ಬೆಂಗಳೂರು, (ಜ.17):  ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಆಪರೇಷನ್ ಕಮಲ​ ಇನ್ನೂ ತಣ್ಣಗೆ ಆಗುವಂತೆ ಕಾಣಿಸುತ್ತಿಲ್ಲ.

ಆಲ್ ಈಸ್ ಕ್ಲೀಯರ್ ಎಂದು ಕಾಂಗ್ರೆಸ್ ನಿರಾಳವಾಗಿದೆ. ಮತ್ತೊಂದೆಡೆ ಜೆಡಿಎಸ್ ಎಲ್ಲಾ ಕೂಲ್ ಆಗಿದೆ ಎನ್ನುತ್ತಿದೆ. ಆದ್ರೆ ಬಿಜೆಪಿ ಮಾತ್ರ ತನ್ನ ಹಿಡಿತ ಸಡಿಲಿಸಿಲ್ಲ.

ಆಪರೇಷನ್ ಇಲ್ಲ ಇಲ್ಲ ಎನ್ನುತ್ತಿದ್ದ ಬಿಜೆಪಿಯ ಮುಖವಾಡ ಬಟಾಬಯಲು

ಬಿಜೆಪಿ ಕಬ್ಜದಲ್ಲಿದ್ದ ಕೆಲ ಕಾಂಗ್ರೆಸ್ ಅತೃಪ್ತ ಶಾಸಕರು ಈಗಾಗಲೇ ತಮ್ಮ ರಾಜ್ಯ ನಾಯಕರ ಮುಂದೆ ಹಾಜರಾಗಿದ್ದಾರೆ. ಇನ್ನು ಕೆಲವರು ನಾಳೆ (ಶುಕ್ರವಾರ) ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗುವ ಸಾಧ್ಯತೆಗಳಿವೆ.

ಇದ್ರಿಂದ ಮತ್ತೊಮ್ಮೆ ಬಿಜೆಪಿಯ ಆಪರೇಷನ್ ಫೇಲ್  ಎಂದೇ ಭಾವಿಸಲಾಗಿದೆ. ಆದ್ರೆ  ಮೈತ್ರಿ ಸರ್ಕಾರವನ್ನು ಕೆಡುವಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಬಿಜೆಪಿ, ಇನ್ನೂ ಏನು ಮುಗಿದಿಲ್ಲ, ಪಿಕ್ಚರ್ ಅಭೀ ಬಾಕಿ ಹೈ ಎನ್ನುತ್ತಿದೆ.

ಆಪರೇಷನ್ ಕಮಲ ಠುಸ್: ಈ ಬಾರಿ ಡಿಕೆಶಿಯಲ್ಲ! ಈ ನಾಯಕನೇ ಕಿಂಗ್!

ನಿನ್ನೆ ಮಟ್ಟಿಗೆ ನೋಡೋದಾದ್ರೆ, ಬಂಡಾಯ ಶಾಸಕರ ಮನವನ್ನು ಕಾಂಗ್ರೆಸ್​​ ವರಿಷ್ಠರು ಒಲಿಸಿದ್ದಾರೆ. ಅವರು ಪಕ್ಷ ಬಿಡೋಲ್ಲ ಎನ್ನಲಾಗಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ನಾಲ್ವರು ಬಂಡಾಯ ಶಾಸಕರು ರಾಜ್ಯಕ್ಕೆ ಮರಳಿದ್ದರು. 

ಈ ಹಿನ್ನೆಲೆಯಲ್ಲಿ ಬಿಜೆಪಿಯ ಆಪರೇಷನ್ ಕಮಲವನ್ನು ಠುಸ್ ಮಾಡುವಲ್ಲಿ ಕೆಸಿ ವೇಣುಗೋಪಾಲ್ ಹಾಗೂ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎನ್ನಲಾಗಿತ್ತು. 

