Asianet Suvarna News Asianet Suvarna News

ಕಾಂಗ್ರೆಸ್‌ ಮುಖಂಡ ರಾಮುಲು ಮನೆಗೆ ಕರಡಿ ಸಂಗಣ್ಣ ಭೇಟಿ: ಕಾಂಗ್ರೆಸ್ ಸೇರ್ತಾರಾ ಬಿಜೆಪಿ ಸಂಸದ?

ಮಾಜಿ ಸಂಸದ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಚ್.ಜಿ.ರಾಮುಲು ಅವರ ಗಂಗಾವತಿಯ ನಗರದಲ್ಲಿರುವ ನಿವಾಸಕ್ಕೆ ಬಿಜೆಪಿ ಕರಡಿ ಸಂಗಣ್ಣ ಕರಡಿ ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಗೌಪ್ಯವಾಗಿ ಕೆಲ ಕಾಲ‌ ಮಾತುಕತೆ ನಡೆಸಿದ್ದಾರೆ.

bjp mp karadi sanganna visits hg ramulus residence at gangavati gvd
Author
First Published Jul 8, 2023, 8:43 AM IST

ಕೊಪ್ಪಳ (ಜು.08): ಮಾಜಿ ಸಂಸದ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಚ್.ಜಿ.ರಾಮುಲು ಅವರ ಗಂಗಾವತಿಯ ನಗರದಲ್ಲಿರುವ ನಿವಾಸಕ್ಕೆ ಬಿಜೆಪಿ ಕರಡಿ ಸಂಗಣ್ಣ ಕರಡಿ ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಗೌಪ್ಯವಾಗಿ ಕೆಲ ಕಾಲ‌ ಮಾತುಕತೆ ನಡೆಸಿದ್ದಾರೆ. ಸಂಸದರ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಎಚ್‌.ಜಿ. ರಾಮುಲು ಅವರ ಪುತ್ರ ಹಾಗೂ ಕಾಂಗ್ರೆಸ್‌ ಮುಖಂಡ ಎಚ್‌.ಆರ್‌. ಶ್ರೀನಾಥ್‌, ‘ಸಂಗಣ್ಣ ಕರಡಿ ತಂದೆ ಬಳಿ ಗೌಪ್ಯವಾಗಿ ಚರ್ಚೆ ನಡೆಸಿದ್ದು, ಯಾವ ವಿಷಯದ ಬಗ್ಗೆ ಮಾತನಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಒಂದು ವೇಳೆ ಅವರು ಕಾಂಗ್ರೆಸ್‌ಗೆ ಬರುವುದಾದರೆ ಸ್ವಾಗತ’ ಎಂದರು. ಅಲ್ಲದೇ ಶ್ರೀನಾಥ್ ಹೇಳಿಕೆ ಬೆನ್ನಲ್ಲೇ ಮಹತ್ವ ಪಡೆದಿರುವ ಈ ಭೇಟಿಯಲ್ಲಿ  ಕಾಂಗ್ರೆಸ್ ಸೇರ್ಪಡೆ ಬಗ್ಗೆ ಚರ್ಚೆ ನಡೆದಿರೋ ಸಾಧ್ಯತೆಯಿದೆ. ಇನ್ನು ಸತತ ಎರಡು ಬಾರಿ ಸಂಸದರಾಗಿರುವ ಸಂಗಣ್ಣ ಅವರು ಮೂರನೇ ಬಾರಿಗೆ ಟಿಕೆಟ್‌ ಪಡೆಯುವ ಪ್ರಯತ್ನದಲ್ಲಿದ್ದಾರೆ. 

