ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ, ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಸಿ.ಟಿ. ರವಿ
ಉತ್ತರ ಪ್ರದೇಶ, ಗೋವಾ, ಗುಜರಾತ್ ಮಾದರಿಯ ಫಲಿತಾಂಶವೇ ಕರ್ನಾಟಕದಲ್ಲಿ ಬರಲಿದೆ. ಕೆಲ ಮನೆತನಗಳಿಗೆ ನಾವು ಹುಟ್ಟಿರೋದೆ ಲೀಡರ್ ಅಂತ ಅಂದುಕೊಂಡಿದ್ದಾರೆ. ತನಗೆ ತಾನೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡು ಬಂದಿದ್ದಾರೆ. ನಾನೇ ಲೀಡರ್ ಅಂದುಕೊಂಡಿದ್ದಾರೆ ಅಂತ ಹೇಳುವ ಮೂಲಕ ನೆಹರು ಕುಟುಂಬದ ವಿರುದ್ಧ ಗುಡುಗಿದ ಸಿ.ಟಿ ರವಿ.
ಬೆಂಗಳೂರು(ಫೆ.04): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹುಶಃ ಅವರು ಪಾಕಿಸ್ತಾನದ ರಿಪೋರ್ಟ್ ಪಡೆದಿರಬೇಕು. ಪಾಕಿಸ್ತಾನದಲ್ಲಿ ತಿನ್ನೋಕೆ ಅನ್ನ ಇಲ್ಲದೆ ಹೊಡೆದಾಡಿಕೊಳ್ತಿದ್ದಾರೆ. ನಮ್ಮ ದೇಶದಲ್ಲಿ ಗರೀಬಿ ಕಲ್ಯಾಣದ ಮೂಲಕ, ಕೊರೋನಾ ಸಂದರ್ಭದಲ್ಲೂ ಪ್ರತಿಯೊಬ್ಬರ ರಕ್ಷಣೆ ಆಗಿದೆ. ಮೋದಿ ಜಿ ಅಂದ್ರೆ ಜನ ಹುಚ್ಚೆದ್ದು ಕುಣೀತಾರೆ. ನೋಡಿದ್ದೀರಿ ಹುಬ್ಬಳ್ಳಿ, ಕಲ್ಬುರ್ಗಿಯಲ್ಲಿ. ಪಾಕಿಸ್ತಾನ ರಿಪೋರ್ಟ್ ಇಟ್ಟುಕೊಂಡು ಡಿ.ಕೆ.ಶಿವಕುಮಾರ್ ಮಾತನಾಡ್ತಿದ್ದಾರೆ. ಪಾಕಿಸ್ತಾನದ ಈಗಿನ ಸರ್ಕಾರ ಪತನ ಆಗುತ್ತೆ ಅಂತಿದೆ. ಆ ಮಾಹಿತಿ ಇವರ ಬಳಿ ಇದೆ ಅಂತ ಡಿಕೆಶಿ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹರಿಹಾಯ್ದಿದ್ದಾರೆ.
ಸರ್ವೇ ರಿಪೋರ್ಟ್‌ನಲ್ಲಿ ಕಾಂಗ್ರೆಸ್‌ಗೆ 160 ಸ್ಥಾನ ಬರಲಿದೆ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿ.ಟಿ ರವಿ, ಉತ್ತರ ಪ್ರದೇಶ, ಗೋವಾ, ಗುಜರಾತ್ ಮಾದರಿಯ ಫಲಿತಾಂಶವೇ ಕರ್ನಾಟಕದಲ್ಲಿ ಬರಲಿದೆ. ಕೆಲ ಮನೆತನಗಳಿಗೆ ನಾವು ಹುಟ್ಟಿರೋದೆ ಲೀಡರ್ ಅಂತ ಅಂದುಕೊಂಡಿದ್ದಾರೆ. ತನಗೆ ತಾನೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡು ಬಂದಿದ್ದಾರೆ. ನಾನೇ ಲೀಡರ್ ಅಂದುಕೊಂಡಿದ್ದಾರೆ ಅಂತ ಹೇಳುವ ಮೂಲಕ ನೆಹರು ಕುಟುಂಬದ ವಿರುದ್ಧ ಸಿ.ಟಿ ರವಿ ಗುಡುಗಿದ್ದಾರೆ.
