ಮುಂಬ​ರುವ ಚುನಾ​ವ​ಣೆ​ಯನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ರಾಜ್ಯದ ನಾಲ್ಕು ದಿಕ್ಕು​ಗ​ಳಿಂದ ಬಿಜೆಪಿ ‘ವಿಜ​ಯ ​ಸಂಕಲ್ಪ ಯಾತ್ರೆ’ ಶುರು​ವಾ​ಗ​ಲಿದ್ದು, ಮೈಸೂರು ಭಾಗದಿಂದ ಹೊರಡಲಿರುವ ಮೊದಲ ಯಾತ್ರೆ​ಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧ​ವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಲಿದ್ದಾರೆ.

ಚಾಮರಾಜನಗರ (ಫೆ.28) : ಮುಂಬ​ರುವ ಚುನಾ​ವ​ಣೆ​ಯನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ರಾಜ್ಯದ ನಾಲ್ಕು ದಿಕ್ಕು​ಗ​ಳಿಂದ ಬಿಜೆಪಿ ‘ವಿಜ​ಯ ​ಸಂಕಲ್ಪ ಯಾತ್ರೆ’ ಶುರು​ವಾ​ಗ​ಲಿದ್ದು, ಮೈಸೂರು ಭಾಗದಿಂದ ಹೊರಡಲಿರುವ ಮೊದಲ ಯಾತ್ರೆ​ಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧ​ವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಚಾಲನೆ ನೀಡಲಿದ್ದಾರೆ.

ಮುಖ್ಯ​ಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj BOmmai), ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yadiyurappa) ಸೇರಿ ರಾಜ್ಯದ ಹಲವು ನಾಯ​ಕರು, ಸ್ಥಳೀಯ ಶಾಸ​ಕರು, ಸಂಸ​ದರು ಪಾಲ್ಗೊ​ಳ್ಳ​ಲಿ​ದ್ದಾ​ರೆಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಯಾತ್ರೆಯ ವಿಭಾಗದ ಸಂಚಾಲಕ ಎಂ.ರಾಜೇಂದ್ರ ತಿಳಿಸಿದ್ದಾರೆ.

ಶಿಗ್ಗಾವಿ ಜನರು ದೈವಭಕ್ತರು, ಸಜ್ಜನರು: ಸಿಎಂ ಬಸವರಾಜ ಬೊಮ್ಮಾಯಿ

ಸೋಮ​ವಾ​ರ ಸುದ್ದಿ​ಗೋ​ಷ್ಠಿ​ಯಲ್ಲಿ ಮಾತನಾಡಿ, ಮಾಜಿ ಸಚಿವ ಕೆ.ಎ​ಸ್‌.​ಈ​ಶ್ವ​ರಪ್ಪ(KS Eshwarappa) ನೇತೃ​ತ್ವದ ಈ ಮೊದಲ ಯಾತ್ರೆಗೆ ಮಧ್ಯಾಹ್ನ 12ಕ್ಕೆ ಜೆ.ಪಿ.ನಡ್ಡಾ ಅವರು ಚಾಲನೆ ನೀಡುವರು. ನಂತರ ಅಲ್ಲಿನ ಬೇಡಗಂಪಣ ಸಮುದಾಯದವರೊಂದಿಗೆ ಸಂವಾದ ನಡೆಸುವ​ರು. ಸಾಲೂರು ಮಠದಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಹನೂರಿನಲ್ಲಿ ಮಧ್ಯಾಹ್ನ 2ಕ್ಕೆ ನಡೆಯಲಿರುವ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುವ​ರು. ಸಚಿವರಾದ ವಿ.ಸೋಮಣ್ಣ, ಸುನಿಲ್‌ ಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ, ಆರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಸಂಸದ ವಿ.ಶ್ರೀನಿವಾಸಪ್ರಸಾದ್‌, ಶಾಸಕರಾದ ಕೆ.ಎಸ್‌.ಈಶ್ವರಪ್ಪ, ಎನ್‌.ಮಹೇಶ್‌, ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನ ಪಾಲ್ಗೊಳ್ಳಲಿದ್ದಾರೆ ಎಂದರು.