ಸಾಮೂಹಿಕ ವಿವಾಹದಿಂದ ನೆಮ್ಮದಿಯ ಬದುಕು: ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಬದುಕು ಕಂಡುಕೊಳ್ಳಬಹುದು. ಜೀವನದಲ್ಲಿ ಸರಳತೆ ಪಾಲಿಸಿದಾಗ ಮಾತ್ರ ಜೀವನದಲ್ಲಿ ಸುಖ, ಶಾಂತಿ,ನೆಮ್ಮದಿ ಕಾಣಲು ಸಾಧ್ಯ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು. ಪಟ್ಟಣದ ತಾವರಗೇರಾ ರಸ್ತೆಯಲ್ಲಿರುವ ಮಹಾಂತ ಸಂಗಮ ಲೇಔಟ್‌ ಸಮಾಜ ಸೇವಕ ರವಿಕುಮಾರ ಹಿರೇಮಠ ಜನ್ಮದಿನದ ಅಂಗವಾಗಿ ನಡೆದ 11ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಹಿರೇಕೋಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಜೈನಮುನಿಯ ಬರ್ಬರ ಹತ್ಯೆ: ಕೊಲೆಯ ರಹಸ್ಯ ಬಯಲು

ಕುಷ್ಟಗಿ ಪಟ್ಟಣದ ರವಿಕುಮಾರ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದ್ದು,ಸಮಾಜದಲ್ಲಿ ಆರ್ಥಿಕ ಹೊರೆಯಿಂದ ಬಳಲುತ್ತಿರುವರ ಹಿತ ಕಾಯಲು ಹಾಗೂ ನೆಮ್ಮದಿ ಜೀವನ ನಡೆಸಲು ಸಾಮೂಹಿಕ ವಿವಾಹಗಳು ಹೆಚ್ಚಾಗಿ ನಡೆಯಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಸಾಮೂಹಿಕ ವಿವಾಹಗಳ ಸಂಖ್ಯೆ ಕ್ಷೀಣಿಸುತ್ತಿವೆ.ಹೀಗಾಗಿ,ಬಡ ಹಾಗೂ ಕೂಲಿಕಾರರಿಗೆ ವಿವಾಹಗಳು ಭಾರವಾಗಿ ಪರಿಣಮಿಸುತ್ತಿವೆ.ಆದ್ದರಿಂದ ಸಮಾಜದಲ್ಲಿನ ಉಳ್ಳವರು ಸಾಮೂಹಿಕ ವಿವಾಹ ಏರ್ಪಡಿಸುವ ಮೂಲಕ ಶ್ರೀಸಾಮಾನ್ಯರ ಕಲ್ಯಾಣಕ್ಕೆ ನೆರವಾಗಬೇಕು ಎಂದರು.

ಅಭಿವೃದ್ಧಿ, ಸಾಮಾಜಿಕ ನ್ಯಾಯದ ಬಜೆಟ್‌: ಸಚಿವ ಜಮೀರ್‌ ಅಹಮದ್‌ ಬಣ್ಣನೆ

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ,ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಮಾಡಿಕೊಳ್ಳುವದು ಕಬ್ಬಿಣದ ಕಡಲೆ ಇದ್ದಂತೆ. ಇಂತಹ ಕುಟುಂಬಗಳಿಗೆ ಪಟ್ಟಣದ ರವಿಕುಮಾರ ಹಿರೇಮಠ ಸಾಮೂಹಿಕ ವಿವಾಹ ಮಾಡಿಕೊಡುತ್ತಿರುವದು ಒಳ್ಳೆಯ ಕಾರ್ಯವಾಗಿದೆ ಎಂದರು. ಸಮಾಜದಲ್ಲಿ ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ, ಶ್ರೀಮಂತ, ಮೇಲು,ಕೀಳು ಎನ್ನದೇ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಎಲ್ಲ ಸತ್ಕಾರ್ಯಗಳಿಗೆ ಜಯ ಖಂಡಿತ.ಇಂತಹ ಸಾಮಾಜಿಕ ಕಳಕಳಿಯಿಂದ ನಡೆಯುವ ಧರ್ಮ ಕಾರ್ಯಗಳು ಭಗವಂತನಿಗೆ ಇಷ್ಟ.ಜತೆಗೆ ಸಮಾಜವನ್ನು ಈಗಲೂ ಕಾಡುತ್ತಿರುವ ವರದಕ್ಷಿಣೆ ನಿರ್ಮೂಲನೆಗೆ ಎಲ್ಲರೂ ಸಂಕಲ್ಪ ತೊಡಬೇಕು ಎಂದರು.

Follow Us:
Download App:
  • android
  • ios