Asianet Suvarna News Asianet Suvarna News

ಯಾವ ಕಾರಣಕ್ಕೂ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಹೋಗಲ್ಲ: ಈಶ್ವರಪ್ಪ

ಈ ಹಿಂದೆ ಸೂರ್ಯಚಂದ್ರ ಇರುವವರೆಗೆ ಕಾಂಗ್ರೆಸ್‌ ಬಿಟ್ಟ17 ಶಾಸಕರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಇದೇ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರನ್ನು ಸೆಳೆಯಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರ ಪ್ರಯತ್ನ ಫಲಿಸುವುದಿಲ್ಲ ಎಂದ ಕೆ.ಎಸ್‌.ಈಶ್ವರಪ್ಪ 

BJP MLAs Not Go to Congress Says KS Eshwarappa grg
Author
First Published Aug 27, 2023, 1:00 AM IST

ಶಿವಮೊಗ್ಗ(ಆ.27):  ಬಿಜೆಪಿಯ ಶಾಸಕರಾರ‍ಯರೂ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಬಿಜೆಪಿಯನ್ನು ಖಾಲಿ ಮಾಡುತ್ತಾರೆ ಎಂಬ ಕಾಂಗ್ರೆಸ್‌ ಹೇಳಿಕೆಗೆ ಜನ ಲೋಕಸಭಾ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಹೇಳಿದರು. 

ಈ ಹಿಂದೆ ಸೂರ್ಯಚಂದ್ರ ಇರುವವರೆಗೆ ಕಾಂಗ್ರೆಸ್‌ ಬಿಟ್ಟ17 ಶಾಸಕರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ ಎಂದು ಇದೇ ಸಿದ್ದರಾಮಯ್ಯ ಹೇಳಿದ್ದರು. ಈಗ ಅವರನ್ನು ಸೆಳೆಯಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅವರ ಪ್ರಯತ್ನ ಫಲಿಸುವುದಿಲ್ಲ ಎಂದರು.

ಶಿವಮೊಗ್ಗ: ಸದ್ಭಾವನಾ ಯಾತ್ರೆಗೆ ಸಂಸದ ಬಿ.ವೈ.ರಾಘವೆಂದ್ರ ಚಾಲನೆ

ಹಾವೇರಿಯಿಂದ ಕಾಂತೇಶ್‌: 

ಲೋಕಸಭಾ ಚುನಾವಣೆಗೆ ಹಾವೇರಿಯಿಂದ ಸ್ಪರ್ಧೆ ಮಾಡುವ ಬಗ್ಗೆ ಪುತ್ರ ಕಾಂತೇಶ್‌ ಇಚ್ಚೆ ವ್ಯಕ್ತಪಡಿಸಿದ್ದು, ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾನೆ. ಮಠಾಧೀಶರೆಲ್ಲರೂ ಆಶೀರ್ವಾದ ಮಾಡುವುದಾಗಿ ಹೇಳಿದ್ದಾರೆ. ಪಕ್ಷ ಟಿಕೆಟ್‌ ನೀಡಿದರೆ ಕಾಂತೇಶ್‌ ಸ್ಪರ್ಧೆ ಖಚಿತ. ಇನ್ನು, ಕಾಂತೇಶ್‌ ಸ್ಪರ್ಧೆಗೆ ಬಿ.ಸಿ.ಪಾಟೀಲ್‌ ವಿರೋಧ ಮಾಡುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಹಾಗೇನಾದರೂ ಇದ್ದರೆ ಅವರ ಜತೆ ಚರ್ಚಿಸುವೆ ಎಂದರು.

Follow Us:
Download App:
  • android
  • ios