Asianet Suvarna News Asianet Suvarna News

ಸಂಘಟನೆ ಮತ್ತು ಈಶ್ವರಪ್ಪ ಹೇಗೋ ಹಾಗೆಯೇ ನಾನು ಮತ್ತು ಸಂಘಟನೆ: ಎಸ್‌ ಎನ್ ಚನ್ನಬಸಪ್ಪ

ವಮೊಗ್ಗ ಕ್ಷೇತ್ರದ ಜನತೆ ಬಿಜೆಪಿ ಜೊತೆಗಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲವು ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿ ಎಸ್‌.ಎನ್‌.ಚನ್ನಬಸಪ್ಪ ಹೇಳಿದರು.

BJP will win again in Shimoga bjp candidate says SN Channabasappa at shivamoga rav
Author
First Published Apr 21, 2023, 4:43 AM IST | Last Updated Apr 21, 2023, 4:43 AM IST

ಶಿವಮೊಗ್ಗ (ಏ.21) : ಶಿವಮೊಗ್ಗ ಕ್ಷೇತ್ರದ ಜನತೆ ಬಿಜೆಪಿ ಜೊತೆಗಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲವು ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿ ಎಸ್‌.ಎನ್‌.ಚನ್ನಬಸಪ್ಪ (SN Channabasappa)ಹೇಳಿದರು.

ನಾಮಪತ್ರ ಸಲ್ಲಿಕೆ ಬಳಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ(KS Eshwarappa) ಅವರು ಸ್ಟಾರ್‌ ಕ್ಯಾಂಪೇನರ್‌ (star campaigner)ಆಗಿರುವ ಹಿನ್ನೆಲೆಯಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಬೇಕು. ಆದರೂ ಈಶ್ವರಪ್ಪ ಅವರು ಹೆಚ್ಚಿನ ಸಮಯವನ್ನು ಶಿವಮೊಗ್ಗ(Shivamogga) ನಗರಕ್ಕೆ ಕೊಡಲಿದ್ದಾರೆ ಎಂದರು.

ಸಂಘಟನೆ ಮತ್ತು ಈಶ್ವರಪ್ಪ ಹೇಗೋ ಹಾಗೆಯೇ ನಾನು ಮತ್ತು ಸಂಘಟನೆ. ಇದನ್ನು ಆಯನೂರು ಮಂಜುನಾಥ್‌ ಸರಿಯಾಗಿ ಅರ್ಥ ಮಾಡಿಕೊಂಡಂತಿದೆ. ಅದಕ್ಕೆ ಅವರು ನನ್ನನ್ನು ಈಶ್ವರಪ್ಪ ಅವರ ಪ್ರತಿರೂಪಕ್ಕೆ ಹೋಲಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಎಂದೋ ಅಶಾಂತಿ ಮೂಡಿತ್ತು. ಆಯನೂರು ಮಂಜುನಾಥ್‌ ಹುಟ್ಟುವ ಮೊದಲು ಶಿವಮೊಗ್ಗದಲ್ಲಿ ಕೋಮುಗಲಭೆ ನಡೆದಿತ್ತು ಎನ್ನುವುದು ಅವರಿಗೆ ಗೊತ್ತಿಲ್ಲ ಎಂದು ಟಾಂಗ್‌ ನೀಡಿದರು.

ಶಿವಮೊಗ್ಗದಲ್ಲಿ ಚನ್ನಬಸಪ್ಪ ಗೆಲುವಿಗೆ ಶ್ರಮಿಸುವೆ: ಕೆ.ಎಸ್‌.ಈಶ್ವರಪ್ಪ

ಪತ್ನಿ ಉಷಾ​ರಾಣಿ ಹೇಳಿ​ದ್ದೇ​ನು?:

ಶಿವಮೊಗ್ಗ ನಗರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಎಸ್‌.ಎನ್‌.ಚನ್ನಬಸಪ್ಪ ಆಯ್ಕೆ ಹಿನ್ನೆಲೆಯಲ್ಲಿ ಗುರುವಾರ ಅವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿತ್ತು.

