‘ನನ್ನ ರುಂಡ ಸಹ ಕಾಂಗ್ರೆಸ್‌ಗೆ ಹೋಗಲ್ಲ. ಇಲ್ಲಿಯೇ ಉಳಿಯೋದು. ಬಿಜೆಪಿಯಲ್ಲೇ ನನ್ನ ರಾಜಕಾರಣ ಎಂಡ್‌’ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ. 

ಅಥಣಿ (ಸೆ.05): ‘ನನ್ನ ರುಂಡ ಸಹ ಕಾಂಗ್ರೆಸ್‌ಗೆ ಹೋಗಲ್ಲ. ಇಲ್ಲಿಯೇ ಉಳಿಯೋದು. ಬಿಜೆಪಿಯಲ್ಲೇ ನನ್ನ ರಾಜಕಾರಣ ಎಂಡ್‌’ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಈಗ ‘ಆಪರೇಷನ್‌ ಹಸ್ತ’ದ ಅಗತ್ಯವಿಲ್ಲ. ವಾಸ್ತವವಾಗಿ ಕಾಂಗ್ರೆಸ್‌ ಪಕ್ಷದ 30 ಶಾಸಕರು ಪ್ರತ್ಯೇಕ ಸಭೆ ನಡೆಸಿ ಬಿಜೆಪಿಗೆ ಬರುತ್ತಿದ್ದಾರೆ ಎಂಬ ಮಾಹಿತಿ ಇತ್ತು. 

ಸಿಎಂಗೆ ಪತ್ರ ಬರೆದು ಬಳಿಕ ಎಲ್ಲರೂ ಬಿಜೆಪಿ ಸೇರುವವರಿದ್ದರು. ಈ ಮಾಹಿತಿ ಅರಿತು ಕಾಂಗ್ರೆಸ್‌ನ ಮಹಾನ್‌ ನಾಯಕರೊಬ್ಬರು ‘ಆಪರೇಷನ್‌ ಹಸ್ತ’ ಎಂಬ ಊಹಾಪೋಹ ಹಬ್ಬಿಸಿದ್ದಾರೆ. ಕಾಂಗ್ರೆಸ್‌ ಶಾಸಕರೇ ಬಿಜೆಪಿಗೆ ಬರುತ್ತಿದ್ದಾರೆ ಎಂಬುದನ್ನು ಅರಿತು ಈಗ ನಾಟಕ ಮಾಡುತ್ತಿದ್ದಾರೆ ಎಂದರು.ಆಪರೇಷನ್‌ ಹಸ್ತ ಮಾಡುವವರು ಮೂರ್ಖರು, ಹೋಗೋರು ಮೂರ್ಖರು. ನಾವು ಆಪರೇಷನ್‌ ಮಾಡಿದಾಗ ಅದಕ್ಕೆ ಅರ್ಥ ಇತ್ತು, ಸರ್ಕಾರಕ್ಕೆ ಬಹುಮತ ಇರಲಿಲ್ಲ, ಅದು ನಮ್ಮ ಸ್ವಂತ ನಿರ್ಣಯ ಎಂದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ ವಾಟಾಳ್ ನಾಗರಾಜ್ ತಮಟೆ ಚಳವಳಿ

ಸಿದ್ದುಗೆ ಜಾರಕಿಹೊಳಿ ಶ್ಲಾಘನೆ: ಸಿದ್ದರಾಮಯ್ಯನವರು ದಕ್ಷ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ, ಸರ್ಕಾರದಲ್ಲಿನ ಆಂತರಿಕ ವ್ಯವಸ್ಥೆಯಿಂದ ಅವರಿಗೆ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸಿಎಂ ಅವರ ಮುಖದಲ್ಲಿ ಮಂದಹಾಸ ಕಾಣುತ್ತಿಲ್ಲ ಎಂದು ಸಿದ್ದರಾಮಯ್ಯನವರನ್ನು ಹೊಗಳಿದರು.

ಎಂಪಿ ಸೀಟಿಗೆ ನಿಲ್ಲಲ್ಲ: ಬರುವ ಲೋಕಸಭಾ ಚುನಾವಣೆಯಲ್ಲಿ ನಾನಾಗಲಿ, ನನ್ನ ಕುಟುಂಬದ ಸದಸ್ಯರಾಗಲಿ ಸ್ಪರ್ಧೆ ಮಾಡುವುದಿಲ್ಲ. ಕಾಂಗ್ರೆಸ್‌ನಿಂದ ಯಾರೇ ಸ್ಪರ್ಧೆ ಮಾಡಿದರೂ, ನನ್ನ ಸಹೋದರ ಸತೀಶ ಜಾರಕಿಹೊಳಿ ಪುತ್ರಿ ಚುನಾವಣೆಗೆ ನಿಂತರೂ ನಾನು ನಮ್ಮ ಪಕ್ಷದ ಪರ ಪ್ರಚಾರ ಮಾಡುತ್ತೇನೆ ಎಂದರು. ಜಗದೀಶ್‌ ಶೆಟ್ಟರ್‌, ಲಕ್ಷ್ಮಣ ಸವದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಪರೋಕ್ಷವಾಗಿ ಆಹ್ವಾನ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅವರೆಲ್ಲ ಸ್ವಯಂಘೋಷಿತ ಲೀಡರ್‌ಗಳು, ತಾವು ತಾವೇ ಮಾಧ್ಯಮಗಳಲ್ಲಿ ಸುದ್ದಿ ಹಾಕಿಸುತ್ತಾರೆ. 

ಕಾವೇರಿ ನೀರು ಬಿಡುವುದು ಕೇಂದ್ರ ಸರ್ಕಾರದ ಕೈಯಲ್ಲಿ ಇದೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ

ನಮಗೇನೂ ಅವರ ಜರೂರತ್‌ ಇಲ್ಲ. ಒಂದು ವೇಳೆ ವರಿಷ್ಠರು ಪಕ್ಷಕ್ಕೆ ತಗೊಂಡ್ರೆ ಸ್ವಾಗತ ಎಂದರು. ಬಿಜೆಪಿಯವರು ಯಾರೂ ನಮಗೆ ಆಹ್ವಾನ ನೀಡಿರಲಿಲ್ಲ. ಕಾಂಗ್ರೆಸ್‌ನಲ್ಲಿ ಆದ ಅನ್ಯಾಯದಿಂದ ಹೊರ ಬಂದಿದ್ದೆವು. ಅದು ಆಪರೇಷನ್‌ ಕಮಲವಲ್ಲ, ನಾವು ಮನಃಪೂರ್ವಕವಾಗಿ ಬಂದು ಯಶಸ್ಸು ಕಂಡಿದ್ದೇವೆ. ಆದರೆ, ಈಗಿನ ಆಪರೇಷನ್‌ ಹಸ್ತದ ಹೇಳಿಕೆ ಸರ್ಕಾರಕ್ಕೆ ಶೋಭೆ ತರಲ್ಲ ಎಂದು ಹೇಳಿದರು.