು ಪಕ್ಷದಲ್ಲಿದೆ. ನಾವು ಆಡಳಿತದಲ್ಲಿದ್ದಾಗ ಯಾವ ಅಧಿಕಾರಿಗಳ ಬಳಿಯೂ ಹಣ ಕೇಳಿಲ್ಲ. ಚಂದ ಎತ್ತಿಸಿಲ್ಲ. ಹೀಗಾಗಿ, ಸರ್ಕಾರದ ಕಡತಗಳು ನಮಗೆ ಬೇಗ ಸಿಗುತ್ತವೆ ಎಂದರು. ಯಾರು ಇಲ್ಲಿ ನೆಟ್ಟಗಿದ್ದಾರೆ ಹೇಳಿ? ಬೆಂಗಳೂರಿನಲ್ಲಿ ಮೂರು ಜನ ಪಕ್ಷ ಬಿಟ್ಟು ಹೋದರಲ್ಲ, ಆ ಮೂರು ಜನ ಬಿಡಿಎ ಸಭೆಗೆ ಬಂದರೆ ಇಷ್ಟುಹಣ ಕೊಡಬೇಕಿತ್ತು. 

ಅದು ನೀವು ಬಂದ ಮೇಲೆ ನಿಲ್ತು ಅಂತಾ ಅಧಿಕಾರಿ ಹೇಳಿದರು. ಆ ಮೂವರು ಈಗ ಸಂಪತ್‌ ಭರಿತರಾಗಿ ಲೂಟಿ ಮಾಡ್ತಿದ್ದಾರೆ ಎಂದು ಅವರು ದೂರಿದರು. ಲೋಕಾಯುಕ್ತದಲ್ಲಿ ಯಾವ ಕೇಸ್‌ ತಾರ್ಕಿಕ ಅಂತ್ಯಕ್ಕೆ ಬಂದಿದೆ ಹೇಳಿ? ಸಿಎಂ ಆಗಿದ್ದವರು 28 ದಿನ ಜೈಲಿಗೆ ಹೋದರು. ನಂತರ ಆ ಕೇಸ್‌ಗಳು ಏನಾದವು? ಆ ಎಲ್ಲಾ ಕೇಸ್‌ಗಳಲ್ಲೂ ಅವರಿಗೆ ಕ್ಲೀನ್‌ಚೀಟ್‌ ಸಿಕ್ತು ತಾನೇ? ಹಾಗಾದರೆ ಅವರಿಗೆ 28 ದಿನ ಜೈಲು ಶಿಕ್ಷೆ ಆಗಿದ್ದರ ನಷ್ಟಯಾರು ತುಂಬಿ ಕೊಡುತ್ತಾರೆ ಎಂದು ಅವರು ಪ್ರಶ್ನಿಸಿದರು.

ಡಿಕೆಶಿ, ನನ್ನ ನಡುವೆ ಹೊಂದಾಣಿಕೆ ಏನೂ ಇಲ್ಲ: ಕೆಂಪೇಗೌಡ ಜಯಂತಿ ಹಿನ್ನೆಲೆಯಲ್ಲಿ ನಾನು ಮತ್ತು ಡಿ.ಕೆ. ಶಿವಕುಮಾರ್‌ ಪದೇ ಪದೇ ಒಂದೇ ವೇದಿಕೆಯಲ್ಲಿ ಬರ್ತಿದ್ದೇವೆ ಹೊರತು ಬೇರೆ ಏನೂ ಇಲ್ಲ. ನಮ್ಮ ನಡುವೆ ಹೊಂದಾಣಿಕೆ ಏನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಆಗಲೂ ಡಿ.ಕೆ. ಶಿವಕುಮಾರ್‌ ಅವರು ಹೊರಟಿದ್ದಾರೆ.

ಸುತ್ತೂರು ಮಠದಿಂದ ಮೈಸೂರು ಮೃಗಾಲಯಕ್ಕೆ 1 ಲಕ್ಷ ಕೊಡುಗೆ

ನಾನು ನನ್ನ ಪಕ್ಷನಾ ಅಧಿಕಾರಕ್ಕೆ ತರಲು ಹೊರಟ್ಟಿದ್ದೇನೆ. ನಾವು ಚುನಾವಣೆಯಲ್ಲಿ ಎದುರಾಳಿಗಳು. ನಾವೇನೂ ವೈರಿಗಳಲ್ಲ. ನಾವೇನೂ ಇಂಡಿಯಾ- ಪಾಕಿಸ್ತಾನನಾ ಎಂದು ಪ್ರಶ್ನಿಸಿದರು. ಸಿಎಂ ಆಗೋದು ಭಗವಂತನ ಇಚ್ಚೆ. ನಾನು ಬಹುಮತ ಇಲ್ಲದಿದ್ದರು ಸಿಎಂ ಆಗಲಿಲ್ವಾ? ಚಾಮುಂಡಿ ಆಶೀರ್ವಾದ ನನಗೆ ಇದ್ದರೆ ಸಿಎಂ ಆಗ್ತಿನಿ ಎಂದು ಅವರು ಹೇಳಿದರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ.ಯಾವ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿದರು.

Follow Us:
Download App:
  • android
  • ios