Asianet Suvarna News Asianet Suvarna News

ರಾಜ್ಯಾಧ್ಯಕ್ಷ ವಿಜಯೇಂದ್ರ ಮುಂದಿದೆ ಹಲವು ಸವಾಲು..!

ರಾಜ್ಯಾಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಅನೇಕ ಹಿರಿಯ ನಾಯಕರನ್ನು ಮನವೊಲಿಸಿ ಪಕ್ಷ ಸಂಘಟನೆಗೆ ಹೆಜ್ಜೆ ಹಾಕುವಂತೆ ಮಾಡಬೇಕಿದೆ. ಸಿ.ಟಿ.ರವಿ, ಬಸನಗೌಡ ಪಾಟೀಲ ಯತ್ನಾಳ, ವಿ.ಸೋಮಣ್ಣ, ಆರ್‌.ಅಶೋಕ್, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸುನೀಲ್‌ ಕುಮಾರ್‌ ಅವರಲ್ಲದೆ ಪ್ರಹ್ಲಾದ್‌ ಜೋಶಿ, ಬಸವರಾಜ ಬೊಮ್ಮಾಯಿ, ಸಿ.ಪಿ.ಯೋಗೇಶ್ವರ್‌, ಅರವಿಂದ್ ಬೆಲ್ಲದ ಮತ್ತಿತರ ನಾಯಕರನ್ನು ವಿಶ್ವಾಸ ತೆಗೆದುಕೊಳ್ಳಬೇಕಾಗುತ್ತದೆ.

BJP State President BY Vijayendra Faces Many Challenges in Karnataka grg
Author
First Published Nov 11, 2023, 11:53 AM IST | Last Updated Nov 11, 2023, 11:53 AM IST

ಬೆಂಗಳೂರು(ನ.11):  ನಲವತ್ತೆಂಟು ವರ್ಷದ ಬಿ.ವೈ.ವಿಜಯೇಂದ್ರ ಅವರು ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆಗೆ ನೇಮಕಗೊಂಡಿದ್ದು, ಪಕ್ಷವನ್ನು ಮುನ್ನಡೆಸುವುದರೊಂದಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವರಿಷ್ಠರ ನಿರೀಕ್ಷೆ ತಲುಪಲು ಹಲವು ಸವಾಲುಗಳನ್ನು ಎದುರಿಸಬೇಕಾಗಬಹುದು.

1.ರಾಜ್ಯಾಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಅನೇಕ ಹಿರಿಯ ನಾಯಕರನ್ನು ಮನವೊಲಿಸಿ ಪಕ್ಷ ಸಂಘಟನೆಗೆ ಹೆಜ್ಜೆ ಹಾಕುವಂತೆ ಮಾಡಬೇಕಿದೆ. ಸಿ.ಟಿ.ರವಿ, ಬಸನಗೌಡ ಪಾಟೀಲ ಯತ್ನಾಳ, ವಿ.ಸೋಮಣ್ಣ, ಆರ್‌.ಅಶೋಕ್, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸುನೀಲ್‌ ಕುಮಾರ್‌ ಅವರಲ್ಲದೆ ಪ್ರಹ್ಲಾದ್‌ ಜೋಶಿ, ಬಸವರಾಜ ಬೊಮ್ಮಾಯಿ, ಸಿ.ಪಿ.ಯೋಗೇಶ್ವರ್‌, ಅರವಿಂದ್ ಬೆಲ್ಲದ ಮತ್ತಿತರ ನಾಯಕರನ್ನು ವಿಶ್ವಾಸ ತೆಗೆದುಕೊಳ್ಳಬೇಕಾಗುತ್ತದೆ.

