ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಧೂಳಿಪಟ ಗ್ಯಾರಂಟಿ: ಸಿ.ಟಿ.ರವಿ

ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಠೇವಣಿ ಕಳೆದುಕೊಳ್ಳುವುದು ಗ್ಯಾರಂಟಿ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಕ್ಷರಶಃ ಧೂಳಿಪಟವಾಗಲಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. 

BJP National General Secretary CT Ravi Slams On Congress At Kundgol gvd

ಕುಂದಗೋಳ (ಮಾ.18): ವಿಧಾನಸಭೆ ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಠೇವಣಿ ಕಳೆದುಕೊಳ್ಳುವುದು ಗ್ಯಾರಂಟಿ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಕ್ಷರಶಃ ಧೂಳಿಪಟವಾಗಲಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದವರು ಜನರಿಗೆ ಗ್ಯಾರಂಟಿ ಕಾರ್ಡ್‌ ಎನ್ನುವ ಫಾಲ್ಸ್‌ ಕಾರ್ಡ್‌ ಕೊಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದ ವಾರಂಟಿ ಮುಗಿದು ಹೋಗಿದೆ. ಇವರೇನು ಗ್ಯಾರಂಟಿ ಕಾರ್ಡ್‌ ಕೊಡುತ್ತಾರೆ ಎಂದರು.

ಟೆಂಟ್‌ ಕೀಳುವ ಮೊದಲು ಕಸ ಗುಡಿಸುತ್ತಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಟೆಂಟ್‌ ಕಿತ್ತು ಹೋಗುತ್ತಿದೆ. ಹೀಗಾಗಿ ಸಿಕ್ಕಷ್ಟುಗುಡಿಸೋಣ ಅಂತ ಹೊರಟಿದ್ದಾರೆ. ಅವರ ನಾಯಕರು ಆಲೂಗಡ್ಡೆ ಹಾಕಿ ಬಂಗಾರ ತೆಗೆಯಿರಿ ಎಂದು ಹೇಳಿದ್ದರು. ಈಗ ಸುಳ್ಳು ಗ್ಯಾರಂಟಿ ಕಾರ್ಡ್‌ ನೀಡಲು ಹೊರಟ್ಟಿದ್ದಾರೆ ಎಂದು ನುಡಿದರು. ಸಿದ್ದರಾಮಯ್ಯ ಲಜ್ಜೆ ಬಿಟ್ಟು ಸುಳ್ಳು ಹೇಳುತ್ತಾರೆ ಎಂದು ಟೀಕಿಸಿದ ಅವರು, ಬಿಜೆಪಿ ವಿರುದ್ಧ ಬರೀ ಸುಳ್ಳು ಹೇಳುತ್ತಾರೆ ಎಂದರು. ಬಿಜೆಪಿ ಸರ್ಕಾರ ನೀಡಿದ ಫಲಾನುಭವಿಗಳನ್ನು ಮತದಾರರಾಗಿ ಬದಲಿಸಿದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಠೇವಣಿಯೇ ಉಳಿಯಲ್ಲ ಎಂದ ಅವರು, ಜಾತಿ ತಾರತಮ್ಯ ಮಾಡದೇ ಯೋಜನೆ ಜನರಿಗೆ ನೀಡಿದ್ದೇವೆ ಎಂದು ನುಡಿದರು.

