ಬಿಜೆಪಿ ಸೇರಲು ಕಾಂಗ್ರೆಸ್ ಶಾಸಕರೂ ತುದಿಗಾಲಲ್ಲಿ: ಸಿ.ಟಿ. ರವಿ
ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಗುಜರಾತ್‌ನಲ್ಲಿ ಅದರ ಸಾಧನೆ ಏನು? ಉತ್ತರ ಪ್ರದೇಶದಲ್ಲಿ 2 ಸ್ಥಾನ ಗೆದ್ದಿದೆ. ಮುಂದೆ ಕರ್ನಾಟಕದಲ್ಲೂ ಕಾಂಗ್ರೆಸ್‌ನಲ್ಲಿ ಮಹಾಭಾರತ ಶುರುವಾಗುತ್ತದೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್‌ನವರು ಮಾಡುತ್ತಿರುವುದು ಪ್ರಜಾಧ್ವನಿ ಕಾರ್ಯಕ್ರಮವಲ್ಲ. ಅದು ಕಾಂಗ್ರೆಸ್ ಧ್ವನಿ ಎಂದು ವ್ಯಂಗ್ಯವಾಡಿದ ಸಿ.ಟಿ. ರವಿ
ರಾಣೆಬೆನ್ನೂರು(ಜ.24): ಕಾಂಗ್ರೆಸ್‌ನ ಅನೇಕರು ಪಕ್ಷ ತೊರೆದು ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತಿದ್ದು, ನಾವು ಯಾರನ್ನು ತೆಗೆದುಕೊಳ್ಳಬೇಕು, ಯಾರನ್ನು ಬಿಡಬೇಕು ಎಂದು ಸೆಲೆಕ್ಟ್ ಮಾಡಿ ತೆಗೆದುಕೊಳ್ಳುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಡಿ.ಕೆ.ಶಿವಕುಮಾರ ಹೇಳಿಕೆಗೆ ತಿರುಗೇಟು ನೀಡಿದರು.
ಬಿಜೆಪಿಯ ಹಾಲಿ ಶಾಸಕರೇ ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ ಎಂಬ ಡಿ.ಕೆ.ಶಿವಕುಮಾರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಗುಜರಾತ್‌ನಲ್ಲಿ ಅದರ ಸಾಧನೆ ಏನು? ಉತ್ತರ ಪ್ರದೇಶದಲ್ಲಿ 2 ಸ್ಥಾನ ಗೆದ್ದಿದೆ. ಮುಂದೆ ಕರ್ನಾಟಕದಲ್ಲೂ ಕಾಂಗ್ರೆಸ್‌ನಲ್ಲಿ ಮಹಾಭಾರತ ಶುರುವಾಗುತ್ತದೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್‌ನವರು ಮಾಡುತ್ತಿರುವುದು ಪ್ರಜಾಧ್ವನಿ ಕಾರ್ಯಕ್ರಮವಲ್ಲ. ಅದು ಕಾಂಗ್ರೆಸ್ ಧ್ವನಿ ಎಂದು ವ್ಯಂಗ್ಯವಾಡಿದರು.
ನ್ಯಾಯ ಕೇಳುವವರಿಗೆ ನೈತಿಕತೆ ಇರಬೇಕು: ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿ.ಟಿ. ರವಿ
ಸಿದ್ದುಗೆ ಸುರಕ್ಷಿತ ಕ್ಷೇತ್ರ ಪಾಕ್:
ರಾಣೆಬೆನ್ನೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಮನಸ್ಥಿತಿಗೆ ಪಾಕಿಸ್ತಾನವೇ ಸೇಫ್ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ‘ನನ್ನ ಲೆಕ್ಕಾಚಾರದ ಪ್ರಕಾರ ಅವರಿಗೆ ಪಾಕಿಸ್ತಾನವೇ ಸೇಫ್. ಅವರ ಮನಸ್ಥಿತಿಗೆ ಸೇಫ್ ಆಗಿರುವುದು ಪಾಕಿಸ್ತಾನ ಮಾತ್ರ ಎಂದು ತಿರುಗೇಟು ನೀಡಿದರು. ಪಾಕಿಸ್ತಾನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಸಿಎಂ ಯಡಿಯೂರಪ್ಪ, ಮುಖ್ಯಮಂತ್ರಿ ಬೊಮ್ಮಾಯಿ ಇರಲ್ಲ. ಪಾಕಿಸ್ತಾನಕ್ಕೆ ಹೋದರೆ ಕಾಟ ಕೊಡಲು ಡಿ.ಕೆ. ಶಿವಕುಮಾರ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಇರಲ್ಲ. ಹೀಗಾಗಿ ಸಿದ್ದರಾಮಯ್ಯಗೆ ಪಾಕಿಸ್ತಾನವೇ ಸೇಫ್ ಎಂದು ವ್ಯಂಗ್ಯವಾಡಿದರು.