ವೀರಶೈವ ಲಿಂಗಾಯಿತ ಮಠಗಳ ಕೊಡುಗೆ ಅಪಾರ; ಈಶ್ವರ್ ಖಂಡ್ರೆ
- ವೀರಶೈವ ಲಿಂಗಾಯಿತ ಮಠಗಳ ಕೊಡುಗೆ ಅಪಾರ
- ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ
- ಶಿಕ್ಷಣದ ಗುರಿ ಸರ್ಟಿಫಿಕೇಟ್ ಅಲ್ಲ: ಸಿದ್ಧಲಿಂಗ ಶ್ರೀ
ತುಮಕೂರು (ಸೆ.12): ರಾಜ್ಯ ಶಿಕ್ಷಣ, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಮುಂದುವರೆದಿದ್ದರೆ ಅದಕ್ಕೆ ಕರ್ನಾಟಕದಲ್ಲಿರುವ ವೀರಶೈವ ಲಿಂಗಾಯಿತ ಮಠ ಮಾನ್ಯಗಳ ಕೊಡುಗೆ ಅಪಾರವಾಗಿದೆ ಎಂದು ವೀರಶೈವ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ನಗರದ ಎಸ್‌ಐಟಿಯ ಬಿರ್ಲಾ ಸಭಾಂಗಣದಲ್ಲಿ ಭಾನುವಾರ ವೀರಶೈವ, ಲಿಂಗಾಯಿತ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
Hubli Riots: ಬಿಜೆಪಿಯೇ ಇಂಥಹ ಗಲಭೆಗಳಿಗೆ ಪ್ರಚೋದನೆ ನೀಡುತ್ತಿದೆ: ಈಶ್ವರ್ ಖಂಡ್ರೆ
ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಜಿಲ್ಲೆಯಲ್ಲಿ ಹಲವು ವೀರಶೈವ ಮತ್ತು ಲಿಂಗಾಯಿತ ಸೇವಾ ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ಎಲ್ಲಾ ಸಂಸ್ಥೆಗಳು ವೀರಶೈವ,ಲಿಂಗಾಯಿತ ಮಹಾಸಭಾದ ಹೆಸರಿನಲ್ಲಿ ಒಂದು ವೇದಿಕೆಗೆ ಬಂದರೆ ಇನ್ನೂ ಹೆಚ್ಚು ಸೇವೆಗಳನ್ನು ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಹರಗುರು ಚರಮೂರ್ತಿಗಳು ಸಲಹೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಎನ್‌ಎಎಲ್‌ನ ವಿಜ್ಞಾನಿ ಡಾ.ಸಿ.ಎಂ.ಮಂಜುನಾಥ್ ಮಾತನಾಡಿ, ಪ್ರತಿಭಾ ಪುರಸ್ಕಾರವೆಂಬುದು ಇನ್ನೊಬ್ಬರಿಗೆ ಸ್ಫ್ಫೂರ್ತಿ ನೀಡುವ ಉದ್ದೇಶದಿಂದ ಮಾಡುವ ಗೌರವ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಎಂಬುದು ಆರಂಭವಷ್ಟೇ, ನಿಮ್ಮ ಮುಂದೆ ಸಾಕಷ್ಟುಅವಕಾಶಗಳಿವೆ.ಅದನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ವೀರಶೈವ ಸಮಾಜದ ಎಂದಿಗೂ ಭೇಧ, ಭಾವ ಮಾಡಿದ ಸಮಾಜವಲ್ಲ. ಹಾಗಾಗಿ ಯುವಜನರು ಸಹ ಎಲ್ಲರನ್ನು ಒಳಗೊಳ್ಳುವ ಕೆಲಸವನ್ನು ಮಾಡಬೇಕು. ಗುಂಪುಗಾರಿಕೆಯಿಂದ ಸಮಾಜದ ಏಳಿಗೆ ಸಾಧ್ಯವಿಲ್ಲ. ಪ್ರತಿಭಾವಂತರು ಉದ್ಯೋಗ ಹುಡುಕದೆ, ತಾವೇ ನಾಲ್ವರಿಗೆ ಉದ್ಯೋಗ ನೀಡುವಂತಹ ಉದ್ದಿಮೆದಾರರಾಗಿ ಬೆಳೆಯಬೇಕೆಂದು ಸಲಹೆ ನೀಡಿದರು. ವಿಟಿಯು ಸಿಂಡಿಕೇಟ್ ಸದಸ್ಯ ಡಾ.