Karnataka assembly election 2023: ಮಾಜಿ ಸಿಎಂ ದಿ.ರಾಮಕೃಷ್ಣ ಹೆಗಡೆ ಕುಟುಂಬದ ಕುಡಿ ಬಿಜೆಪಿಗೆ ಎಂಟ್ರಿ!

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕಾಗಿವೆ. ಮಾಜಿ ಸಿಎಂ ದಿ.‌ರಾಮಕೃಷ್ಣ ಹೆಗಡೆಯವರ ಕುಟುಂಬದ ಕುಡಿ ಶಶಿಭೂಷಣ್ ಹೆಗಡೆ ಬಿಜೆಪಿಗೆ ಎಂಟ್ರಿ ಕೊಡಲಿದ್ದಾರೆ. ಈ ಬಾರಿ ಉತ್ತರಕನ್ನಡ ಜಿಲ್ಲೆಯ ಶಿರಸಿ ರಾಜಕೀಯ‌ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ  ನಡೆಯಲಿದೆ  .

Ex CM Ramakrishna Hegde's family member joins BJP sirsi siddapur rav

ಕಾರವಾರ (ಫೆ.27) : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕಾಗಿವೆ. 

 ಮಾಜಿ ಸಿಎಂ ದಿ.‌ರಾಮಕೃಷ್ಣ ಹೆಗಡೆ(Ramkrishna hegde)ಯವರ ಕುಟುಂಬದ ಕುಡಿ ಶಶಿಭೂಷಣ್ ಹೆಗಡೆ(ShashiBhushan hegde) ಬಿಜೆಪಿಗೆ ಎಂಟ್ರಿ ಕೊಡಲಿದ್ದಾರೆ. ಈ ಬಾರಿ ಉತ್ತರಕನ್ನಡ ಜಿಲ್ಲೆಯ ಶಿರಸಿ ರಾಜಕೀಯ‌ ಕ್ಷೇತ್ರದಲ್ಲಿ ನಡೆಯಲಿದೆ  ಮಹತ್ತರ ಬದಲಾವಣೆ.

ಶಿಗ್ಗಾವಿ ಜನರು ದೈವಭಕ್ತರು, ಸಜ್ಜನರು: ಸಿಎಂ ಬಸವರಾಜ ಬೊಮ್ಮಾಯಿ

ಮಾಜಿ ಸಿಎಂ ದಿ.‌ರಾಮಕೃಷ್ಣ ಹೆಗಡೆಯವರ ಕುಟುಂಬದ ಕುಡಿ ಶಶಿಭೂಷಣ್ ಹೆಗಡೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.. ಜೆಡಿಎಸ್ ಪಕ್ಷದಿಂದ ಹೊರಬಂದಿದ್ದು ಬಿಜೆಪಿ ಸೇರಲಿರುವ ಶಶಿಭೂಷಣ್ ಹೆಗಡೆ. ನಾಳೆ ಸಿದ್ಧಾಪುರ ಹಾಗೂ ಬನವಾಸಿಗೆ ಸಿಎಂ ಭೇಟಿ ಬಳಿಕ ಅಧಿಕೃತವಾಗಿ ಬಿಜೆಪಿಯಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆ.

ಗಣೇಶ ಹೆಗಡೆ ಜನ್ಮಶತಮಾನೋತ್ಸವ - ಶತಸ್ಮೃತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ. ದಿ. ರಾಮಕೃಷ್ಣ ಹೆಗಡೆಯವರ ಅಣ್ಣ  ಹಾಗೂ ಶಶಿಭೂಷಣ ಹೆಗಡೆಯವರ   ಅಜ್ಜ ದಿ. ಗಣೇಶ ಹೆಗಡೆ ದೊಡ್ಮನೆ.

