Asianet Suvarna News Asianet Suvarna News

PM Modi Rally ರೋಡ್ ಶೋನಲ್ಲಿ ಚಾಯ್ ಪೇ ಚರ್ಚಾ, ಬನಾರಸ್ ಪಾನ್ ಸವಿದ ಪ್ರಧಾನಿ ಮೋದಿ!

  • ವಾರಾಣಸಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ
  • ಟಿ ಹೊಟೆಲ್‌ನಲ್ಲಿ ಚಹಾ ಕುಡಿದು ಗಮನಸೆಳೆದ ಮೋದಿ
  • ಜನಪ್ರಿಯ ಬನಾರಸ್ ಪಾನ್ ಸವಿದ ಮೋದಿ
     
Uttar Pradesh Election 2022 PM Modi taste tea and banaras pan after varanasi Road show ckm
Author
Bengaluru, First Published Mar 4, 2022, 10:43 PM IST | Last Updated Mar 4, 2022, 10:52 PM IST

ವಾರಾಣಸಿ(ಮಾ.04): ಹರ ಹರ ಮಹದೇವ್, ಜೈಶ್ರೀರಾಮ್, ಮೋದಿ..ಮೋದಿ...ಘೋಷಣೆಗಳು ವಾರಾಣಸಿಯ ಬೀದಿ ಬೀದಿಗಳಲ್ಲಿ ಪ್ರತಿಧ್ವನಿಸುತ್ತಿತ್ತು. ಇತ್ತ ಹೂದಗಳಗಳನ್ನು ಎಸೆದು ನೆಚ್ಚಿನ ನಾಯ ಪ್ರಧಾನಿ ನರೇಂದ್ರ ಮೋದಿಗೆ ಜನ ಆತ್ಮೀಯ ಸ್ವಾಗತ ಕೋರಿದ್ದರು.ಕಿಕ್ಕಿರಿದು ತುಂಬಿದ ಜನಸಾಗರದ ನಡುವೋ  ಉತ್ತರ ಪ್ರದೇಶದ 7ನೇ ಹಂತದ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರ ನಡೆಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಅಂತಿಮ ಹಂತದ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ರೋಡ ಶೋ ಮೂಲಕ ಪ್ರಚಾರ ನಡೆಸಿದ ಮೋದಿಗೆ ಸ್ವಕ್ಷೇತ್ರದ ಜನ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಮೋದಿ ರೋಡ್ ಶೋಗೆ ಜನಸಾಗರವೇ ಹರಿದುಬಂದಿದೆ. ಒಪನ್ ರೂಫ್ ವಾಹನದಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸಿದ್ದಾರೆ. ವಾರಾಣಸಿಯ ರಸ್ತೆಗಳಲ್ಲಿ ಪ್ರಧಾನಿ ಮೋದಿಯನ್ನುು ಹೂವಿನ ದಳಗಳ ಮೂಲಕ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಇನ್ನು ಮೋದಿ, ರೋಡ್ ಶೋ ನಡುವೆ ವಾರಾಣಸಿ ಸಣ್ಣ ಸಣ್ಣ ಹೋಟೆಲ್, ಪಾನ್ ಮಸಾಲ, ಟಿ ಶಾಪ್‌ಗೆ ತೆರಳಿ ತಿನಿಸು ಸವಿದಿದ್ದಾರೆ.

ವಾರಾಣಸಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ, ಹರಿದು ಬಂದ ಜನಸಾಗರ!

ವಾರಾಣಸಿ ಪ್ರಧಾನಿ ಮೋದಿಯ ಲೋಕಸಭಾ ಕ್ಷೇತ್ರವಾಗಿದೆ. ಇದು ಮೋದಿ ಹಾಗೂ ಬಿಜೆಪಿಯ ಭದ್ರಕೋಟೆಯಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮೋದಿ ರೋಡ್ ಶೋ ಆರಂಭಿಸಿದರು. ಸರಿಸುಮಾರು 3 ಕಿಲೋಮೀಟರ್‌ಗೂ ಹೆಚ್ಚು ಮೋದಿ ರೋಡ್ ಶೋ ನಡೆಸಿದ್ದಾರೆ. ಇದೇ ವೇಳೆ ಕಾಶಿ ವಿಶ್ವನಾಥನ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಇನ್ನು ಸಣ್ಣ ಟಿ ಹೊಟೆಲ್‌ಗೆ ತೆರಳಿದ ಮೋದಿ ಚಹಾ ಸವಿದರು. ಕೆಲ ಹೊತ್ತು ಹೊಟೆಲ್ ಹಾಗೂ ನೆರೆದಿದ್ದ ಜನರ ಜೊತೆ ಸಾಮಾನ್ಯರಂತೆ ಮೋದಿ ಕಂಡು ಬಂದರು. ಮೋದಿ ಚಹಾ ಕುಡಿಯುವ ಮೂಲಕ ಚಾಯ್ ಪೇ ಚರ್ಚಾ ನೆನೆಪಿಸಿದರು. ಇಷ್ಟೇ ಅಲ್ಲ ಮೋದಿ ತಮ್ಮ ತಂದೆಯ ಜೊತೆ ಚಹಾ ಮಾರುತ್ತಿದ್ದ ದಿನಗಳು ಕೂಡ ನೆನಪು ಕೂಡ ಮರುಕಳಿಸಿದೆ.

