Asianet Suvarna News Asianet Suvarna News

ಸುತ್ತೂರು ಮಠದಿಂದ ಮೈಸೂರು ಮೃಗಾಲಯಕ್ಕೆ 1 ಲಕ್ಷ ಕೊಡುಗೆ

ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಶ್ರೀಗಳ ಜಯಂತಿ ಹಿನ್ನೆಲೆ ಸುತ್ತೂರು ಮಠದಿಂದ ಮೈಸೂರು ಮೃಗಾಲಯಕ್ಕೆ . 1 ಲಕ್ಷ ಕೊಡುಗೆ.

 

Suttur Mutt donates  One lakh rupees to Mysuru Zoo gow
Author
Bengaluru, First Published Aug 27, 2022, 3:06 PM IST

ಮೈಸೂರು (ಆ. 27): ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿ ಯವರ ಆಗಸ್ಟ್ 29 ರಂದು 107ನೇ ಜಯಂತಿಯ ಅಂಗವಾಗಿ ಸುತ್ತೂರು ಮಠದಿಂದ ಪ್ರತಿ ವರ್ಷದಂತೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿ- ಪಕ್ಷಿಗಳ ಆಹಾರದ ನಿರ್ವಹಣೆಗಾಗಿ . 1 ಲಕ್ಷದ ಚೆಕ್‌ ಅನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್‌ ಅವರಿಗೆ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್‌. ಶಿವಕುಮಾರಸ್ವಾಮಿ ಅವರು ಶುಕ್ರವಾರ ನೀಡಿದರು. ಈ ವೇಳೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್‌ ಮಾತನಾಡಿ, ಕಳೆದ 12 ವರ್ಷಗಳಿಂದ ಪ್ರತಿ ವರ್ಷವೂ ಶ್ರೀಗಳ ಜಯಂತಿಯಂದು ಮೃಗಾಲಯದ ಪ್ರಾಣಿಪಕ್ಷಿಗಳ ಆಹಾರ ನಿರ್ವಹಣೆಗಾಗಿ ಕೊಡುಗೆ ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ. ಇದು ಸುತ್ತೂರು ಮಠದ ಶ್ರೀಗಳು ಪ್ರಾಣಿ ಪಕ್ಷಿಗಳ ಮೇಲೂ ಅಪಾರವಾದ ಕಾಳಜಿಯನ್ನು ಹೊಂದಿರುವುದನ್ನು ಸೂಚಿಸುತ್ತದೆ. ಇಂತಹ ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಮಾರ್ಗದರ್ಶನ ಮಾಡುತ್ತಾ ಶ್ರೀಗಳು ಸದಾ ಆಶೀರ್ವದಿಸುತ್ತಿರಲಿ ಎಂದು ತಿಳಿಸಿದರು. 

ಸುತ್ತೂರು ಮಠದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 107ನೇ ಜಯಂತಿಯ ದಿನದಂದು ಮೃಗಾಲಯದ ಪ್ರಾಣಿ, ಪಕ್ಷಿಗಳ ಆಹಾರ ನಿರ್ವಹಣೆಗಾಗಿ ಒಂದು ಲಕ್ಷದ ಚೆಕ್‌ ಅನ್ನು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್‌ ಅವರಿಗೆ ಜೆಎಸ್‌ಎಸ್‌ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್‌. ಶಿವಕುಮಾರಸ್ವಾಮಿ ನೀಡಿದರು. ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ಬಿ. ನಿರಂಜನಮೂರ್ತಿ, ರವೀಂದ್ರ ಇದ್ದರು.

ಮೃಗಾಲಯ ಅಂತ ದೊಡ್ಡ ಬೋರ್ಡ್, ಒಳಗೆ ಹೋಗಿ ನೋಡಿದ್ರೆ ಖಾಲಿ ಬೋನ್

ಸತತ ಮೂರನೇ ಬಾರಿಗೆ ಸಿಂಹ ದತ್ತು ಸ್ವೀಕಾರ
ಅಂತಾರಾಷ್ಟ್ರೀಯ ಲಯನ್ಸ್‌ ಸಂಸ್ಥೆ ಜಿಲ್ಲೆ 317ಎ ಲಯನ್ಸ್‌ ಕ್ಲಬ್‌ ಮೈಸೂರು ಪ್ಯಾಲೇಸ್‌ ಸಿಟಿ ವತಿಯಿಂದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಸತತವಾಗಿ 3ನೇ ಬಾರಿಗೆ ಸಿಂಹವನ್ನು . 1 ಲಕ್ಷ ದೇಣಿಗೆ ನೀಡಿ 1 ವರ್ಷ ಅವಧಿಗೆ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಂ. ಶಿವಕುಮಾರ್‌ ಅವರ ಸಮ್ಮುಖದಲ್ಲಿ ದತ್ತು ಸ್ವೀಕರಿಸಲಾಯಿತು.

ಕಣ್ಣೀರು ತರಿಸುತ್ತಿದೆ ಕಾಡಿನ ರಾಜನ ದುಸ್ಥಿತಿ: ತಿನ್ನಲು ಆಹಾರವಿಲ್ಲದೇ ಅಸ್ಥಿಪಂಜರದಂತಾದ ಸಿಂಹಗಳು

ಅಧ್ಯಕ್ಷ ಡಿ.ಪಿ. ಪ್ರಕಾಶ್‌, ಕಾರ್ಯದರ್ಶಿ ಪ್ರಭಾಕರ್‌, ಖಜಾಂಚಿ ನಟರಾಜ್‌, ಪ್ರಾಂತೀಯ ಅಧ್ಯಕ್ಷ ನಂಜುಂಡಸ್ವಾಮಿ, ವಲಯಾಧ್ಯಕ್ಷರಾದ ಮೋಹನ್‌ ಕುಮಾರ್‌, ಜಯರಾಮಣ್ಣ, ಜೈಕುಮಾರ್‌, ಜೆ. ಲೋಕೇಶ್‌, ನಾಗೇಶ್‌ ಮೂರ್ತಿ, ಎಂ.ಬಿ. ನಂದೀಶ್‌, ಪಿ. ರಂಗಸ್ವಾಮಿ, ಜಿ. ಶಿವಕುಮಾರ್‌, ಎಂ.ಆರ್‌. ವಾಸು, ಮಹದೇವ್‌ಸ್ವಾಮಿ, ಕೆ.ಎಸ್‌. ಪ್ರಕಾಶ್‌, ವೈ.ಎಸ್‌. ಶಿವಕುಮಾರ್‌, ಪಿ. ಹೊನ್ನರಾಜು, ಎಚ್‌.ಎಸ್‌. ರಾಜು ಇದ್ದರು.

Follow Us:
Download App:
  • android
  • ios