Asianet Suvarna News Asianet Suvarna News

ನಾಲ್ಕು ರಾಜ್ಯಗಳಲ್ಲಿ ಜಯ ಖಚಿತ, ಬಿಜೆಪಿ ವಿಶ್ವಾಸ

-ಪಂಜಾಬಿನಲ್ಲಿ ಪ್ರಭಾವಿ ಪಕ್ಷವಾಗಿ ಪರಿವರ್ತನೆ

-ಗೃಹ ಸಚಿವ ಅಮಿತ್‌ ಶಾ, ಜೆಪಿ ನಡ್ಡಾ ಹೇಳಿಕೆ

-ರಕ್ಷಣಾ ಕಾರ್ಯಾಚರಣೆ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ

bjp will win four states impressive gains in punjab says amit shah and jp nadda san
Author
Bengaluru, First Published Mar 6, 2022, 1:11 AM IST | Last Updated Mar 6, 2022, 1:11 AM IST

ನವದೆಹಲಿ (ಮಾ. 6): ಉತ್ತರಪ್ರದೇಶ (Uttar Pradesh) ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ (BJP) ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ, ಪಂಜಾಬಿನಲ್ಲಿ (Punjab) ಪ್ರಭಾವಿ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಬಿಜೆಪಿಯ ಹಿರಿಯ ನಾಯಕರು ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Home Minister Amit Shah ), ‘ಚುನಾವಣೆ ಇರುವ ಪಂಚರಾಜ್ಯಗಳಲ್ಲಿ ಪ್ರಧಾನಿ ಮೋದಿ ಅವರ ಪ್ರಭಾವ ಹಿಂದೆಂದಿಗಿಂತಲೂ ಹೆಚ್ಚಿರುವುದನ್ನು ನೋಡಿದ್ದೇವೆ. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಮತ್ತು ಪಂಜಾಬ್‌ನಲ್ಲಿ ಭಾರೀ ಪ್ರಭಾವ ಬೀರಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ.

ಉತ್ತರ ಪ್ರದೇಶದಲ್ಲೀ ಭಾರೀ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಕೆಲ ನಾಯಕರು ಬಿಜೆಪಿ ಬಿಟ್ಟು ಹೋಗಿರಬಹುದು, ಆದರೆ ಮತದಾರರು ನಮ್ಮನ್ನು ಬಿಟ್ಟಿಲ್ಲ’ ಎಂದು ಹೇಳಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರು, ‘ಉತ್ತರ ಪ್ರದೇಶದಲ್ಲಿ ಪಕ್ಷವು ಅಭೂತಪೂರ್ವ ಜಯ ಗಳಿಸಲಿದೆ. ಪಕ್ಷವು ಸೋಲಲಿದೆ ಎಂಬ ನಿರೀಕ್ಷೆ ಹೊಂದಿದವರು ನಿರಾಶರಾಗಲಿದ್ದಾರೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಜನರು ಬಹುಮತ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಕ್ಷಣಾ ಕಾರ್ಯಾಚರಣೆ ಚುನಾವಣೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ: ಶಾ
ನವದೆಹಲಿ:
ಯುದ್ಧ ಪೀಡಿತ ಉಕ್ರೇನಿನಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗಾಗಿ ಹಮ್ಮಿಕೊಂಡ ಕಾರ್ಯಾಚರಣೆಯ ಸಫಲತೆ ವಿಧಾನಸಭಾ ಚುನಾವಣೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಹೇಳಿದ್ದಾರೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಶಾ, ‘ಉಕ್ರೇನಿನಿಂದ ಸುಮಾರು 13,000 ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದೆ ಹಾಗೂ ಮುಂಬರುವ ಕೆಲವು ವಿಮಾನಗಳಲ್ಲಿ ಇನ್ನೂ ಹಲವರು ಮರಳಲಿದ್ದಾರೆ. ಆಪರೇಶನ್‌ ಗಂಗಾದ ಸಫಲತೆ ಚುನಾವಣೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರಲಿದೆ’ ಎಂದಿದ್ದಾರೆ.