ಸರ್ಕಾರ ಉಳಿಸಲು ಹಿರಿಯ ಸಚಿವರ ತಲೆದಂಡ; ಯಾರ‍್ಯಾರು ಲಿಸ್ಟ್‌ನಲ್ಲಿ?

ಆದ್ರೆ, ಬಿಜೆಪಿ ಆಪರೇಷನ್ ಪ್ಲ್ಯಾನ್​ ಇನ್ನೂ ಮುಗಿದಿಲ್ಲ, ಇನ್​​ಫ್ಯಾಕ್ಟ್​ ಈ ನಾಲ್ವರು ಶಾಸಕರು ಕಾಂಗ್ರೆಸ್​ ವರಿಷ್ಠರಿಗೆ ಬೆಂಬಲ ಸೂಚಿಸಿರೋದು ಬಿಜೆಪಿಗೆ ಹಿನ್ನಡೆಯೂ ಅಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಮತ್ತೆ ಆಪರೇಷನ್​ ಫೇಲ್​ ಅಂತಾ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ನಾಯಕರು ಘಂಟಾಘೋಷವಾಗಿ ಘೋಷಿಸಿರೋ ಬೆನ್ನಲ್ಲೇ, ಸರ್ಕಾರ ರಚನೆ ಮಾಡಲು ನಾಯಕರು ಬಿಜೆಪಿ ಮುಂದಿರುವ ಅಂಕಿ ಅಂಶಗಳನ್ನು ಕಲೆ ಹಾಕುತ್ತಿದ್ದಾರೆ ಅನ್ನೋ ಮಾಹಿತಿ ತಿಳಿದುಬಂದಿದೆ.

#OperationSankrantiಗೆ ಬ್ರೇಕ್: ಮರಳಿ ‘ಕೈ’ ಗೂಡಿಗೆ ಬಂಡಾಯ ಶಾಸಕರು!

ಅದ್ರಲ್ಲೂ ಗುರುಗ್ರಾಮದಲ್ಲೇ ಕುಳಿತು ಬಿ.ಎಸ್.ಯಡಿಯೂರಪ್ಪ ಅನುಪಸ್ಥಿತಿಯಲ್ಲಿ  ಜಗದೀಶ್ ಶೆಟ್ಟರ್, ಈಶ್ವರಪ್ಪ ಹಾಗೂ ಅಶೋಕ್ ನೇತೃತ್ವದಲ್ಲಿ ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದಾರೆ.

 ಬಿಜೆಪಿಯ 104 ಶಾಸಕರು ಇನ್ನು ಎರಡ್ಮೂರು ದಿನ ಗುರುಗ್ರಾಮದಲ್ಲೇ ವಾಸ್ತವ್ಯ ಹೂಡುವ ಸಾಧ್ಯತೆ ಇದೆ. ಬಿಜೆಪಿ ನಾಯಕರು ವಾರಾಂತ್ಯಕ್ಕೆ ಅಂತಿಮ ನಿರ್ಧಾರ ತೆಗೆದುಕೊಂಡು ರಾಜ್ಯಕ್ಕೆ ವಾಪಸ್ ಆಗುವ ಸಾದ್ಯತೆಗಳಿವೆ.

ಕಾಂಗ್ರೆಸ್‌ನ ಬೆಳವಣಿಗೆ ನೋಡಿ ಹೆಜ್ಜೆ ಇಡು!: ಪುತ್ರನಿಗೆ ದೇವೇಗೌಡ ಸಲಹೆ

ಒಟ್ಟಿನಲ್ಲಿ  ನಾಳಿನ (ಶುಕ್ರವಾರ) ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಯಾವೆಲ್ಲ ಶಾಸಕರು ಹಾಜರಾಗ್ತಾರೆ? ಯಾರೆಲ್ಲ ಗೈರಾಜರಾಗಲಿದ್ದಾರೆ ಎನ್ನುವುದರ ಮೇಲೆ ರಾಜ್ಯ ರಾಜಕೀಯ ಚಿತ್ರಣ ಶೇ.50ರಷ್ಟು ತಿಳಿಯಲಿದೆ.