ಬಿಜೆಪಿಯ ಹಲವು ಹಾಲಿ ಶಾಸಕರೇ ಕಾಂಗ್ರೆಸ್‌ ಸೇರಲು ‘ಅರ್ಜಿ’ ಹಾಕಿದ್ದಾರೆ. ಈ ಹಿಂದೆ ಬಿಜೆಪಿಗೆ ವಲಸೆ ಹೋದವರಲ್ಲೂ ಕೆಲವರು ಕಾಂಗ್ರೆಸ್‌ಗೆ ಮರಳಲು ಇಚ್ಛಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ಬೆಂಗಳೂರು (ನ.30) : ‘ಬಿಜೆಪಿಯ ಹಲವು ಹಾಲಿ ಶಾಸಕರೇ ಕಾಂಗ್ರೆಸ್‌ ಸೇರಲು ‘ಅರ್ಜಿ’ ಹಾಕಿದ್ದಾರೆ. ಈ ಹಿಂದೆ ಬಿಜೆಪಿಗೆ ವಲಸೆ ಹೋದವರಲ್ಲೂ ಕೆಲವರು ಕಾಂಗ್ರೆಸ್‌ಗೆ ಮರಳಲು ಇಚ್ಛಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್‌ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಪಕ್ಷ ಸೇರಲು ಬಿಜೆಪಿಯ ಹಲವಾರು ಮಂದಿ ಕಾಯುತ್ತಿದ್ದಾರೆ. ಇದರಲ್ಲಿ ಹಾಲಿ ಶಾಸಕರೂ ಇದ್ದಾರೆ. ಕಾಂಗ್ರೆಸ್‌ನಿಂದ ವಲಸೆ ಹೋಗಿದ್ದವರೂ ವಾಪಸ್‌ ಬರಲು ಸಿದ್ಧರಿದ್ದಾರೆ. ಆದರೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಒಂದು ನಿಯಮ ಇದೆ. ಹೈಕಮಾಂಡ್‌ ಜೊತೆ ಚರ್ಚಿಸಬೇಕಿದೆ. ಚರ್ಚೆ ನಡೆಸಿ ನಮ್ಮ ಪಕ್ಷದ ನಾಯಕರು ನಿರ್ಧಾರ ಮಾಡುತ್ತಾರೆ’ ಎಂದರು.

ಕಾರ್ಖಾನೆಗಳಿಗೆ ಭಾರಿ ಸಾಲ: ಡಿಸಿಸಿ ದಿವಾಳಿ ಅಂಚಲ್ಲಿ, ಆತಂಕ

‘ಕಾಂಗ್ರೆಸ್‌ನ ಹಲವರು ಬಿಜೆಪಿಗೆ ಹೋಗಲು ಸಿದ್ಧರಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರಲ್ಲಾ?’ ಎಂಬ ಪ್ರಶ್ನೆಗೆ, ‘ಬಿಜೆಪಿ ಮುಳುಗುವ ಹಡಗು. ಬಿಜೆಪಿಯವರ ಸಮೀಕ್ಷೆಯಲ್ಲೇ ಅದು ಮೂರನೇ ಸ್ಥಾನಕ್ಕೆ ಹೋಗಿದೆ. ಬಿಜೆಪಿಯವರ ಅಧಿಕಾರಾವಧಿಯಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ರಾಜ್ಯ ನಂ.1 ಸ್ಥಾನಕ್ಕೇರಿದೆ. ಬಿಜೆಪಿ ದುರಾಡಳಿತದಿಂದ ಜನ ರೋಸಿಹೋಗಿದ್ದು ಮುಂದಿನ ಚುನಾವಣೆಯಲ್ಲಿ ಮನೆಗೆ ಕಳುಹಿಸುತ್ತಾರೆ. ಇದರಿಂದ ಆತಂಕಗೊಂಡಿರುವ ಬಿಜೆಪಿಯ ಅನೇಕರು ಪಕ್ಷ ತೊರೆಯಲು ಸಿದ್ಧರಾಗಿದ್ದಾರೆ’ ಎಂದರು. ಇದರಿಂದಾಗಿ ರೌಡಿಗಳು, ಸಮಾಜಘಾತಕ ಶಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಆ ಪಕ್ಷ ಪ್ರಯತ್ನಿಸುತ್ತಿದೆ, ಹೀಗಿರುವಾಗ ಆ ಪಕ್ಷಕ್ಕೆ ಯಾರು ತಾನೆ ಹೋಗುತ್ತಾರೆ ಎಂದು ಖಂಡ್ರೆ ಪ್ರಶ್ನಿಸಿದ್ದಾರೆ.

ವೀರಶೈವ ಲಿಂಗಾಯಿತ ಮಠಗಳ ಕೊಡುಗೆ ಅಪಾರ; ಈಶ್ವರ್ ಖಂಡ್ರೆ