Asianet Suvarna News Asianet Suvarna News

'ಮಂಗಳೂರಿನಲ್ಲಿ ಕಡಿಮೆ ಖರ್ಚಿನಲ್ಲೇ ಶಾಸಕರಾಗ್ತರೆ'

ಚನ್ನಬಸವನ ಗೌಡ ಅವರು ಬಳ್ಳಾರಿ ಬಿಜೆಪಿ ‌ಜಿಲ್ಲಾಧ್ಯಕ್ಷರಾಗಿಪ್ರಮಾಣವಚನ ಸ್ವೀಕರಿಸಿದರು. ಆದ್ರೆ, ಈ ಪದಗ್ರಹಣ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಅಚ್ಚರಿ ಹೇಳಿಕೆ ನೀಡಿದ್ದಾರೆ.

BJP Wins low cost In Elections at Mangaluru Says karunakar reddy
Author
Bengaluru, First Published Feb 8, 2020, 1:21 PM IST

ಬಳ್ಳಾರಿ, (ಫೆ.08): ಮಂಗಳೂರಿನಲ್ಲಿ ಕಡಿಮೆ ಖರ್ಚಿನಲ್ಲೇ ಶಾಸಕರಾಗುತ್ತಾರೆ ಎಂದು ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಕರುಣಾಕರ ರೆಡ್ಡಿ ಹೇಳಿದ್ದಾರೆ.

ಇಂದು (ಶನಿವಾರ) ಬಿಜೆಪಿ ‌ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಕರುಣಾಕರ ರೆಡ್ಡಿ, ಬಳ್ಳಾರಿಯಲ್ಲಿ ಬಿಜೆಪಿ ಕಟ್ಟಿದ ವಿವರಣೆ ನೀಡಿದ ರೆಡ್ಡಿ, ಮಂಗಳೂರಿನಲ್ಲಿ ಕಡಿಮೆ ಖರ್ಚಿನಲ್ಲಿ ಶಾಸಕರಾಗ್ತರೆ. ನಮ್ಮಲ್ಲಿ ಹಾಗಲ್ಲವೆಂದ ಹೇಳಿದರು.

ನಮ್ಮಲ್ಲಿ ಮತ್ತಷ್ಟು ಸಂಘಟನೆಯ ಅವಶ್ಯಕತೆ ಇದೆ. ಮುಂದೆ ಜಿ.ಪಂ, ಗ್ರಾಮ ಪಂಚಾಯತಿ ಚುನಾವಣೆ ಇದೆ.‌ ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗಿ ಎಂದ ರೆಡ್ಡಿ ಕರೆ ನೀಡಿದರು.

ಶ್ರೀರಾಮುಲು Vs ಆನಂದ್‌ ಸಿಂಗ್: ಯಾರ ತೆಕ್ಕೆಗೆ ಬಳ್ಳಾರಿ? ಗಣಿನಾಡಿನಲ್ಲಿ ಬಿಗ್‌ ಫೈಟ್!

ರೆಡ್ಡಿ ಮಾತಿನ ಅರ್ಥ
ಮಂಗಳೂರಿನಲ್ಲಿ ಕಡಿಮೆ ಖರ್ಚಿನಲ್ಲೇ ಶಾಸಕರಾಗುತ್ತಾರೆ ಅಂದ್ರೆ ಅಲ್ಲಿ ಸಂಘಟನೆ ಬಲಿಷ್ಠವಾಗಿದ್ದು, ಎಲೆಕ್ಷನ್‌ಲ್ಲಿ ಹೆಚ್ಚು ಹಣ ಖರ್ಚು ಮಾಡದೇ ಗೆಲ್ಲುತ್ತಾರೆ. ಅದು ಬಳ್ಳಾರಿಯಲ್ಲೂ ಆಗಬೇಕು. ಅಂದ್ರೆ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಮಾಡಬೇಕು ಎನ್ನುವ ಅರ್ಥದಲ್ಲಿ ಕಾರ್ಯಕರ್ತರಿಗೆ ಹೇಳಿದ್ದಾರೆ.

ಇನ್ನು ಈ ಜಿಲ್ಲಾಧ್ಯಕ್ಷ ಪದಾಗ್ರಹಣ ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ್ ರೆಡ್ಡಿ ಗೈರು ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಚನ್ನಬಸವನ ಗೌಡ ಜಿಲ್ಲಾಧ್ಯಕ್ಷ ಆಯ್ಕೆ ವಿಚಾರದಲ್ಲಿ ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು ಬಣಕ್ಕೆ ಹಿನ್ನಡೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ಈ ಕಾರ್ಯಕ್ರಮಕ್ಕೆ ಬಂದಿಲ್ಲ ಎನ್ನುವುದು ತಿಳಿದುಬಂದಿದೆ. ಅವರು ಎರಡನೇ ಬಾರಿಗೆ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿದ್ದಾರೆ. ಈ ಮೊದಲು ಅವರೇ ಜಿಲ್ಲಾಧ್ಯಕ್ಷರಾಗಿದ್ದರು.

Follow Us:
Download App:
  • android
  • ios