ಸಣ್ಣ ಪಾನ್ ಮಸಾಲ ಶಾಪ್‌ಗೆ ತೆರಳಿದ ಪ್ರಧಾನಿ ಮೋದಿ, ಅತ್ಯಂತ ಜನಪ್ರಿಯ ಬನಾರಸ್ ಪಾನ್ ಸವಿದರು. ಈ ವೇಳೆಯೂ ಜೈ ಶ್ರೀರಾಮ್, ಹರ ಹರ ಮಹದೇವ್, ಮೋದಿ ಮೋದಿ ಘೋಷಣೆಗಳು ಮೊಳಗಿತು. ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಅತ್ಯಂತ ಯಶಸ್ವಿಯಾಗಿದ್ದು, ನೆಚ್ಚಿನ ನಾಯಕನನ್ನು ಹತ್ತಿರದಿಂದ ನೋಡಿ ಮಾತನಾಡಿ ವಾರಾಣಸಿ ಜನ ಸಂಭ್ರಮ ಪಟ್ಟಿದ್ದಾರೆ.

ಮಾಚ್‌ರ್‍ 7 ರಂದು ವಾರಾಣಸಿ, ಮಿರ್ಜಾಪುರ, ಭಾದೋಹಿ, ಸೋನ್‌ಭದ್ರಾ, ಚಂದೌಲಿ, ಗಾಜಿಪುರ, ಜೌನಪುರ, ಮಾವು ಹಾಗೂ ಆಜಂಗಢನ 54 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 2017ರ ಚುನಾವಣೆಯಲ್ಲಿ 8 ಜಿಲ್ಲೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು.

ದೇಶದಲ್ಲಿ ಸಾಕಷ್ಟುಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ 6ನೇ ಹಂತದಲ್ಲಿ ಶೇ.53.31ರಷ್ಟುಮತದಾನವಾಗಿದೆ. ಈ ಹಂತದಲ್ಲಿ 10 ಜಿಲ್ಲೆಗಳ 57 ಕ್ಷೇತ್ರಗಳಿಗೆ ಮತದಾನ ಶಾಂತಿಯುತವಾಗಿ ನಡೆದಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಜಯ್‌ ಕುಮಾರ್‌ ಲಲ್ಲು ಸೇರಿದಂತೆ 676 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಅಂಬೇಡ್ಕರ್‌ನಗರ, ಬಲರಾಮ್‌ಪುರ, ಸಿದ್ಧಾರ್ಥನಗರ, ಬಸ್ತಿ, ಗೋರಖ್‌ಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತದಾನ ನಡೆಯಿತು. ಅಂಬೇಡ್ಕರ್‌ನಗರದಲ್ಲಿ ಅತಿ ಹೆಚ್ಚು ಶೇ.58.66ರಷ್ಟುಮತದಾನವಾಗಿದೆ. ಉಳಿದಂತೆ ಬಲ್ಲಿಯಾದಲ್ಲಿ ಶೇ.51.81, ಬಲರಾಮ್‌ಪುರ್‌ನಲ್ಲಿ ಶೇ.48.53ರಷ್ಟುಮತದಾನವಾಗಿದೆ.ಜ್ಯದಲ್ಲಿ ಈವರೆಗೆ 403 ಕ್ಷೇತ್ರಗಳಲ್ಲಿ 349 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಉಳಿದ 54 ಕ್ಷೇತ್ರಗಳಿಗೆ ಮಾ.7ರಂದು ಕೊನೆಯ ಹಂತದ ಚುನಾವನೆ ನಡೆಯಲಿದೆ.

Latest Videos
Follow Us:
Download App:
  • android
  • ios