ಎಸ್‌ಡಿಪಿ, ಪಿಎಫ್‌ಐಗೆ ಬೆಂಬಲ ಕೊಟ್ಟ ಕಾಂಗ್ರೆಸ್: ಸಿ.ಟಿ.ರವಿ ಆರೋಪ
ಇವತ್ತು ವಿಸ್ತೃತವಾಗಿ ಕೋರ್ ಕಮಿಟಿ ಸಭೆ ನಡೆದಿದೆ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಬಿ.ಎಸ್. ಯಡಿಯೂರಪ್ಪ, ಅರುಣ್ ಸಿಂಗ್ ಹಾಗೂ ಪ್ರಭಾರಿ ಡಿ.ಕೆ. ಅರುಣ ಅವ್ರ ನೇತೃತ್ವದಲ್ಲಿ ವಿಸ್ತೃತವಾಗಿ ಚರ್ಚೆ ಮಾಡಿದ್ದೇವೆ. ವಿವಿಧ ಕ್ಷೇತ್ರ ಗಳ ಸರ್ವೇ ರಿಪೋರ್ಟ್ ಚರ್ಚೆ ಆಗಿದೆ. ಆ ರಿಪೋರ್ಟ್ ಪ್ರಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರ್ತೇವೆ. ನಿಚ್ಚಳ ಬಹುಮತದಲ್ಲಿ ಅಧಿಕಾರಕ್ಕೆ ಬರುತ್ತೇವೆ. ನಾವು ಸೌಂಡ್ ಮಾಡುವ ಕೆಲಸ ಅಲ್ಲ. ಗ್ರೌಂಡ್ ರಿಪೋರ್ಟ್‌ನಲ್ಲಿ ನಾವು ಯಶಸ್ವಿಯಾಗಿ ಮಾಡಿದ್ದೇವೆ. ಬೂತ್ ಗೆಲ್ಲುವ ಬಗ್ಗೆ ಕಾರ್ಯಕರ್ತರು ಮಾಡಿದ್ದಾರೆ ಅಂತ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ವಿವಿಧ ಕೇಂದ್ರ ಸಚಿವರು ಕೂಡ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಕಾರ್ಯಕ್ರಮದಲ್ಲಿ ಮತ್ತು ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 70 ರಿಂದ 80 ರಷ್ಟು ಮತದಾರರು ಸರ್ಕಾರ ಕಾರ್ಯಕ್ರಮಗಳ ಫಲಾನುಭವಿಗಳು ಆಗಿದ್ದಾರೆ. ಅವರನ್ನು ಬಿಜೆಪಿ ಮತದಾರರಾಗಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಗುಜರಾತ್ ನಲ್ಲಿ ಮಾಡಿ ಯಶಸ್ಸು ಕಂಡಿದ್ದೇವೆ ಅಂತ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೆ ಮೈಸೂರು ಭಾಗದಲ್ಲಿ ಎರಡು ತಂಡಗಳಾಗಿ ಒಟ್ಡು ನಾಲ್ಕು ತಂಡಗಳಲ್ಲಿ ಯಾತ್ರೆ ನಡೆಯಲಿದೆ. ಕೊನೆಗೆ ದಾವಣಗೆರೆಯಲ್ಲಿ ಮಹಾಸಂಗಮ ನಡೆಯುತ್ತದೆ. ಪ್ರತಿ ಜಿಲ್ಲೆಯಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ಮಾಡಲು ಯೋಜನೆ ರೂಪಿಸಿದ್ದೇವೆ. 224 ವಿಧಾನಸಭಾ ಕ್ಷೇತ್ರಗಳಲ್ಲೂ ಯಾತ್ರೆ ಮಾಡುತ್ತೇವೆ. ಯಾತ್ರೆಗೆ ವಿಜಯ ಸಂಕಲ್ಪ ಯಾತ್ರೆ ಹೆಸರು ಇಟ್ಟಿದ್ದೇವೆ. ಪ್ರತಿ ಬೂತ್ ಗೆ ಎಲ್ಇಡಿ ವ್ಯಾನ್ ಹೋಗುತ್ತದೆ. ಅಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ಮನದಟ್ಟು ಮಾಡುತ್ತೇವೆ. ಯುಪಿ, ಗುಜರಾತ್ ಮಾದರಿಯಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಶೇಕಡಾ 50 ರಷ್ಟು ಮತಗಳನ್ನು ಪಡೆದು, ಯಾರ ಹಂಗು ಇಲ್ಲದೇ ಅಧಿಕಾರಕ್ಕೆ ಬರುತ್ತೇವೆ. ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರೋದು ನಿಶ್ಚಿತ ಅಂತ ಹೇಳಿದ್ದಾರೆ.