ಬಿಎಸ್‌ವೈ ಪುತ್ರ ಎನ್ನುವ ಕಾರಣಕ್ಕೆ ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ: ವಿಜಯೇಂದ್ರ

2.ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 28 ಸ್ಥಾನಗಳ ಪೈಕಿ 25 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಅಷ್ಟು ಅಲ್ಲದಿದ್ದರೂ ಅದಕ್ಕೆ ಹತ್ತಿರವಾಗುವಷ್ಟು ಸ್ಥಾನಗಳನ್ನಾದರೂ ಗೆಲ್ಲಲೇಬೇಕು. ಇಲ್ಲದಿದ್ದರೆ ವರಿಷ್ಠರ ದೃಷ್ಟಿಯಲ್ಲಿ ವರ್ಚಸ್ಸು ಕುಸಿದಂತಾಗುತ್ತದೆ.

3.ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್‌ ತನ್ನದೇ ಆದ ತಂತ್ರಗಾರಿಕೆ ಮೂಲಕ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಲು ದಾಪುಗಾಲು ಇಡುತ್ತಿದೆ. ಅದರ ವೇಗಕ್ಕೆ ಬ್ರೇಕ್ ಹಾಕಿ ಮುಂದೆ ಸಾಗುವ ಅನಿವಾರ್ಯತೆ ಬಿಜೆಪಿಗೆ ಇದೆ.

4.ಹಾಲಿ ಸಂಸದರ ಪೈಕಿ ಅನೇಕ ಹಿರಿಯರಿಗೆ ಟಿಕೆಟ್ ನೀಡುವುದಿಲ್ಲ ಎಂಬ ವದಂತಿ ದಟ್ಟವಾಗಿದೆ. ಇದು ಪಕ್ಷದಲ್ಲಿ ಕಳೆದ ವಿಧಾನಸಭಾ ಚುನಾವಣೆ ವೇಳೆಯಂತೆ ದೊಡ್ಡ ಮಟ್ಟದ ಅಸಮಾಧಾನಕ್ಕೂ ಕಾರಣವಾಗಬಹುದು. ಇದನ್ನು ಆರಂಭದಲ್ಲೇ ಚಿವುಟಿ ಹಾಕುವ ಜವಾಬ್ದಾರಿ ವಿಜಯೇಂದ್ರ ಅವರ ಮೇಲಿದೆ.

News Hour: ಬಿಜೆಪಿ ನೊಗ ಹಿಡಿದ ವಿಜಯೇಂದ್ರಗೆ ಲೋಕಸಭೆ ಎಲೆಕ್ಷನ್ ಟಾಸ್ಕ್!

5.ತಂದೆ ಯಡಿಯೂರಪ್ಪ ಅವರ ಪ್ರಭಾವದಿಂದ ಹೊರಬಂದು ತಮ್ಮದೇ ಆದ ಸ್ವಂತ ವರ್ಚಸ್ಸು ರೂಪಿಸಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಯಡಿಯೂರಪ್ಪ ನಂತರ ಮುಂದೇನು ಎಂಬ ಪ್ರಶ್ನೆ ಬೃಹದಾಕಾರವಾಗಿ ಉದ್ಭವಿಸಬಹುದು.

6.ಲಿಂಗಾಯತ ಸಮುದಾಯದ ನಾಯಕರಾಗಿ ಹೊರಹೊಮ್ಮುವುದರ ಜತೆಗೆ ಎಲ್ಲ ಸಮುದಾಯಗಳ ವಿಶ್ವಾಸ ಗಳಿಸಿ, ಉಳಿಸಿಕೊಂಡು ಹೋಗಬೇಕಾಗುತ್ತದೆ.

7.ಬಿಜೆಪಿಯಿಂದ ಬೇಸತ್ತು ಅಥವಾ ಕಾಂಗ್ರೆಸ್ಸಿನ ಆಮಿಷಕ್ಕೆ ಒಳಗಾಗಿ ಹಲವು ಮುಖಂಡರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ. ಅವರನ್ನು ಹಿಡಿದಿಟ್ಟುಕೊಂಡು ವಿಶ್ವಾಸ ಮೂಡಿಸಬೇಕಿದೆ.

Latest Videos
Follow Us:
Download App:
  • android
  • ios