ಗುಜರಾತ ಮಾದರಿ; ಕಾಗೇರಿಗೆ ಕಸಿವಿಸಿ:

ಇತ್ತೀಚೆಗೆ ಬಿಸಿಬಿಸಿ ಚರ್ಚೆ ಆಗ್ತಿರುವ ಗುಜರಾತ್ ಚುನಾವಣಾ ಮಾದರಿ(Gujarat Election Pattern) ಬಗ್ಗೆ ಕಾಗೇರಿಯವರಿಗೆ ಕಸಿವಿಸಿ ಶುರುವಾಗಿದೆ. ಏಕೆಂದರೆ ಗುಜರಾತ್ ನಲ್ಲಿ ಹಿರಿಯರಿಗೆ ಟಿಕೆಟ್ ನಿರಾಕರಿಸಿ ಹೊಸಬರಿಗೆ ಮಣೆ ಹಾಕಲಾಗಿದ್ದು, ಒಂದುವೇಳೆ ಇದೇ ನಿಯಮ ರಾಜ್ಯದಲ್ಲೂ ಜಾರಿಗೆ ಬಂದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದಾಪುರ ಕ್ಷೇತ್ರದಲ್ಲಿ ಕಾಗೇರಿ ಬದಲಿಗೆ ಶಶಿಭೂಷಣ್ ಹೆಗಡೆಯವರನ್ನ ಬಿಜೆಪಿ ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

ಈಗಾಗಲೇ ಶಿರಸಿಯಲ್ಲಿ ಎರಡನೇ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegade Kageri) ಎಂದು ಗುರುತಿಸಿಕೊಂಡಿರುವ ಶಶಿಭೂಷಣ್ ಹೆಗಡೆ. ಶಶಿಭೂಷಣ ಹೆಗಡೆಯವರನ್ನು ತನ್ನ  ಪ್ರಮುಖ ದಾಳವನ್ನಾಗಿ ಬಳಸಿಕೊಳ್ಳಲಿರುವ ಬಿಜೆಪಿ. ಒಂದೋ ವಿಶ್ವೇಶ್ವರ ಹೆಗಡೆ ಕಾಗೇರಿ ಅಥವಾ ಅನಂತ ಕುಮಾರ್ ಹೆಗಡೆಯವರ ಬದಲು ನಿಲ್ಲಲಿರುವ ಶಶಿಭೂಷಣ್ ಹೆಗಡೆ. ಮುಂದಿನ ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಈಗಾಗಲೇ ಹೇಳಿಕೊಂಡಿರುವ ಸಂಸದ ಅನಂತ ಕುಮಾರ್ ಹೆಗಡೆ. ಹೀಗಾಗಿ ಅನಂತ ಕುಮಾರ್ ಹೆಗಡೆ ಸ್ಥಾನಕ್ಕೆ ಒಂದೋ ವಿಶ್ವೇಶ್ವರ ಹೆಗಡೆ ಕಾಗೇರಿ ಅಥವಾ ಶಶಿಭೂಷಣ್ ಹೆಗಡೆಯವರನ್ನು ತರುವ ಸಾಧ್ಯತೆಯಿದೆ.

ಮುಂದಿನ ಚುನಾವಣೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ನಿಂತು ಗೆದ್ದಲ್ಲಿ ಸಿಎಂ ಅಭ್ಯರ್ಥಿ ಆಗಲಿರುವ ಕಾಗೇರಿ. ಕಾಗೇರಿಗೆ ಮತ್ತೆ ಉಚ್ಚ ಸ್ಥಾನ ನೀಡಬೇಕಾಗಿರೋದ್ರಿಂದ ಅವರನ್ನು  ಲೋಕಸಭೆ ಚುನಾವಣೆಗೆ, ಶಶಿಭೂಷಣ್ ಹೆಗಡೆಯವರನ್ನು ವಿಧಾನ ಸಭೆ ಚುನಾವಣೆಗೆ ನಿಲ್ಲಿಸಬಹುದು ಎಂದು ಮೂಲಗಳಿಂದ ಮಾಹಿತಿ ಬಂದಿದೆ.

ಈ ಬಾರಿ ಕಾಗೇರಿಗೇ ಮತ್ತೆ ಟಿಕೆಟ್ ನೀಡುವುದಾದಲ್ಲಿ ಶಶಿಭೂಷಣ್ ಹೆಗಡೆಯವರನ್ನು ಲೋಕಸಭೆಗೆ ಅಭ್ಯರ್ಥಿಯನ್ನಾಗಿಸಲಿರುವ ಬಿಜೆಪಿ. ಆದರೆ ಶಶಿಭೂಷಣ್ ಹೆಗಡೆ ಶಿರಸಿ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಯಾಗಿದ್ದು, ಉತ್ತಮ ಮತಬ್ಯಾಂಕ್ ಹೊಂದಿರುವುದರಿಂದ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅವರನ್ನೇ ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚುಇದೆ.