ಚನ್ನಬಸಪ್ಪ ನಿವಾಸಕ್ಕೆ ಕಾರ್ಯಕರ್ತರು ಆಗಮಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚನ್ನಬಸಪ್ಪ ಪತ್ನಿ ಉಷಾರಾಣಿ, ಪತಿ ಚನ್ನಬಸಪ್ಪ ಅವರು ಪಕ್ಷದ ಸಂಘಟನೆಯಲ್ಲಿ ಹಲವು ವರ್ಷದಿಂದ ತೊಡಗಿದ್ದರು. ನಮ್ಮಂತವರಿಗೆ ಟಿಕೇಟ್‌ ಸಿಗುತ್ತದಾ ಅಂದುಕೊಂಡಿದ್ದೇವು. ಪಕ್ಷ ಗುರುತಿಸಿ ಟಿಕೆಟ್‌ ನೀಡಿರುವುದು ಖುಷಿ ತಂದಿದೆ ಎಂದು ಹೇಳಿದರು.

ಚನ್ನಬಸಪ್ಪ ಆಸ್ತಿ ಮೌಲ್ಯ ₹1.20 ಕೋಟಿ

ಶಿವಮೊಗ್ಗ: ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಎನ್‌. ಚನ್ನಬಸಪ್ಪ ಅವರು ತಮ್ಮ ಪತ್ನಿ ಆಸ್ತಿಯೂ ಸೇರಿದಂತೆ ಒಟ್ಟು .1.20 ಕೋಟಿ ಆಸ್ತಿಯ ಒಡೆಯರಾಗಿದ್ದಾರೆ.

ಚನ್ನಬಸಪ್ಪ ಅವರು .1.74 ಲಕ್ಷ ಮೌಲ್ಯದ ಆಭರಣ, 1 ಬಜಾಜ್‌ ಸಿಟಿ-100 ಮತ್ತು ಹೋಂಡಾ ಆ್ಯಕ್ಟೀವಾ ವಾಹನ, ನಗದು ಹಣ .4.41 ಲಕ್ಷ ಹಣ ಸೇರಿದಂತೆ ಒಟ್ಟು .9.40 ಲಕ್ಷ ಚರಾಸ್ತಿಯನ್ನು ಹೊಂದಿದ್ದಾರೆ. .75 ಲಕ್ಷ ಮಾರುಕಟ್ಟೆಮೌಲ್ಯದ ಒಂದು ಮನೆಯ ಸ್ಥಿರಾಸ್ತಿ ಹೊಂದಿದ್ದಾರೆ. ಜೊತೆಗೆ .30.84 ಲಕ್ಷ ಸಾಲ ಮಾಡಿಕೊಂಡಿದ್ದಾರೆ.

ಪತ್ನಿ .3.47 ಲಕ್ಷ ಮೌಲ್ಯದ ಆಭರಣ, .1.21 ಲಕ್ಷ ನಗದು, ಒಂದು ವಾಹನ ಸೇರಿದಂತೆ ಒಟ್ಟು .6.58 ಲಕ್ಷ ಮೌಲ್ಯದ ಚರಾಸ್ತಿ ಹಾಗೂ .30 ಲಕ್ಷ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ.

