ಮಂಡ್ಯ ಸಂಸದೆ ತ್ಯಾಗಕ್ಕೆ ಸಿಗ್ಲಿಲ್ಲ ಪ್ರತಿಫಲ, ಸುಮಲತಾ ಬಿಟ್ಟು 3 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ!

ವಿಧಾನಪರಿಷತ್ ಚುನಾವಣೆಗೆ ಕೆಲವೇ ದಿನಗಳಿದ್ದು, ಬಿಜೆಪಿ ಹೈಕಮಾಂಡ್ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ಸುಮಲತಾಗೆ ಟಿಕೆಟ್ ಘೋಷಣೆ ಮಾಡಿಲ್ಲ ಎನ್ನುವುದೇ ಸದ್ಯದ ಬಿಸಿಬಿಸಿ ಚರ್ಚೆ.

BJP releases list of candidates for Karnataka Legislative Council Election 2024 gow

ಬೆಂಗಳೂರು (ಜೂ.2): ವಿಧಾನಪರಿಷತ್ ಚುನಾವಣೆಗೆ ಕೆಲವೇ ದಿನಗಳಿದ್ದು, ಬಿಜೆಪಿ ಹೈಕಮಾಂಡ್ ಮೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದೆ. ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆಯ ದಿನವಾಗಿದೆ. ಹೀಗಾಗಿ ಇಂದು ಬಿಜೆಪಿ ಹೈಕಮಾಂಡ್ ಅಂತಿಮವಾಗಿ ತನ್ನ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.

ವಿಧಾನ ಪರಿಷತ್‌ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

ಒಕ್ಕಲಿಗ ಸಮುದಾಯದ ಮಾಜಿ ಸಚಿವ ಸಿ.ಟಿ ರವಿ, ಗಂಗಾಮತಸ್ಥ ಎನ್. ರವಿಕುಮಾರ್ ಮತ್ತು ಮರಾಠ ಸಮುದಾಯದಿಂದ ಎಂ.ಜಿ ಮೂಳೆ (ಮಾರುತಿ ರಾವ್ ಮೂಳೆ) ಅವರಿಗೆ ಟಿಕೆಟ್‌ ನೀಡಲಾಗಿದೆ. ಮೂರು ಸ್ಥಾನಗಳಿಗೆ  44 ಆಕಾಂಕ್ಷಿಗಳಿದ್ದರು. 12 ಹೆಸರನ್ನು ಶಾರ್ಟ್ ಲೀಸ್ಟ್ ಮಾಡಿದ  ಕೋರ್ ಕಮಿಟಿ, ಒಂದು ಸ್ಥಾನಕ್ಕೆ ಮೂರು-ನಾಲ್ಕು ಹೆಸರು ಆಯ್ಕೆ ಮಾಡಿತ್ತು. ಸರ್ವಾನುಮತದಿಂದ ರವಿಕುಮಾರ್ ಹೆಸರು ಶಿಪಾರಸು ಮಾಡಲಾಗಿತ್ತು. ಸಂಘಟನಾ ವಿಭಾಗದಿಂದ ಸಿಟಿ ರವಿ ಹೆಸರುಶಿಪಾರಸು ಮಾಡಲಾಗಿತ್ತು.  ಸಿಟಿ ರವಿ ಹೆಸರನ್ನು ಹೈಕಮಾಂಡ್ ಘೋಷಣೆ ಮಾಡಿದೆ. ಮತ್ತು ಮಾರುತಿ ರಾವ್ ಮೂಳೆ ಹೆಸರು ಶಿಪಾರಸು ಮಾಡಲಾಗಿತ್ತು. 

ವಿಧಾನಸಭೆ ಇಂದ ಪರಿಷತ್ ಸ್ಪರ್ಧಿಸುತ್ತಿರುವ ಹಿನ್ನೆಲೆ  ನಾಳೆ 12 ಗಂಟಗೆ ಸಿಟಿ ರವಿ ನಾಮಿನೇಶನ್ ಸಲ್ಲಿಸಲಿದ್ದಾರೆ. ಇನ್ನು ಮಂಡ್ಯ ಸಂಸದೆ ಸುಮಲತಾಗೆ ಎಂಎಲ್‌ಸಿ ಟಿಕೆಟ್‌ ನೀಡಲಾಗುತ್ತದೆ ಎಂದು ಸುದ್ದಿಯಾಗಿತ್ತು. ಆದರೆ ಈಗ ಟಿಕೆಟ್‌ ಘೋಷಣೆಯಾಗಿಲ್ಲ.  ಸುಮಲತಾಗೆ ನಿರಾಸೆಯಾದ ಹಿನ್ನೆಲೆ ಬಿಜೆಪಿಯ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.

ನಾವು ಎಕ್ಸಿಟ್ ಪೋಲ್‌ಗಿಂತ ಹೆಚ್ಚು ಸ್ಥಾನ ಗೆಲ್ತೀವಿ, 400 ಸೀಟ್ ದಾಟ್ತೀವಿ: ಪ್ರಲ್ಹಾದ್ ಜೋಶಿ

ಇನ್ನು ಎನ್ ರವಿಕುಮಾರ್ ಪ್ರತಿಕ್ರಿಯೆ ನೀಡಿ, ಇವತ್ತು ನಾನು ಕಾಯ್ತಿದ್ದೆ. ನಾನು ಯಡಿಯೂರಪ್ಪ, ವಿಜಯೇಂದ್ರ ಕೋರ್ ಕಮಿಟಿ ಸದಸ್ಯರಿಗೆ ಮನವಿ ಮಾಡಿದ್ದೆ. ನಮ್ಮ ರಾಜ್ಯದ ಹಿರಿಯ ನಾಯಕರಿಗೆ ಮನವಿ ಮಾಡಿದ್ದೆ. ನನ್ನ ಮನವಿಗೆ ಓಗೊಟ್ಟು ನಮ್ಮ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರು ನನಗೆ ಆಯ್ಕೆ ಮಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಹೇಳುತ್ತೇನೆ. ಪರಿಷತ್ ವಿಪಕ್ಷ ನಾಯಕನ‌ ಆಯ್ಕೆ ವಿಚಾರದ ಬಗ್ಗೆ ಮಾತನಾಡಿ, ಗೊತ್ತಿಲ್ಲ, ನಮ್ಮ ಪಾರ್ಟಿ ಡಿಸೈಡ್ ಮಾಡ್ತಾರೆ. ಇನ್ನೂ ಸಮಯ ಇದೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸುಮಲತಾ ಸೇರಿದಂತೆ ಸಾಕಷ್ಟು ಆಕಾಂಕ್ಷಿಗಳು ಇದ್ರು ಅವರಿಗೂ ಮುಂದೆ ಒಳ್ಳೆಯ ಅವಕಾಶ ಸಿಗಲಿದೆ. ಸಿ.ಟಿ ರವಿ ಅವರು ಪಕ್ಷದಲ್ಲಿ ಪಾದರಸದಂತೆ ಓಡಾಡ್ತಿದ್ರು. ಅವರಿಗೆ ಪಕ್ಷ ಒಳ್ಳೆಯ ಅವಕಾಶ ನೀಡಿದೆ ಎಂದಿದ್ದಾರೆ.

Latest Videos
Follow Us:
Download App:
  • android
  • ios