2004ರಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಶಿಭೂಷನ್ ಹೆಗಡೆ (31273) ಕಾಂಗ್ರೆಸ್‌ನ ಮೊಹನ್ ಶೆಟ್ಟಿ (34738) ವಿರುದ್ಧ ಸೋತಿದ್ದರು, 2008ರಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಶಿಭೂಷಣ್ ಹೆಗಡೆ (30201), ಜೆಡಿಎಸ್‌ನ ದಿನಕರ ಶೆಟ್ಟಿ (30792) ವಿರುದ್ಧ ಸೋತಿದ್ದರು, ಬಳಿಕ 2013ರಲ್ಲಿ ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶಶಿಭೂಷಣ ಹೆಗಡೆ 39761, ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ (42854) ವಿರುದ್ಧ ಸೋತಿದ್ದರು. 2018ರಲ್ಲಿ ಮತ್ತೆ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಶಿಭೂಷಣ ಹೆಗಡೆ (26625), ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ (70595) ವಿರುದ್ಧ ಸೋತಿದ್ದರು. ಜೆಡಿಎಸ್‌‌ನಲ್ಲಿ ಭವಿಷ್ಯ ರೂಪಿಸಲಾಗದ ಕಾರಣ ರಾಷ್ಟ್ರೀಯ ಪಕ್ಷ ಬಿಜೆಪಿಗೆ ಸೇರ್ಪಡೆಗೊಳ್ಳಲಿರುವ ಶಶಿಭೂಷಣ್ ಹೆಗಡೆ. 

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿದ್ದು ಬಿಎಸ್‌ವೈ: ಅನ್ನ ಹಳಸಿತ್ತು; ನಾಯಿ ಕಾದಿತ್ತು ಎಂದ ಸಿದ್ದರಾಮಯ್ಯ

ಈ ಹಿಂದೆ ಚುನಾವಣಾ ರಾಜಕೀಯದಿಂದ ದೂರ ಸರಿಯುವುದಾಗಿ ಹೇಳಿದ್ದ ಶಶಿಭೂಷಣ್, ಇದೀಗ ಬಿಜೆಪಿಯತ್ತ ಮುಖ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಪ್ರಸ್ತುತ ಶಿರಸಿ ಕ್ಷೇತ್ರದಲ್ಲಿರುವ ಆಕಾಂಕ್ಷಿತ, ಸಂಭಾವ್ಯ ಅಭ್ಯರ್ಥಿಗಳು

ಬಿಜೆಪಿ
ವಿಶ್ವೇಶ್ವರ ಹೆಗಡೆ ಕಾಗೇರಿ (ಹಾಲಿ),
ಸಚ್ಚಿದಾನಂದ ಹೆಗಡೆ ( ಮದ್ಯಪಾನ ಸಂಯಮ ಮಂಡಳಿ ಮಾಜಿ ಅಧ್ಯಕ್ಷ), ಶಶಿಭೂಷಣ ಹೆಗಡೆ,
ಕೃಷ್ಣ ಎಸಳೆ (ಅನಂತಕುಮಾರ ಹೆಗಡೆ ಬೆಂಬಲಿಗ)

ಕಾಂಗ್ರೆಸ್
ಭೀಮಣ್ಣ ನಾಯ್ಕ,
ರವೀಂದ್ರನಾಥ ನಾಯ್ಕ, ದೀಪಕ ದೊಡ್ಡೂರು, ಶ್ರೀಪಾದ ಹೆಗಡೆ ಕಡವೆ, ಕುಮಾರ ಜೋಶಿ ಸೋಂದಾ

ಜೆ.ಡಿ.ಎಸ್
ಉಪೇಂದ್ರ ಪೈ

ಪಕ್ಷೇತರ
ಎಂ.ಆರ್. ಹೆಗಡೆ ಹಾಲಳ್ಳ

Latest Videos
Follow Us:
Download App:
  • android
  • ios