ಬೆಲೆ ಏರಿಕೆ ಕಾಂಗ್ರೆಸ್‌ ಸರ್ಕಾರದ 6ನೇ ಗ್ಯಾರಂಟಿ: ಸಿ.ಟಿ.ರವಿ

ಮುದ್ರಾಂಕ ಶುಲ್ಕ ಹೆಚ್ಚಳವಾಯ್ತು, ಆಲ್ಕೋ ಹಾಲ್ ಆಯಿತು, ಪೆಟ್ರೋಲ್, ಡೀಸೆಲ್ ದರ ಏರಿಕೆ ಆಯಿತು, ವಿದ್ಯುತ್ ದರವೂ ಏರಿಕೆ ಆಯಿತು, ಇದೀಗ ಹಾಲಿನ ದರ ಏರಿಕೆ ಸರದಿ. ಬೆಲೆ ಏರಿಕೆ ಕಾಂಗ್ರೆಸ್‌ ಸರ್ಕಾರದ 6 ನೇ ಗ್ಯಾರಂಟಿಯಾಗಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಟೀಕಿಸಿದ್ದಾರೆ. 

bjp mlc ct ravi slams on congress govt at kalaburagi gvd

ಕಲಬುರಗಿ (ಜೂ.26): ಮುದ್ರಾಂಕ ಶುಲ್ಕ ಹೆಚ್ಚಳವಾಯ್ತು, ಆಲ್ಕೋ ಹಾಲ್ ಆಯಿತು, ಪೆಟ್ರೋಲ್, ಡೀಸೆಲ್ ದರ ಏರಿಕೆ ಆಯಿತು, ವಿದ್ಯುತ್ ದರವೂ ಏರಿಕೆ ಆಯಿತು, ಇದೀಗ ಹಾಲಿನ ದರ ಏರಿಕೆ ಸರದಿ. ಬೆಲೆ ಏರಿಕೆ ಕಾಂಗ್ರೆಸ್‌ ಸರ್ಕಾರದ 6 ನೇ ಗ್ಯಾರಂಟಿಯಾಗಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಟೀಕಿಸಿದ್ದಾರೆ. ಸರ್ಕಾರ ಇಂಧನ ಬೆಲೆಗಳನ್ನು ಹೆಚ್ಚಿಸಿದೆ. ಬಸ್‌ ದರವೂ ಶೀಘ್ರ ಹೆಚ್ಚಳವಾಗೋದರಲ್ಲಿದೆ, ಅದಕ್ಕೂ ಮೊದಲೇ ಇದೀಗ ರಾಜ್ಯದಲ್ಲಿ ಹಾಲಿನ ದರ ಏರಿಕೆಯಾಗಿದೆ. ಇನ್ನೇನು ಇದೆ ಏರಿಸೋದಕ್ಕೆ ಸತ್ತ ಹೆಣದ ಮೇಲೂ ತೆರಿಗೆ ಹಾಕಿ. ಸತ್ತ ಹೆಣ ಸುಡಲು ಇಷ್ಟು ತೆರಿಗೆ ಅಂತ ಹಾಕಿದ್ರೆ ಮುಗೀತು ಎಂದು ರವಿ ಆಕ್ರೋಶ ಹೊರಹಾಕಿದರು. 

ಈ ಸರ್ಕಾರಕ್ಕೆ ಮತ ಹಾಕಿದ್ದಕ್ಕೆ ರಾಜ್ಯದ ಜನ ಹಿಡಿ ಶಾಪ್ ಹಾಕ್ತಿದ್ದಾರೆ. ಹಿಂದೆ ಕೇಂದ್ರ 1 ರು. ಇಂಧನ ದರಹ ಹೆಚ್ಚಿಸಿದಾಗ ಇದೇ ಕಾಂಗ್ರೆಸ್ಸಿಗರು ಬೊಬ್ಬೆ ಹಾಕಿದ್ದರು. ಈಗ ಅವರೇ ದರ ಹೆಚ್ಚಳ ಮಾಡಿದ್ದಾರೆ. ನಾವು ಇವರಿಗೆ ಏನೆಂದು ಹೇಳಬೇಕು. ಅಭಿವೃದ್ಧಿ ಅನುದಾನಕ್ಕಾಗಿ ದರ ಹೆಚ್ಚಳ ಎಂದು ಹೇಳುತ್ತಿದ್ದಾರೆ. ರಾಜ್ಯದ ಜನ ಎಲ್ಲ ಗಮನಿಸುತ್ತಿದ್ದಾರೆಂದರು. ಸಿಎಂ ಸಿದ್ದರಾಮಯ್ಯ ಮಾತೆತ್ತಿದರೆ ನುಡಿದಂತೆ ನಡೆದಿದ್ದೇವೆಂದು ಹೇಳುತ್ತಿದ್ದಾರೆ. ಇವ್ರು ಬೆಲೆ ಹೆಚ್ಚಳದ ಬಗ್ಗೆ ನುಡಿದಿದ್ದರಾ? ಹಾಗಾದ್ರೆ ಯಾಕೆ ಈಗ ಆ ಕೆಲಸ ಮಾಡುತ್ತಿದ್ದಾರೆ? ಜನ ಇವರಿಗೆ ಪಾಠ ಕಲಿಸೋದು ನಿಶ್ಚಿತ ಎಂದರು.