ಡಿ.ಎಸ್.ಸುರೇಶಕುಮಾರ್, ಬುದ್ದಿವಂತಿಕೆಯ ಜೊತೆಗೆ, ಸಾಮಾಜಿಕ ಜ್ಞಾನವೂ ಕೂಡ ನಿಮ್ಮ ಜೀವನವನ್ನು ಸುಂದರವಾಗಿ ರೂಪಿಸಬಲ್ಲದು. ಸ್ವಯಂ ಶಿಸ್ತಿನ ಜೊತೆಗೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ, ಪರಿಶ್ರಮ, ಆತ್ಮವಿಶ್ವಾಸ ನಿಮ್ಮನ್ನು ಮೇಲ್ಮುಖವಾಗಿ ತೆಗೆದುಕೊಂಡು ಹೋಗಲಿದೆ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವೆಯ ಶ್ರೀಕಾರದ ವೀರಬಸವ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಪಾಲನೇತ್ರಯ್ಯ, ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಎಚ್.ಎನ್.ದೀಪಕ್, ಎಸ್.ಡಿ.ದಿಲೀಪ್ ಕುಮಾರ್, ಶಶಿಹುಲಿಕುಂಟೆ, ಪಾಲಿಕೆ ಸದಸ್ಯ ಮಹೇಶ್,ಟಿ.ಆರ್.ಸದಾಶಿವಯ್ಯ, ಕೊಪ್ಪಳ್ ನಾಗರಾಜು, ಎಚ್.ಎಂ.ರವೀಶಯ್ಯ, ಬೆಸ್ಕಾಂ ಎಸ್‌ಇ ನಟರಾಜು, ವೀರಶೈವ, ಲಿಂಗಾಯಿತ ಸೇವಾ ಸಮಿತಿಯ ಅಧ್ಯಕ್ಷ ದರ್ಶನಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವೀಶ್, ಕಾರ್ಯಾಧ್ಯಕ್ಷ ಎಂ.ಎನ್.ಗುರುಪ್ರಸಾದ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
PSI Recruitment ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕೈ ಶಾಸಕರು
ಈ ವರ್ಷದಲ್ಲಿಯೇ ವೀರಶೈವ ಮಹಾಸಭಾವತಿಯಿಂದ ಸುಮಾರು 1.20 ಕೋಟಿ ರು. ಗಳನ್ನು ಖರ್ಚು ಮಾಡಿ, ಇಡೀ ರಾಜ್ಯದ ವೀರಶೈವ, ಲಿಂಗಾಯಿತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು.ಈಶ್ವರ ಖಂಡ್ರೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ವೀರಶೈವ ಮಹಾಸಭಾ
ಪ್ರಯತ್ನ, ಪರಿಶ್ರಮ, ವಿಶ್ವಾಸ ಈ ಮೂರು ಅಂಶಗಳು ನಿಮ್ಮನ್ನು ರೂಪಿಸಬಲ್ಲವು. ಶಿಕ್ಷಣದ ಗುರಿ ಸರ್ಟಿಫಿಕೇಟ್ ಅಲ್ಲ, ಚಾರಿತ್ರ ನಿರ್ಮಾಣ ಎಂಬುದನ್ನು ನಾವೆಲ್ಲರೂ ಆರ್ಥ ಮಾಡಿಕೊಳ್ಳಬೇಕು.
ಸಿದ್ದಲಿಂಗ ಸ್ವಾಮೀಜಿ ಸಿದ್ದಗಂಗೆ