Asianet Suvarna News Asianet Suvarna News

ಸಿದ್ದು Vs ಎಚ್​ಡಿಕೆ: ನಾನೇನು ಸಿಎಂ ವಕ್ತಾರನಲ್ಲ ಎಂದ ಬಿ.ಕೆ.ಹರಿಪ್ರಸಾದ್‌

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಿಎಂ ಅವರನ್ನು ವಿಲನ್ ಎಂದಿರುವ ಬಗ್ಗೆ ಪ್ರತಿಕ್ರಿಯಿಸಲು ನಾನೇನು ಸಿಎಂ ವಕ್ತಾರನಲ್ಲ ಅದೇ ರೀತಿ ಕುಮಾರಸ್ವಾಮಿ ಬೆಂಬಲಿಗನೂ ಅಲ್ಲ  ಎಂದು ವಿಧಾನ ಪರಿಷತ್ ಸದಸ್ಯ  ಬಿ.ಕೆ.ಹರಿಪ್ರಸಾದ್‌ ಖಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. 

BK Hariprasad said that I am not the CMs spokesperson gvd
Author
First Published Oct 27, 2023, 9:23 PM IST

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್,  ಚಿತ್ರದುರ್ಗ

ಚಿತ್ರದುರ್ಗ (ಅ.27): ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ  ಸಿಎಂ ಅವರನ್ನು ವಿಲನ್ ಎಂದಿರುವ ಬಗ್ಗೆ ಪ್ರತಿಕ್ರಿಯಿಸಲು ನಾನೇನು ಸಿಎಂ ವಕ್ತಾರನಲ್ಲ ಅದೇ ರೀತಿ ಕುಮಾರಸ್ವಾಮಿ ಬೆಂಬಲಿಗನೂ ಅಲ್ಲ  ಎಂದು ವಿಧಾನ ಪರಿಷತ್ ಸದಸ್ಯ  ಬಿ.ಕೆ ಹರಿಪ್ರಸಾದ್‌ ಖಾರವಗಿ  ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಬೆಂಗಳೂರು ವ್ಯಾಪ್ತಿಗೆ ಕನಕಪುರ ಸೇರ್ಪಡೆಗೊಳಿಸುವ ವಿಚಾರ ರಾಜಕೀಯವಾಗಿ, ಆಡಳಿತಾತ್ಮಕವಾಗಿ ಜಿಲ್ಲೆಗಳ ರಚನೆ ಮಾಡಲಾಗುತ್ತದೆ. ಭ್ರಷ್ಟಾಚಾರ ಆರೋಪ ಮಾಡುವ  ರಾಜಕಾರಣಿಗಳು ಮೊದಲು  ಭ್ರಷ್ಟಾಚಾರದ ಬಗ್ಗೆ ಮಾತಾಡುವುದು ಕಡಿಮೆ ಮಾಡಬೇಕು. 

ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆ ವಿಚಾರ ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಸೋನಿಯಾ ಗಾಂಧಿ, ಸುರ್ಜೆವಾಲಾ,  ವೇಣುಗೋಪಾಲ್,  ಸಿಎಂ, ಡಿಸಿಎಂಗೆ ಮಾತ್ರ ಈ ಬಗ್ಗೆ ಗೊತ್ತಿದೆ. ಬೇರೆ ಯಾರೂ ಹೇಳೋಕಾಗಲ್ಲ, ಅವರವರ ಅಭಿಪ್ರಾಯ  ಹೇಳಬಹುದು ಅಷ್ಟೇ ಎಂದರು.  ಸಚಿವ ಜಾರಕಿಹೊಳಿ ದುಬೈ ಪ್ರವಾಸ ವಿಚಾರಕ್ಕೆಪ್ರತಿಕ್ರಿಯಿಸಿ  ದುಬೈ ರೀತಿ ಅಭಿವೃದ್ಧಿಗಾಗಿ ಶಾಸಕರನ್ನು ಕರೆದೊಯ್ದರೆ ಆಶ್ಚರ್ಯ ಇಲ್ಲ.  ತಪ್ಪಾಗಿ ಅರ್ಥೈಸಿಕೊಳ್ಳಬಾರದು. ನಾನು ಯಾವತ್ತೂ ಸಣ್ಣ ಸ್ಥಾನದಲ್ಲಿ ಇದ್ದವನಲ್ಲ. ಮುಖ್ಯಮಂತ್ರಿಗಿತ ಉನ್ನತ ಸ್ಥಾನದಲ್ಲಿ ಇದ್ದವನು ನಾನು ಎಂದು ಪ್ರಶ್ನೆಯೊಂದಕ್ಕೆ  ಉತ್ತರಿಸಿದರು. 