ಚೆನ್ನಬಸಪ್ಪ 60 ಸಾವಿರ ಲೀಡ್‌ನಲ್ಲಿ ಗೆಲ್ತಾರೆ: ಕಾಂತೇಶ್‌

ಚನ್ನಬಸಪ್ಪ ಹಿರಿಯ ಹಾಗೂ ಸಾಮಾನ್ಯ ಕಾರ್ಯಕರ್ತರಾಗಿದ್ದಾರೆ. ಹಿಂದುತ್ವವನ್ನು ರೂಢಿಸಿಕೊಂಡಿದ್ದಾರೆ. ಪಕ್ಷ ಹಾಗೂ ಸಂಘಟನೆಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. 1989ರ ಚುನಾವಣೆಯಿಂದ 2018 ರವರೆಗಿನ ತಂದೆಯವರ ಚುನಾವಣೆಯಲ್ಲಿ ಚನ್ನಬಸಪ್ಪ ಅವರು ಮನೆಯ ಮಗನ ರೀತಿ ಕೆಲಸ ಮಾಡಿದ್ದಾರೆ ಎಂದು ಈಶ್ವರಪ್ಪ ಪುತ್ರ ಕೆ.ಇ.ಕಾಂತೇಶ್‌(KE Kantesh) ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನೂರಕ್ಕೆ ನೂರರಷ್ಟುಸಂತೋಷವಾಗಿದೆ. ಹಾಗೆಯೇ ವಿಶ್ವಾಸ ಕೂಡ ಇದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 46 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆವು. ಈ ಬಾರಿ 60 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಇದೆ ಎಂದು ಭವಿಷ್ಯ ನುಡಿದರು.

ನಾನು ಆರಂಭದಿಂದಲೂ ಟಿಕೆಟ್‌ ಆಕಾಂಕ್ಷಿಯಲ್ಲ ಎಂದು ಹೇಳುತ್ತ ಬಂದಿದ್ದೇನೆ. ತಂದೆಯವರು ಹಾಗೂ ಪಕ್ಷ ಹೇಳಿದಂತೆ ಕೇಳುತ್ತೇನೆ ಎಂದಿದ್ದೆ. ಚನ್ನಬಸಪ್ಪ ಅವರಿಗೆ ಎಲ್ಲ ರೀತಿಯ ಅನುಭವಿದೆ. ಅವರು ಗೆಲ್ಲುವ ವಿಶ್ವಾಸ ಇದೆ. ತಮಗೆ ಟಿಕೆಟ್‌ ಸಿಗದ ಬಗ್ಗೆ ಅಭಿಮಾನಿಗಳು ಬೇಸರದಿಂದ ಇದ್ದಾರೆ. ಪಕ್ಷೇತರಾಗಿ ಸ್ಪರ್ಧೆ ಮಾಡಬೇಕು ಎಂದಿದ್ದಾರೆ. ಪಕ್ಷ ನಮ್ಮ ತಾಯಿ ಇದ್ದಂತೆ, ಇಲ್ಲೇ ಹುಟ್ಟುತ್ತೇವೆ, ಇಲ್ಲೇ ಸಾಯುತ್ತೇವೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಹೇಳಿದರು.

 

ಬಿಜೆಪಿ 4ನೇ ಪಟ್ಟಿ ಬಿಡುಗಡೆ: ಬಿ.ವಿ. ನಾಯಕ್‌ಗೆ ಮಾನ್ವಿ ಟಿಕೆಟ್

ನೂರಕ್ಕೆ ನೂರು ಬಿಜೆಪಿಯ ಜೊತೆಗೆ ಯಾವಾಗಲೂ ನಾವು ಇರುತ್ತೇವೆ. 1999 ರಲ್ಲಿ ತಂದೆಯವರು ಸೋತಾಗ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದರು. 2013ರಲ್ಲಿ ಸೋತಾಗ ಎಂಎಲ್‌ಸಿ ಮಾಡಿದ್ದರು. ನನಗಿನ್ನೂ 43 ವರ್ಷ. ಇನ್ನೂ ಸಾಕಷ್ಟುಸಮಯ ಇದೆ. ಮುಂಬರುವ ದಿನಗಳಲ್ಲಿ ಪಕ್ಷದ ಹೈಕಮಾಂಡ್‌ ನನ್ನನ್ನು ಗುರುತಿಸುತ್ತದೆ. ಒಳ್ಳೆಯದು ಮಾಡುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

 

Latest Videos
Follow Us:
Download App:
  • android
  • ios