ಡಿಸಿಎಂ ದಂಗಲ್ ಕಾಂಗ್ರೆಸ್ ಪತನಕ್ಕೂ ಕಾರಣವಾಗಬಹುದು: ಜಾತಿವಾರು ಡಿಸಿಎಂ ಕೂಗು ಸುಮ್ಮನೇ ಬರುತ್ತಿರುವ ಕೂಗಲ್ಲ. ಇದರ ಹಿಂದೆ ರಾಜಕಾರಣ ಇದೆ, ಕಾಂಗ್ರೆಸ್ ಶಾಸಕರ ಅಸಹನೆ ಇದೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಆಂತರಿಕ ಕಲಹದಿಂದ ಸರ್ಕಾರ ಬೀಳಬಹುದು. ಈಗಾಗಲೇ ಬಿಆರ್‌ ಪಾಟೀಲರು, ನಾಡಗೌಡ ಅವರು ಹೇಳಿಕೆ ಕೊಟ್ಟಿದ್ದಿದೆ. ಶಾಸಕರ ಅಸಹನೆಯ ಕಟ್ಟೆ ಬೇಗ ಒಡೆದು ಹೋಗುತ್ತೆ ಅನ್ನಿಸುತ್ತಿದೆ ಎಂದರು. ಸರಕಾರ ಜನರ ಮತ್ತು ಶಾಸಕರ ವಿಶ್ವಾಸ ಕಳೆದುಕೊಂಡಾಗ ಸಂಖ್ಯಾಬಲ ಮುಖ್ಯವಾಗೋದಿಲ್ಲ. ಈಗಾಗಲೇ ಆ ಹಂತ ತಲುಪಿದತಾಗಿದೆ. ಕಾಂಗ್ರೆಸ್ ನ ಅತೃಪ್ತ ಶಾಸಕರು ಬರೀ ಸಭೆ ಮಾತ್ರವಲ್ಲ, ಮುಂಬೈ ,ದೆಹಲಿ ಹೈದ್ರಾಬಾದ ಗೆ ಹೋಗಿ ಬಂದಿದಾರೆಂಬ ಮಾಹಿತಿ ಇದೆ ಎಂದರು.

ನೀವೇನು ಇಲ್ಲಿ ಪಿಕ್‌ನಿಕ್‌ ಬಂದಿರೇನ್ರಿ: ಅಧಿಕಾರಿಗಳ ಬೆವರಿಳಿಸಿದ ಸಚಿವ ಸಂತೋಷ್‌ ಲಾಡ್‌

ಈ ಸರಕಾರ ಬೀಳಿಸಲು ನಾವು ಯೋಚನೆ ಮಾಡ್ತಿಲ್ಲ. ಕಾಂಗ್ರೆಸ್‌ನಲ್ಲಿ ಕೆಲವರಿಗೆ ಮೃಷ್ಟಾನ್ನ ಭೋಜನ, ಕೆಲವರಿಗೆ ಉಪವಾಸ ಎಂಬಂತಾಗಿದೆ. ಗ್ಯಾರೆಂಟಿಯಿಂದಾಗಿ ಹಣ ಇಲ್ಲ ಅಂತ ನಮಗೆ ಹೇಳ್ತಿರಿ, ಕೆಲವರು ಮಾತ್ರ ಲೂಟಿ ಮಾಡ್ತಾನೆ ಇದ್ದೀರಿ ಎಂದು ಕಾಂಗ್ರೆಸ್‌ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆಂದು ರವಿ ಹೇಳಿದರು. 13 ತಿಂಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಹಗರಣಗಳಲ್ಲೇ ಮುಳುಗಿದೆ. ನಮಗೆ 40 ಪರ್ಸೆಂಟ್‌ ಅಂತಿದ್ದವರು ನೂರಕ್ಕೆ ನೂರು ಲೂಟಿ ಮಾಡುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ಹಗರಣದ ಹಣ ಕಾಂಗ್ರೆಸ್ ಚುನಾವಣೆಗೆ ಬಳಕೆಯಾಗಿರೋ ಶಂಕೆಯಿದೆ. ಇದು ಪರಿಶಿಷ್ಠ ಜಾತಿ ಪರಿಶಿಷ್ಟ ವರ್ಗಕ್ಕೆ ಮಾಡಿರುವ ಅನ್ಯಾಯ. ಈ ಬಗ್ಗೆ ವಿಧಾನಸೌಧ ಒಳಗೂ ಹೊರಗೂ ನಾವು ಹೋರಾಟ ಮಾಡುತ್ತೇವೆ ಎಂದರು.

Latest Videos
Follow Us:
Download App:
  • android
  • ios