PM Modi in Varanasi ವಾರಾಣಸಿ ಜನರೊಂದಿಗೆ ಮೋದಿ ಆತ್ಮೀಯ ಸಂವಾದ, ಹೊಸ ಅಧ್ಯಾಯದತ್ತ ಉತ್ತರ ಪ್ರದೇಶ!
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ನೀಡಿ: ಮೋದಿ
ವಾರಾಣಸಿ:
ಉತ್ತರ ಪ್ರದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ನೀಡಬೇಕು. ಇದರಿಂದ ರಾಜ್ಯವನ್ನು ಆರ್ಥಿಕ ಅಭಿವೃದ್ಧಿಯ ನಿಟ್ಟಿನಿಲ್ಲಿ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ ಬುದ್ಧಿಜೀವಿಗಳು ಮತ್ತು ಇತರ ಪ್ರಮುಖ ವ್ಯಕ್ತಿಗಳೊಂದಿಗೆ ಅವರು ಶನಿವಾರ ಸಂವಾದ ನಡೆಸಿದರು.

ಈ ಸಂವಾದದಲ್ಲಿ ಪದ್ಮಭೂಷಣ ಪ್ರಶಸ್ತಿ ವಿಜೇತ ಹಿಂದೂಸ್ತಾನಿ ಗಾಯಕ ಚನ್ನುಲಾಲ್‌ ಮಿಶ್ರಾ, ಬಿಎಚ್‌ಯುನ ಉಪಕುಲಪತಿ ಸುಧೀರ್‌ ಜೈನ್‌, ವಾರಾಣಸಿಯ ಪ್ರಮುಖ ಪಾನ್‌ ಮಾರಾಟಗಾರ ಅಶ್ವಿನಿ ಚೌರಾಸಿಯಾ ಹಾಗೂ ಶುಕ್ರವಾರ ಮೋದಿ ಟೀ ಕುಡಿದಿದ್ದ ಅಂಗಡಿಯ ಮಾರಾಟಗಾರ ಪಪ್ಪು ಸೇರಿದಂತೆ ಸುಮಾರು 200 ಜನ ಈ ಸಂವಾದಲ್ಲಿ ಭಾಗವಹಿಸಿದ್ದರು.

PM Modi Rally ರೋಡ್ ಶೋನಲ್ಲಿ ಚಾಯ್ ಪೇ ಚರ್ಚಾ, ಬನಾರಸ್ ಪಾನ್ ಸವಿದ ಪ್ರಧಾನಿ ಮೋದಿ!
ನಂತರ ವಾರಾಣಸಿಯ ಖಜೂರಿಯಲ್ಲಿ ನಡೆಸಿದ ಚುನಾವಣಾ ರಾರ‍ಯಲಿಯಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಸ್ವಚ್ಛ ಭಾರತ ಅಭಿಯಾನ, ವೋಕಲ್‌ ಫಾರ್‌ ಲೋಕಲ್‌ ಅಭಿಯಾನಗಳ ಕುರಿತು ಹಾಸ್ಯ ಮಾಡುತ್ತಿದ್ದಾರೆ. ಉಕ್ರೇನ್‌ ಬಿಕ್ಕಟ್ಟನ್ನೂ ಸಹ ವಿಪಕ್ಷಗಳು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ. ಆದರೆ ಬಿಜೆಪಿ ವಿಶ್ವಮಟ್ಟದಲ್ಲಿ ದೇಶ ಗುರುತಿಸಿಕೊಳ್ಳುವಂತೆ ಮಾಡಿದೆ ಎಂದು ಅವರು ಹೇಳಿದರು. ವಾರಾಣಸಿಯಲ್ಲಿ ಮಾ.7ರಂದು ಚುನಾವಣೆ ನಡೆಯಲಿದೆ.

Latest Videos
Follow Us:
Download App:
  • android
  • ios