ಕಾಂಗ್ರೆಸ್‌ನವರು ಸೌಂಡ್ ಮಾಡಬಹುದು, ಜೆಡಿಎಸ್ ನವರು ಅಸೆಂಬ್ಲಿಗಾಗಿ ಕಾಯುತ್ತಿರಬಹುದು. ಆದರೆ ನಾವಂತೂ 224 ಕ್ಷೇತ್ರಗಳಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿ ಗೆಲ್ಲುತ್ತೇವೆ. ನಾವು ಫಲಾನುಭವಿಗಳನ್ನು ಟಚ್ ಮಾಡಿದ್ರೆ ಸಾಕು, ಸೋಲುವ ಪ್ರಶ್ನೆಯೇ ಇಲ್ಲ. ಈ ಮಾದರಿಯಿಂದ ಯುಪಿ, ಗುಜರಾತ್ ನಲ್ಲಿ ಯಶಸ್ಸು ಕಂಡಿದ್ದೇವೆ. ಅದೇ ರೀತಿ ಕರ್ನಾಟಕದಲ್ಲೂ ಯಶಸ್ಸು ಕಾಣುತ್ತೇವೆ ಅಂತ ತಿಳಿಸಿದ್ದಾರೆ.
ರಥಯಾತ್ರೆ, ಫೆಬ್ರವರಿ ಕೊನೆಯ ವಾರದಲ್ಲಿ ಪ್ರಾರಂಭವಾಗಬಹುದು. ಮಾರ್ಚ್ ಮೂರನೇ ವಾರದಲ್ಲಿ ಮಹಾಸಂಗಮ ಯಾತ್ರೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿಯಲ್ಲಿ ಎರಡು ಅಥವಾ ಮೂರು ಬಾರಿ ಕರ್ನಾಟಕಕ್ಕೆ ಬರ್ತಾರೆ ಅಂತ ಸ್ಪಷ್ಟಪಡಿಸಿದ್ದಾರೆ.
ರಾಮನಗರದಲ್ಲಿ ತ್ಯಾಗದ ನಾಟಕ ನಡೀತಿದೆ: ಜೆಡಿಎಸ್ ವಿರುದ್ಧ ಹರಿಹಾಯ್ದ ಸಿ.ಟಿ. ರವಿ
ಬಹುಮತಕ್ಕೆ ಬೇಕಾದ ಸಂಖ್ಯೆ ಗಳಿಸಲು ಪ್ಲಾನ್ ಮಾಡಿದೆ. A,B,C,D ಎಂದು ವಿಂಗಡಿಸಿ ಗೆಲ್ಲುವ ಟಾರ್ಗೆಟ್ ಮಾಡಲಾಗಿದೆ. A ನಲ್ಲಿ 60 ರಿಂದ 65 ಸೀಟುಗಳು ಫಿಕ್ಸ್ ಅಗಿದೆ. ಇವು ಬಿಜೆಪಿ ಗೆಲ್ಲುವ ಕ್ಷೇತ್ರಗಳಾಗಿವೆ. B ನಲ್ಲಿ 25 ರಿಂದ 30 ಕ್ಷೇತ್ರಗಳು, ಇವುಗಳ ಮೇಲೆ ಹೆಚ್ಚು ಶ್ರಮ ಹಾಕಬೇಕಿದೆ. C ಮತ್ತೆ D ಕ್ಷೇತ್ರಗಳು ಕಾಂಗ್ರೆಸ್, ಜೆಡಿಎಸ್‌ನ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ ಹೆಚ್ಚು ಟಾರ್ಗೆಟ್ ಮಾಡಿ ತಂತ್ರಗಾರಿಕೆ ಮಾಡಿದರೆ. ಬಹುಮತಕ್ಕೆ ಬೇಕಾದ ಸೀಟುಗಳು ಬರಬಹುದೆಂಬ ಲೆಕ್ಕಾಚಾರ ನಮ್ಮದಾಗಿದೆ. ಈ ಲೆಕ್ಕಾಚಾರದ ಮೇಲೆ ಇಂದು ನಮ್ಮ ನಾಯಕರು ಹಲವು ತಂತ್ರಗಾರಿಕೆಯನ್ನ ಮಾಡಿದ್ದಾರೆ ಅಂತ ತಿಳಿಸಿದ್ದಾರೆ.
ದಾವಣಗೆರೆಯ ಸಿದ್ದರಾಮೋತ್ಸವಕ್ಕೆ ಬಿಜೆಪಿ ಕೌಂಟರ್
ದಾವಣಗೆರೆಯಲ್ಲಿಯೇ ಕೇಸರಿ ಮಹಾಸಂಗಮ ಯಾತ್ರೆಗೆ ಸಿದ್ಧತೆ ನಡೆಯುತ್ತಿದೆ. ಕೇಸರಿಯ ಮಹಾ ಸಂಗಮ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 18, 19 ಅಥವಾ 20 ರಂದು ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ನಾಲ್ಕೂ ಭಾಗಗಳಿಂದ ಬಂದು ರಥಯಾತ್ರೆ ಇಲ್ಲಿ ಕೊನೆಯಾಗುತ್ತದೆ. ಈ ಯಾತ್ರೆಗೆ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ ಅಂತ ತಿಳಿಸಿದ್ದಾರೆ.