ಬೆಂಗಳೂರು (ನ.05): ಶಿರಾದಲ್ಲಿ ಒಳ್ಳೆಯ ಮತದಾನ ಆಗಿದೆ. ಆರ್‌ ಆರ್‌ ನಗರದಲ್ಲಿ ಮತದಾನದ ಪ್ರಮಾಣ ಕಡಿಮೆ ಆಗಿದೆ. ಆದರೆ ಎರಡು ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ಬಿಜೆಪಿ ಗೆಲ್ಲೋದು ಖಚಿತ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಭರವಸೆ ವ್ಯಕ್ತಪಡಿಸಿದರು. 

ಪ್ರತಿಪಕ್ಷ ಗಳ ಪ್ರಯತ್ನ ಪ್ರಯೋಜನ ಆಗಿಲ್ಲ.  ಬಿಜೆಪಿ ಮೇಲೆ ಜನರ ವಿಶ್ವಾಸ ಇದೆ.  ಹೀಗಾಗಿ ಅಭ್ಯರ್ಥಿಗಳ ಗೆಲುವು ಖಚಿತ ಎಂದು ಅಶ್ವತ್ಥ್ ನಾರಾಯಣ್ ಹೇಳಿದರು. 
 
 ಬಸವಕಲ್ಯಾಣದಿಂದ ವಿಜಯೇಂದ್ರ ಸ್ಪರ್ಧೆ ವಿಚಾರ : ಬಸವಕಲ್ಯಾಣದಿಂದ ಯಾರು ಅಭ್ಯರ್ಥಿ ಆಗಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪಕ್ಷದಲ್ಲಿ ಚರ್ಚೆ ಮಾಡಿ ಅಭ್ಯರ್ಥಿ ಆಯ್ಕೆ ಆಗುತ್ತದೆ.  ಯಾರು ಅರ್ಹರು ಇರುತ್ತಾರೋ ಅವರಿಗೆ ಪಕ್ಷ ಟಿಕೆಟ್ ಕೊಡುತ್ತದೆ ಎಂದರು.

ಬಿಜೆಪಿಯೇ 2 ಸೀಟು ಗೆಲ್ಲಲಿದೆ : ಗುಪ್ತಚರ ಇಲಾಖೆಯಿಂದ ಮಾಹಿತಿ ...
 
ಶಿರಾದಲ್ಲಿ ಬಿಜೆಪಿ ದುಡ್ಡಿನ ಹೊಳೆ ಹರಿಸಿದೆ ಎನ್ನುವ ಕುಮಾರಸ್ವಾಮಿ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ್ ಇಂತಹ ವಿಷಯಗಳೆಲ್ಲ ಕುಮಾರಸ್ವಾಮಿ ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಬಿಜೆಪಿ ಯಾವುದೇ ಹಣ ಖರ್ಚು ಮಾಡಿಲ್ಲ. ಜನ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದರು.

ಆರ್.ಆರ್. ನಗರದಲ್ಲಿ ನಮಗೆ ಜೆಡಿಎಸ್ ಬೆಂಬಲ ಕೊಟ್ಟಿಲ್ಲ. ಯಾರು ಬೆಂಬಲ ಇಲ್ಲದೆ ನಾವು ಸ್ಪರ್ಧೆ ಮಾಡಿದ್ದೇವೆ ಅಷ್ಟೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ  ಅಶ್ವತ್ಥ್ ನಾರಾಯಣ್ ಟಾಂಗ್ ಕೊಟ್ಟಿದ್ದಾರೆ.