ಭಾರತವನ್ನು ಸಂಪೂರ್ಣ ಹಿಂದುತ್ವ ಶಾಲೆಯಾಗಿ ಪರಿವರ್ತಿಸಬೇಕಿದೆ: ಸಿ.ಟಿ.ರವಿ

ಬಿಜೆಪಿಯವರು ಮೀಸಲಾತಿ ವಿರೋಧಿಗಳೆಂದು ಟೀಕಿಸಿದರು. ಆದರೆ, ಈಗ ಎಸ್ಸಿಎಸ್ಟಿಮೀಸಲಾತಿ ಹೆಚ್ಚಿಸಿ ನಮ್ಮ ಬದ್ಧತೆ ಸಾಬೀತುಪಡಿಸಿದ್ದೇವೆ. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದೇವೆ. ವೋಟು ಮೊದಲಲ್ಲ. ರಾಷ್ಟ್ರ ಮೊದಲು ಎನ್ನುವುದು ಬಿಜೆಪಿ ನೀತಿ. ಆದರೆ, ವೋಟು ಮೊದಲು ಎನ್ನುವವರು ಕುಕ್ಕರ್‌ ಬಾಂಬ್‌ನಲ್ಲಿ ಎಷ್ಟುವೋಟು ಬರುತ್ತದೆ ಎಂದು ಲೆಕ್ಕ ಹಾಕುತ್ತಾರೆ ಎಂದರು. ಕಾಂಗ್ರೆಸ್‌ ರಾಜಕೀಯ ಲಾಭಕ್ಕೆ ಎಂತಹ ಕೀಳುಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ. ಎಸ್‌ಡಿಪಿಐ ಸೇರಿದಂತೆ ದೇಶದ್ರೋಹಿಗಳನ್ನು ಬಿರಿಯಾನಿ ಕೊಟ್ಟು ಸಾಕಿದ್ದು ಕಾಂಗ್ರೆಸ್‌ ಎಂದು ಆರೋಪಿಸಿದರು.

ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದ ಅವರು, ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನ ಪಡೆದು ಅಧಿಕಾರದ ಗದ್ದುಗೆ ಏರಲಿದ್ದೇವೆ. ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ರಿಪೋರ್ಟ್‌ ಕಾರ್ಡ್‌ನ್ನು ಜನರ ಮುಂದಿಡುತ್ತೇವೆ. ಸ್ಪಷ್ಟಬಹುಮತ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹುಬ್ಬಳ್ಳಿಯಲ್ಲಿ ಐಐಟಿ, ರೈಲ್ವೆ ನನಿಲ್ದಾಣಕ್ಕೆ ಸಿದ್ಧಾರೂಢರ ಹೆಸರು, ವಿದ್ಯಾರ್ಥಿ ವೇತನ, ಕಳಸಾ-ಬಂಡೂರಿಗೆ ಸಾವಿರ ಕೋಟಿ ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದರು. ಪಂಚಮಸಾಲಿ ಮೀಸಲಾತಿ ಬಗ್ಗೆ ಕೇಳಿದ ಪ್ರಶ್ನೆಗೆ ಮೀಸಲಾತಿ ವಿಷಯ ಕೋರ್ಟ್‌ನಲ್ಲಿದೆ. 

ವಾರಂಟಿ ಮುಗಿದಿರುವ ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಕಾರ್ಡ್‌ ನಂಬಬೇಡಿ: ಸಿ.ಟಿ.ರವಿ

ಆ ಬಗ್ಗೆ ಉತ್ತರಿಸುವುದಿಲ್ಲ ಎಂದು ಜಾರಿಗೊಂಡರು. ಕುಂದಗೋಳ ಮತಕ್ಷೇತ್ರದ ಅಭ್ಯರ್ಥಿ ಯಾರು ಎಂದು ಪ್ರಶ್ನಿಸಿದಾಗ ಉತ್ತರ ನೀಡಲು ನಿರಾಕರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ್‌, ಮಾಜಿ ಶಾಸಕ ಎಸ್‌.ಐ.ಚಿಕ್ಕನಗೌಡ್ರು, ಮಹೇಶ್‌ ಟೆಂಗಿನಕಾಯಿ, ಬಿಜೆಪಿ ಮುಖಂಡ ಎಂ.ಆರ್‌.ಪಾಟೀಲ್‌, ಬಸವರಾಜ ಕುಂದಗೋಳಮಠ, ಲಿಂಗರಾಜ ಪಾಟೀಲ್‌, ಉಮೇಶ್‌ ಉಸುಗಲ್‌, ಗುರು ಪಾಟೀಲ ಸೇರಿದಂತೆ ಹಲವರಿದ್ದರು.

Latest Videos
Follow Us:
Download App:
  • android
  • ios