ಹೌದು, ಸಿದ್ದರಾಮಯ್ಯಗೆ ನಾನು ವಿಲನ್‌: ಎಚ್‌.ಡಿ.ಕುಮಾರಸ್ವಾಮಿ

ಫ್ಯಾಷನ್‌ಗಾಗಿ ಹುಲಿ ಉಗುರು ಇತರೆ ವಸ್ತು ಬಳಕೆ ಸರಿಯಲ್ಲ. ವನ್ಯಜೀವಿ ಸಂರಕ್ಷಣೆ ಕಾಯ್ದೆ ಪ್ರಕಾರ ಕ್ರಮಜರುಗಿಸಬೇಕು. ಯಾರೇ ಆಗಿರಲಿ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹುಲಿ ಉಗುರು ಇತರೆ ವಸ್ತು ಧರಿಸಬಾರದು. ದರ್ಗಾ, ಮೌಲ್ವಿಗಳಿಂದ ನವಿಲುಗರಿ ಬಳಕೆ ಮಾಡಲಾಗುತ್ತಿದೆ.  ಪ್ರಧಾನಮಂತ್ರಿ ನವಿಲು ಗರಿ ಧರಿಸಿದ್ದರು ನವಿಲು ಸಾಕಿಕೊಂಡು ಇದ್ದರು, ಪ್ರಧಾನಿ ಅವರನ್ನು ಹಿಡಿದುಕೊಂಡು ಹೋಗಬೇಕಾ? ನವಿಲುಗರಿ ನೈಸರ್ಗಿಕವಾಗಿ ಉದುರುತ್ತದೆ, ಕೊಂದು ತಂದಿದ್ದರೆ ಕ್ರಮ ಕೈಗೊಳ್ಳಬೇಕು ಎಂದರು.   ಜನಗಣತಿ ವರದಿ ಬಹಿರಂಗಕ್ಕೆ ಆಗ್ರಹಿಸಿದ ಹರಿಪ್ರಸಾದ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನಗಣತಿ ವರದಿಯನ್ನು ಶೀಘ್ರ ಬಹಿರಂಗಗೊಳಿಸಬೇಕು ಎಂದು  ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್  ಆಗ್ರಹಿಸಿದರು. 

ನಗರದ ಪ್ರವಾಸಿಮಂದಿರದಲ್ಲಿ ಶುಕ್ರವಾರ ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಮಾತನಾಡಿ,  ರಾಜ್ಯ, ರಾಷ್ಟ್ರದಲ್ಲಿ ಜನಗಣತಿ ವರದಿ ಜಾರಿಗೆ ಆಗ್ರಹಿಸಿ ಸಭೆ  ನಡೆಸಲಾಗುತ್ತಿದೆ. ೨೦೧೧ರಲ್ಲಿ ಯುಪಿಎ ಸರ್ಕಾರದಿಂದ ಜನಗಣತಿ ಆಗಿತ್ತು ೨೦೧೧ರ ಜನಗಣತಿ ವರದಿ ಜಾರಿಗೆ ಬರಲಿಲ್ಲ 2017ರಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಜನಗಣತಿ ವರದಿ ಬಹಿರಂಗ ಪಡಿಸಲ್ಲ ಎಂದು ಹೇಳಿತ್ತು ಕರ್ನಾಟಕದಲ್ಲಿ ಕಾಂತರಾಜ್ ನೇತೃತ್ವದ ಸಮಿತಿಯಿಂದ ಜನಗಣತಿ ವರದಿ ಕಾರಣಾಂತರದಿಂದ ರಾಜ್ಯದಲ್ಲೂ ಜಾರಿ ಆಗಿಲ್ಲ ಎರಡೂ ವರದಿಗಳೂ ಶೀಘ್ರ ಜಾರಿಗೊಳಿಸಬೇಕು.

ಸರ್ಕಾರದಲ್ಲಿ ಕಿರುಕುಳ ಇಲ್ಲ, ನಮ್ಮದು ಬಂಡಾಯ ಅಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಲೋಪದೋಷಗಳು ಇದ್ದರೂ ತಿದ್ದುಪಡಿಗೊಳಿಸಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ರಾಹುಲ್ ಗಾಂಧಿ ಬಿಸಿಎಂ ಸಮಾವೇಶ ಆಗಬೇಕು ಎಂದು  ಹೇಳಿದ್ದಾರೆ. ಕಾಂಗ್ರೆಸ್ ವರ್ಕಿಂಗ್ ಕಮಿಟಿಯಿಂದಲೂ ಈ ಬಗ್ಗೆ ತೀರ್ಮಾನ ಆಗಿದೆ. ಸಣ್ಣ ಸಮುದಾಯದ ಜಾಗೃತಿಗಾಗಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದೆ ಎಂದು ಹೇಳಿದರು.

Follow Us:
Download App:
  • android
  • ios