ನಂತರ ಕೊಳ್ಳೇಗಾಲದಲ್ಲಿ ರೋಡ್‌ ಶೋ ನಡೆಸಿ ಅಲ್ಲೂ ಬಹಿರಂಗ ಸಭೆ ಆಯೋ​ಜಿ​ಸ​ಲಾ​ಗು​ವು​ದು. ರಾತ್ರಿ ಚಾಮರಾಜನಗರದಲ್ಲಿ ಯಾತ್ರೆ ವಾಸ್ತವ್ಯ ಹೂಡಲಿದ್ದು, ಮಾ.2ರ ಬೆಳಗ್ಗೆ 10.30ಕ್ಕೆ ನಗರದ ಆದಿಶಕ್ತಿ ದೇವಸ್ಥಾನದ ಮುಂಭಾಗದಿಂದ ಚಿಕ್ಕ ಅಂಗಡಿ ಬೀದಿ, ದೊಡ್ಡ ಅಂಗಡಿ ಬೀದಿ ಮೂಲಕ ರೋಡ್‌ ಶೋನಲ್ಲಿ ಯಾತ್ರೆ ಗುಂಡ್ಲುಪೇಟೆಗೆ ತೆರಳಲಿದ್ದು ಅಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದ​ರು.

ಮಾ.3ರಿಂದ 5ರವರೆಗೆ ಮೈಸೂರು ಗ್ರಾಮಾಂತರ ಹಾಗೂ ಮೈಸೂರು ನಗರ ಸೇರಿ ಸುಮಾರು 58 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಾಗಲಿದೆ. ಮಂಡ್ಯ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಮೂಲಕ ದಾವಣಗೆರೆ ತಲುಪಲಿದ್ದು, ಅಲ್ಲಿ ಬೃಹತ್‌ ಸಮಾವೇಶ ನಡೆಸಲಾಗುವುದು. ಪ್ರಧಾನಿ ನರೇಂದ್ರ ಮೋದಿ, ಬೊಮ್ಮಾಯಿ, ಯಡಿಯೂರಪ್ಪ ಸಮಾ​ವೇ​ಶ​ದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

Karnataka assembly election 2023: ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಕುಟುಂಬದ ಕುಡಿ ಬಿಜೆಪಿಗೆ ಎಂಟ್ರಿ!

ಜಲ​ಸಂಪ​ನ್ಮೂಲ ಸಚಿವ ಗೋವಿಂದ ಕಾರ​ಜೋಳ ನೇತೃ​ತ್ವದ 2ನೇ ಯಾತ್ರೆಯನ್ನು ಮಾ.2ರಂದು ರಕ್ಷಣಾ ಸಚಿವ ರಾಜ​ನಾಥ್‌ ಸಿಂಗ್‌ ಅವರು ನಂದ​ಗ​ಡದ ಸಂಗೊಳ್ಳಿ ರಾಯಣ್ಣ ಸ್ಮಾರಕ ಬಳಿ, ಮಾಜಿ ಸಿಎಂ ಜಗ​ದೀಶ್‌ ಶೆಟ್ಟರ್‌ ನೇತೃ​ತ್ವದ ಮೂರನೇ ಯಾತ್ರೆಗೆ ಮಾ.3ರಂದು ಬಸ​ವ​ಕ​ಲ್ಯಾ​ಣದ ಹೊಸ ಅನು​ಭವ ಮಂಟ​ಪದ ಸಮೀಪ, ಕಂದಾಯ ಸಚಿವ ಆರ್‌.​ಅ​ಶೋಕ್‌ ನೇತೃ​ತ್ವದ ನಾಲ್ಕನೇ ಯಾತ್ರೆಗೆ ಅದೇ ದಿನ ಬೆಂಗ​ಳೂ​ರಿನ ದೇವ​ನ​ಹ​ಳ್ಳಿ​ ಬಳಿಯ ಆವ​ತಿ​ಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಚಾಲನೆ ನೀಡ​ಲಿ​ದ್ದಾ​ರೆ.