ಶಿವಮೊಗ್ಗ: ಸದ್ಭಾವನಾ ಯಾತ್ರೆಗೆ ಸಂಸದ ಬಿ.ವೈ.ರಾಘವೆಂದ್ರ ಚಾಲನೆ
ಹೊಳೆಹೊನ್ನೂರಿನಲ್ಲಿ ಗಾಂಧಿ ಪ್ರತಿಮೆ ಧ್ವಂಸ ಹಿನ್ನೆಲೆ ಬಿಜೆಪಿ ಯುವ ಮೋರ್ಚಾದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶಿವಮೊಗ್ಗದ ಗಾಂಧಿಪಾರ್ಕ್ನಿಂದ ಹೊಳೆಹೊನ್ನೂರಿನವರೆಗೆ ಸದ್ಭಾವನಾ ಯಾತ್ರೆಗೆ ಸಂಸದ ಬಿ.ವೈ. ರಾಘವೇಂದ್ರ ಚಾಲನೆ ನೀಡಿದರು.
ಶಿವಮೊಗ್ಗ(ಆ.26) : ಹೊಳೆಹೊನ್ನೂರಿನಲ್ಲಿ ಗಾಂಧಿ ಪ್ರತಿಮೆ ಧ್ವಂಸ ಹಿನ್ನೆಲೆ ಬಿಜೆಪಿ ಯುವ ಮೋರ್ಚಾದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶಿವಮೊಗ್ಗದ ಗಾಂಧಿಪಾರ್ಕ್ನಿಂದ ಹೊಳೆಹೊನ್ನೂರಿನವರೆಗೆ ಸದ್ಭಾವನಾ ಯಾತ್ರೆಗೆ ಸಂಸದ ಬಿ.ವೈ. ರಾಘವೇಂದ್ರ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಳೆಹೊನ್ನೂರಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯ ಪ್ರತಿಮೆಯನ್ನು ನಾಶ ಮಾಡಿದವರು ದುಷ್ಟರು. ಸರ್ಕಾರ ಇಂತಹ ಘಟನೆಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.
ಚಂದ್ರಯಾನ ಯಶಸ್ಸಿನ ಹಿಂದೆ ಪ್ರಧಾನಿ ಮೋದಿ ಪ್ರಬಲ ಸ್ಫೂರ್ತಿ: ಸಂಸದ ರಾಘವೆಂದ್ರ
ಈ ಘಟನೆ ಖಂಡಿಸಿ ಬಿಜೆಪಿ ಯುವಮೋರ್ಚಾ ಶಿವಮೊಗ್ಗದ ಗಾಂಧಿ ಪಾರ್ಕಿನಿಂದ ಹೊಳೆಹೊನ್ನೂರುವರೆಗೆ ಪಾದಯಾತ್ರೆ ಮಾಡಿದೆ. ಗಾಂಧೀಜಿಯವರ ಆದರ್ಶಗಳು ಅನುಕರಣೀಯ. 1927ರಲ್ಲಿ ಶಿವಮೊಗ್ಗಕ್ಕೆ ಗಾಂಧೀಜಿಯವರು ಬಂದಿದ್ದರು ಎಂಬುದೇ ಒಂದು ಹೆಮ್ಮೆ. ಶಿಕಾರಿಪುರದ ಈಸೂರಿನ ಹೋರಾಟಕ್ಕೂ ಅವರು ಶಕ್ತಿಯಾಗಿದ್ದರು. ಇಂತಹ ವ್ಯಕ್ತಿಯ ಪ್ರತಿಮೆಯನ್ನು ಒಡೆದಿರುವುದು ಖಂಡನೀಯ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಚಂದ್ರಯಾನ ಯಶಸ್ವಿಯಾಗಿದೆ. ಭಾರತದ ಪ್ರಧಾನ ಮಂತ್ರಿ ಮೋದಿಯವರು ತಮ್ಮ ಎಲ್ಲಾ ಕೆಲಸಗಳ ಒತ್ತಡದ ನಡುವೆಯೂ ಬೆಂಗಳೂರಿಗೆ ಬಂದು ವಿಜ್ಞಾನಿಗಳಿಗೆ ಪ್ರಶಂಸೆ ಮಾಡಿದ್ದಾರೆ. ಈ ಹಿಂದೆಯೂ ಕೂಡ ಅವರು ಚಂದ್ರಯಾನ 2 ಫೇಲ್ಯೂರ್ ಆದಾಗ ವಿಜ್ಞಾನಿಗಳಲ್ಲಿ ಶಕ್ತಿಯನ್ನು, ಭರವಸೆಯನ್ನು ತುಂಬಿದ್ದರು. ಅದರ ಪ್ರತಿಫಲವೇ ಈಗ ಚಂದ್ರಯಾನ-3 ಯಶಸ್ವಿಗೆ ಕಾರಣ. ಈಗ ಉಪಗ್ರಹ ಹಾರಿದ ಜಾಗಕ್ಕೆ ಶಿವಶಕ್ತಿ ಎಂಬ ಹೆಸರನ್ನೂ ಪ್ರಧಾನಿಯವರು ಘೋಷಿಸಿದ್ದಾರೆ. ಹಾಗೆಯೇ ಆ ದಿನವನ್ನು ಕೂಡ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದ್ದಾರೆ ಎಂದರು.
ಇಂದಿನಿಂದ ಕುಂಸಿ, ಅರಸಾಳು ನಿಲ್ದಾಣಗಳಲ್ಲಿ 2 ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ: ಬಿ.ವೈ. ರಾಘವೇಂದ್ರ